ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೌರಿ ಗಜಮುಖನ ಮಾತೆ | ಗುಣಗಣ ಭರಿತೆ ಶೌರಿ ಸಖನಂಗಸಂಗೀ ಸಂಪೂರ್ತೆ ಪ ಶುಭ ತನು ವಾರಿಜನೇತ್ರಳೆ ವೀರಸತಿಯೆ ದಯವಾರಿಧಿ ಪಾಲಿಸು ಅ.ಪ. ತುಂಗ ಮಂಗಳೇ ದೇವಿ | ಕಲಿಗೆ ಭೈರವೀ ರಂಗಾನ ನವವಿಧಿ ಭಕ್ತಿ ಸಂಗ ನೀಡುವಿ ಹಿಂಗದೆ ಪೊರಿಯೆ ತಾಯೇ | ಭಕ್ತ ಸಂಜೀವೆ ತಿಂಗಳ ಮುಖಿವರಗರಿವೆ | ನಮ್ಮ ಶಂಭುವೆ ಭಂಗಬಟ್ಟೇನು ನುಂಗುವ ಭವದೊಳು ಮಂಗಳ ಕರುಣಾಪಾಂಗದಿ ನೋಡೆನ್ನ ಭವ ಭಯ ಗಂಗೆಯ ಧರನಂಘ್ರಿ- ಭೃಂಗಳೆ ಬೋದಯಾಕಂಗಳೆ ಕರುಣಿಸು 1 ಇಂದ್ರಾದಿ ಸುರಗುರುವೆ | ದೇವ ತರುವೆ ಪರಿ ನಿನ್ನ ಬೇಡುವೆ ಕುಂದನೆಣಿಸದಲೆ ಶಿವ ಶಂಕರಿ ಕಾವೆ ಸಂದೇಹ ಕಳಿ ವಿಭುವೆ | ವೀರಜತನುವೆ ನೊಂದವನಾ ಮ್ಯಾಲ್ಹೊಂದಿಸು ಕರುಣವ ಮಂದಸ್ಮಿತೆ ಮುಕುಂದನ ಮನದಲಿ ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು 2 ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ ವಸ್ತುಗಳಿಟ್ಟ ಹಿಮವಂತನ ಬಾಲೆ ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ ಮಸ್ತಕದ ಕಿರೀಟ ವದನೆ ತಾಂಬೂಲೆ ಸಿರಿ ಹಸ್ತಗಳಿಟ್ಟೆನ್ನ ದುಸ್ತರದ ಹಾದಿಗಳಸ್ತಮಮಾಳ್ಪುದು ವಿಸ್ತರ ಮಹಿಮ ಜಯೇಶವಿಠಲ ವಸ್ತುವ ನೀಡಮ್ಮ ಹಸ್ತಿಯ ಗಮನೆ 3
--------------
ಜಯೇಶವಿಠಲ
ಶುಭ ಮಂಗಳಂ ಸುಮಂಗಳಂ ರಘವರಗೆ ದಯಾವಾರಿನಿಧಿ ಮುರುಹರಗೆ ನರಸಾರಧಿ ಗಿರಿಧರ ಮಾಧವಗೆ | ಶೌರಿ ರವಿನಿಭಾಂಗ ಕೃಪಾನಿಧಿಗೆ | ದುರಿತಾನಲ ಫಣಿವನಮಾಲೆಯ ಶುಭದಾಯಕಗೆ ದಯವಾರಿಧಿ ಮುರಹರಗೆ 1 ಸನ್ನುತ ಶ್ರೀಧರಗೆ ದೂರೀಕೃತದೋಷ ನಿರಾಮಯಗೆ ನಗಜಪತಿ ಪಾಲಕ ದೇವಕಿ ಸುತಗೆ ದಯವಾರಿಧಿ ಮುರಹರಗೆ 2 ಅಮರಾದಿಪವಿನಮಿತ ಮೂರುತಿಗೆ ಭಾಮೆ ನವಮೋದ ಪ್ರದಾಯಕಗೆ ಸ್ವಾಮಿ ಶ್ರೀನಿಧಿ ಶಾಮಸುಂದರ ಧೊರೆಗೆ ದಯವಾರಿಧಿ ಮುರಹರಗೆ 3
--------------
ಶಾಮಸುಂದರ ವಿಠಲ
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.ಯಾಕೆ ಪಂಥ ಲೋಕೈಕನಾಥ ದಿ-ವಾಕರಕೋಟಿಪ್ರಭಾಕರ ತೇಜನೇ ಅ.ಪ.ಪೂರ್ವಾರ್ಜಿತ ಕರ್ಮದಿಂದಲಿಇರ್ವೆನು ನರಜನ್ಮ ಧರಿಸುತಗರ್ವದಿಂದ ಗಜರಾಜನಂತೆ ಮತಿಮರ್ವೆಯಾಯ್ತು ನಿನ್ನೋರ್ವನ ನಂಬದೆಗರ್ವಮದೋನ್ಮತ್ತದಿ ನಡೆದೆನುಉರ್ವಿಯೊಳೀ ತೆರದಿ ಇದ್ದೆನಾದರೂಸರ್ವಥಾ ಈಗ ನಿಗರ್ವಿಯಾದೆಯಹಪರ್ವತವಾಸ ಸುಪರ್ವಾಣ ವಂದಿತ 1ಯಾರಿಗಳವಲ್ಲಮಾಯಾಕಾರ ಮಮತೆ ಸಲ್ಲ ಸಂತತಸಾರಸಾಕ್ಷ ಸಂಸಾರಾರ್ಣವದಿಂದಪಾರಗೈದು ಕರುಣಾರಸ ಸುರಿವುದುಭಾರವಾಯ್ತೆ ನಿನಗೆನತಮಮಕಾರ ಹೋಯ್ತೆ ಕಡೆಗೆ ಏನಿದುಭಾರಿ ಭಾರಿಶ್ರುತಿಸಾರುವುದೈ ದಯವಾರಿಧಿನೀನಿರಲ್ಯಾರಿಗುಸುರುವುದು2ಬಾಲತ್ವದ ಬಲೆಗೆ ದ್ರವ್ಯದಶೀಲವಿತ್ತೆ ಎನಗೆ ಆದರೂಪಾಲಿಸುವರೆ ನಿನಗಾಲಸ್ಯವೆ ಕರು-ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆಸಾಲದೆರಡು ಮೂರು ನಿನ್ನಯಮೂಲ ಸಹಿತ ತೋರು ಮುನಿಕುಲಪಾಲ ಶ್ರೀಲಕ್ಷ್ಮೀನಾರಾಯಣಗುಣಶೀಲ ಕಾರ್ಕಳ ನಗರಾಲಯವಾಸನೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ