ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲಿದನಲ್ಲೇನು ಶ್ರೀಹರಿ ಬಲ್ಲಿದನಲ್ಲೇನು ಪ ಬಲ್ಲಿದನಲ್ಲೇನು ಖುಲ್ಲಮನವೆ ತಿಳಿ ಎಲ್ಲ ಲೋಕಗಳ ನಲ್ಲನಾಗಿಹ್ಯನೀತ ಅ.ಪ ಕಡುದಯದಿಂದಿನ್ನು ಪಿಡಿದು ಬಿಡದೆ ಪಾಂಡವರನ್ನು ಪೊಡವಿನೆಲ್ಲ ಒಂದೆ ಕೊಡೆಯಿಂದಾಳಿಸಿದ ಎಡರು ತಾರದಂತೆ ಒಡೆಯ ಮುಕ್ಕುಂದನೀತ 1 ಧೂರ್ತ ಹಿರಣ್ಯಕನ ಕರದಿಂ ಭಕ್ತ ಪ್ರಹ್ಲಾದನ್ನ ಸ್ವಸ್ಥದಿಂದ ದಯವಿತ್ತು ಕಾಯ್ದನಿಗೆ ದಾರು ಸರಿ ಅರ್ತುನೋಡಲೀತ 2 ಉರಿಹಸ್ತ ಪಡೆದವನ ಕ್ಷಣದಿಂ ಉರುವಿದ ಮಾರಮಣ ಭರದಿಂ ತ್ರಿಪುರರ ಹರಿದಿಯರ್ವ್ರತ ಕೆಡಿಸ್ಹರನ ಮೊರೆಯ ಕೇಳಿ ಸುರರ ಸಲಹಿದೀತ 3 ಮೀರಿದ ಅಸುರರನು ತರಿದು ಸಾರುವ ಬಿರುದನ್ನು ಅ ಪಾರ ಶೂರ ದನುಜಾರಿ ಭಕ್ತ ಸಹಕಾರಿ ಶೌರಿ ನಿಜ ಮೂರು ಜಗದಿ ಈತ 4 ಜಡಮತಿ ಮಾನವರ ನುಡಿಗಳು ದೃಢಲ್ಲೆಲೊ ಪೂರ ಪೊಡವಿಗಧೀಶ ನಮ್ಮ ಒಡೆಯ ಶ್ರೀರಾಮನಡಿ ದೃಢದಿ ನಂಬು ಭವತೊಡರ ಕಡಿವನೀತ 5
--------------
ರಾಮದಾಸರು
ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1 ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2 ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3 ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4 ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
--------------
ರಾಮದಾಸರು
ಶಾಮಸುಂದರ ಪೊರೆಯೊ ರಘುರಾಮಾ ಕಾಮಿತ ಫಲವಿತ್ತು ಪ ಸೋಮಧಾಮ ಸುತ್ತಾಮ ಸುರಾರ್ಚಿತ ಕರುಣದಿ ದಯವಿತ್ತು ಅ.ಪ. ತಟಿತ್ಕೋಟಿ ನಿಭ ಹಾಟಕಾಂಬರನೆ ಘಟಿತವಾದ ಈ ಜಟಿಲ ಶರಧಿಯೊಳು ನಟ ನಡುವೆ ಸಿಲುಕಿ ಗುಟಕ ನೀರು ಕುಡಿದ ಈ ಪುಟ [ಟ್ಟ] ಪುರುಷನ ಮೇಲೆ ದೃಷ್ಟಿ ಇಟ್ಟು ನೋಡಿದರೆ ಪಟುಲವೇನೋ ವಟಪತ್ರಶಯನನೆ ನಟವಳಿಯೊಳು ಈ ಭಕುತ ಕಟಕಿಯ ಮಾಡೆ 1 ಚಂಡ ವಿಕ್ರಮ ಕೋದಂಡ ದೀಕ್ಷಾ ಖಂಡ ಮಹಿಮಾರಾಮಾ ದುರಿತವೇಕೋ ಗಂಡ ಕಂಠೀರವನೆ ಡಿಂಗರಿಗಾತಿ ಪ್ರೇಮಾ ಅಂಡಜವಾಹನ ಪಾಂಡವ ಮೂರುತಿ ಕುಂಡಲಗಿರಿಧಾಮಾ 2 ಘನಚರಿತ ಪ್ರಸನ್ನ ದಯಾಂಬುಧಿ ಇನ್ನಾದರೂ ಈ ಚಿಣ್ಣಗೆ ಚೆನ್ನಾಗಿ ದೃಷ್ಟಿಯಿಟ್ಟು ಕೃಪೆಮಾಡು ಸನ್ನುತಿಸುವೆ ಮುನ್ನಾ ಕಣ್ಣೆತ್ತಿ ನೋಡದೆ ಅನ್ನ ದೈªಂಗಳ ಬಿನ್ನವಿಸುವೆ ನಿನ್ನಾ ಮನ್ಮಥಪಿತ ಭೋ ಮಹಾನಿಧಿವಿಠಲ ಅಹರಹದಿ ನಿನ್ನಾ ಚನ್ನಾ 3
--------------
ಮಹಾನಿಥಿವಿಠಲ