ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಹು ಅಂಜನಾಗದನಕಾ ಪರಗತಿ ದೊರೆಯದು ಗುರುಕೃಪೆ ಆಗದನಕಾ ಧ್ರುವ ಕಣ್ಣುಕಂಡು ಕಾಣದನಕಾ ಅನುಮಾನ ಹೋಗದು ಉನ್ಮನವಾಗದನಕಾ ಙÁ್ಞನ ಉದಯವಾಗದನಕಾ ಮನ ಬೆರಿಯದು ಘನಮಯಾಶ್ಚರ್ಯವಾಗದನಕ 1 ತನ್ನೊಳು ತಾ ತಿಳಿಯದನಕಾ ಭಿನ್ನವಳಿಯದು ಅನುಭವ ಸುಖ ಹೊಳೆಯದನಕಾ ನೆನವು ನೆಲೆ ಗೊಳ್ಳದನಕಾ ಘನಪ್ರಭೆಯು ಹೊಳಿಯದು ಧ್ಯಾನ ನಿಜವಾಗದನಕ2 ಏರಿ ತ್ರಿಪುರ ನೋಡದನಕಾ ಗುರುಮಹಿಮೆ ತಿಳಿಯದು ತಾ ದೃಢಗೊಳ್ಳದನಕಾ ಮುರು ಹರಿಯಗುಡದನಕಾ ಹರಿಯದು ಜನ್ಮಗುರುಚರಣವ ನೋಡದನಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1 ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2 ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3 ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4 ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಸುಮ್ಮನೆ ಬಾಹೂದೆ ಮುಕುತಿ - ನಮ್ಮ |ಚೆನ್ನಾದಿ ಕೇಶವನ ದಯವಾಗದನಕ ಪ.ಮನದಲ್ಲಿ ದೃಢವಿರಬೇಕು - ದುರ್ |ಜನರ ಸಂಗತಿಯನು ನೀಗಲುಬೇಕು ||ಅನಮಾನಂಗಳ ಬಿಡಬೇಕು - ತನ್ನ |ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1ಕಾಮ - ಕ್ರೋಧವ ಬಿಡಬೇಕು -ಹರಿ |ನಾಮಸಂಕೀರ್ತನೆ ಮಾಡಲುಬೇಕು ||ಹೇಮದಾಸೆಯ ಸುಡಬೇಕು - ತ |ನ್ನಾ ಮನ ಹರಿಯ ಪಾದದಲಿಡಬೇಕು 2ಪಾಪಗಳನೆ ಕಳೆಯಬೇಕು - ಜ್ಞಾನ |ದೀಪ ಬೆಳಕಿನಲಿ ಲೋಲಾಡ ಬೇಕು ||ತಾಪ ರಹಿತಗೈಯಬೇಕು - ನಮ್ಮಓಪ ಪುರಂದರವಿಠಲನೊಲೆಯ ಬೇಕು 300
--------------
ಪುರಂದರದಾಸರು