ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ ಮಾಡಿದ್ದೆ ಮಾಡುತ ಮೂಢನಾಗಿ ರೂಢಿವಳಗೆ ತಿರಿಗ್ಯಾಡುವ ಅಜ್ಞಾನಿ ಕೋಡಗನ್ನ ಸಿಂಹ ಮಾಡಿದ ಗುರುವಿರೆ 1 ಆವಾನು ದಯಮಾಡೆ ದೇವನು ವಲಿವನು ಆವನ ನಂಬಲು ದೇವಗಣಾ ಕಾವಲಿಗಳಾಗಿ ಕಾವದು ಅಂತ ಕೋವಿದಾಗ್ರಣಿ ಗುರು ರಘುಪತಿ ದಯವಿರೆ 2 ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು ತಿರುಗುವ ಗುರುಕೃಪೆ ನೆರಳಿರೆ 3
--------------
ಅಸ್ಕಿಹಾಳ ಗೋವಿಂದ
ವೆಂಕಟೇಶನೆ ಬಲ್ಲ ಪರಮ ಪಾತಕೀಯಾ | ಕಿನ್ನೇಶ ಮುನಿದು ಬಂದೇನು ಮಾಡುವನು ಪ ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು | ಅತ್ತವಿತ್ತ ಊರು ಸುತ್ತುತಿರಲು | ಸುತ್ತಯಿದ್ದ ಬಂಧು ಬಳಗದವರು ಕೂಡಿ | ಮುತ್ತಿಕೊಂಡು ಅವಳನೇನು ಮಾಡುವರು 1 ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ | ತಿದ್ದುವಾ ಸರಿಪಾಲು ಲಂಚಕೊಟ್ಟು | ಇದ್ದವನು ಹಗಲಿರಳು ಕದ್ದರೆ ಆ ಊರು | ಎದ್ದು ಹಿಡಿದವರೆಲ್ಲ ಏನು ಮಾಡುವರು2 ತೊತ್ತಿನ ಮೇಲೆ ಒಡೆಯನ ದಯವಿರೆ | ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ | ಕರ್ತು ಶ್ರೀ ವಿಜಯವಿಠ್ಠಲ ವೆಂಕಟೇಶನ | ಚಿತ್ತದಿ ನೀನಿರೆಯನೆವುಂಟೆ3
--------------
ವಿಜಯದಾಸ
ಶ್ರೀಗುರುರಘುಪತಿಏನೇನು ಭಯವಿಲ್ಲ ನಮಗೆಪವಮಾನ ಸೇವಕಗುರುರಘುಪತಿಯ ದಯವಿರೆ ಪಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿಮಾಡಿದ್ದೆ ಮಾಡುತ ಮೂಢನಾಗಿರೂಢಿವಳಗೆ ತಿರಿಗ್ಯಾಡುವ ಅಜ್ಞಾನಿಕೋಡಗನ್ನ ಸಿಂಹ ಮಾಡಿದ ಗುರುವಿರೆ1ಆವಾನು ದಯಮಾಡೆ ದೇವನು ವಲಿವನುಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿಗುರುರಘುಪತಿ ದಯವಿರೆ 2ಕರವೆಂಬೊ ಲೇಖನ ದ್ವಾರದಿಂದ ನಮ್ಮಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವಗುರುಕೃಪೆ ನೆರಳಿರೆ 3
--------------
ಸಿರಿಗೋವಿಂದವಿಠಲ