ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು
ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1 ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ 2 ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ 3 ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ4 ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ 5
--------------
ಚಿದಾನಂದ ಅವಧೂತರು
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ. ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ. ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1 ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2 ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3 ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4 ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5
--------------
ವಾದಿರಾಜ
ಸಾಧಿಸಿ ನೋಡಿ ಸುಖ ಭೇದಿಸ್ಯನುದಿನ ಬೋಧ ನಿಜವಾದ ಸದೋದಿತ ಗುರು ಙÁ್ಞನ ಧ್ರುವ ಭಾವನೆ ನೆಲೆಗೊಂಡು ನಿಮ್ಮ ಭಕ್ತಿ ನಿಜ ಮಾಡಿ ದೈವ ಪ್ರಗಟಾಗಿ ಒಲಿವದು ನಿಜನೋಡಿ 1 ಅಸ್ತ ಉದಯವಿಲ್ಲದೆ ಸಾಭ್ಯಸ್ತ ನಿಜಗೂಡಿ 2 ಲೇಸು ಲೇಸಾಯಿತು ನೋಡಿ ಭಾಸುತೀಹ್ಯಸುಖ ದಾಸ ಮಹಿಪತಿಗಿದೆ ನೋಡಿ ಗುರು ಮುಖ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನು ಮಾಡಿದರೇನು ಏನು ನೋಡಿದರೇನುದಾನವಾಂತಕ ನಿನ್ನನರಿಯದ ಪಾಪಿ ಪನಾನಾದೇಶವ ತಿರುಗಿ ಯಾತ್ರೆ ಮಾಡಿದರೇನುನಾನಾತೀರ್ಥವ ಮುಳುಗಿ ಸ್ನಾನ ಮಾಡಿದರೇನುನಾನಾಕ್ಷೇತ್ರದಿನಿಂದುದಾನ ಮಾಡಿದರೇನುದೀನರಕ್ಷಕ ನಿನ್ನ ಒಲುಮಿಲ್ಲದವರು 1ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನುಮೌನದಿಂ ಕುರಿತು ಬಲುಜಪ ಮಾಡಿದರೇನುನಾನಾಶಾಸ್ತ್ರವ ಅರ್ಥಮಾಡಿದರೇನುಜಾನಕೀಶನೆ ನಿನ್ನ ದಯವಿಲ್ಲದವರು 2ನಾನಾಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನುನಾನಾಸತ್ಯರ ಮುಖವನಿತ್ಯನೋಡಿದರೇನುಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮಕಾಣದಧಮರು ಈ ಜಗದೊಳಗೆ ಪುಟ್ಟಿ 3
--------------
ರಾಮದಾಸರು
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3
--------------
ಪುರಂದರದಾಸರು