ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಬಾಲಕನಿವನು ಎಷ್ಟೆಂದ್ಹೇಳಲಿ ನಾನು ಪಂಥಗಾರಿಕೆಯಂಗ ಪರಮ ಪುರುಷರಂಗ ಅಂತವ ತಿಳಿಗುಡನು ಗೋಪೆಮ್ಮಾ ಪ ನೋಟಾವೇಟದಿ ನಲುವಾ ನಡೆಯಾಲೊಲ್ಲದೆ ನಿಲುವಾ ಸ್ಫೋಟ ಹೃದಯವಾಗುವ ಪರಿಯಂಜಿಸುವ ಮಗು ನೀಟ ಘಾತಪಾತಕನಮ್ಮಾಗೋಪೆಮ್ಮ ನಿತ್ಯ ಬೆಣ್ಣೆಯ ಸವಿದು ಕಾಟಕಾರವೆ ಭಂಡಾ ತುರುಗಾವರೋಳು ಪುಂಡಾ ಆಟಕೆ ಗುಣವೇನ ಗೋಪೆಮ್ಮಾ 1 ನಯ ಮಾತಿಲಿ ಬರುವಾ ನೋಡಲು ಕಠಿಣಿರುವಾ ತಾಯಡಬಲ ನೋಡಾ ತರುಣಿಯರನ ಬಿಡಾ ಬಾಯಾದೆರೆದು ಬೇಡವಾ ಗೋಪೆಮ್ಮಾ ತಾಯಿಂಗಂಜನು ನಿನಗೆ ತಡೆದುರೋಗವ ಹೊರಗೆ ಮಾಯಾಗಾರನೆ ಗೋವಾ ಮತಿಯ ಕಡುವನಿವ ಸಾಯಸ ಕಲಿಯಮ್ಮ ಗೋಪೆಮ್ಮಾ 2 ಇದರೇರಿ ಚಿನ್ನವರಾ ಇಕ್ಕಿ ಅಂಗವ ತೋರಾ ಕಾಲ ಕೆದರಿ ಪೊರೆವ ಬಾಲಾ ಅದ್ಭುತ ವಿಕ್ರಮನೆ ಗೋಪೆಮ್ಮಾ ಉದ ಧಿಗಂಜನು ಧುಮುಕಿ ಉಲುವಾ ಬುದ್ದಿಯ ಸೊಕಿ ಮುದದಿ ವಾಜಿರಿಸೇ ಮಹಿಪತಿಸುತ ಪ್ರಭು ಬುಧ ಜನರೊಲುವಂತೆ ಗೋಪೆಮ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ಪ ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು ಸಿಟ್ಟು ಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ 1 ಗಂಡ ಹೆಂಡತಿಯು ಮಕ್ಕಳು ಸಹವಾಗಿ ದಂಡು ಮಾಳ್ಪೆವು ತಾವು ಎನುತಲಿ ಉಂಡೆವು ಸ್ಥಿರವಾರ ಊಟವ ಏಕವ ಕಂಡು ಬಹರೆ ಹೋಗುವ ದಯವಾಗುವ 2 ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ ಸಾಷ್ಟಾಂಗವು ಎರಗಿದರೆ ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ ವರಾಹ ನಮ್ಮಪ್ಪ ತಿಮ್ಮಪ್ಪನು 3
--------------
ವರಹತಿಮ್ಮಪ್ಪ
ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು