ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕ) ಷಣ್ಮುಖ ಶುಭ ಕಾಯಾ | ಶುಭ ಕಾಯಂಗಜ ನೀನೆ || ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ಪ ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು | ಮಾರಾ ಸಾಂಬಾ || ಸಾರಿದೆ ನಿನ್ನವತಾರ ಮೂಲರೂಪ || ಸಾರಿಸಾರಿಗೆ ಸಂಸಾರಮನ ವಿ || ಸ್ತಾರವಾಗದಂತೆ ಹಾರಿಸುದುರವ್ಯಾಪಾರ ಗುಣ ಪಾರಾವಾರಾ 1 ಮಾಡುವೆ ವಂದನೆ ಸತತ | ಸಜ್ಜನರೊಳ | ಗಾಡಿಸು ಭಕ್ತ ಪ್ರೀತಾ || ಪಾಡಿದವರ ಕಾ | ಪಾಡುವ ರತಿ-ಪತಿ | ಈಡಾರು ನಿನಗೇ ನಾಡಿನೊಳಗೆಲ್ಲ | ಬೇಡುವೆ ದಯವನ್ನು | ಮಾಡುವಿರಕುತಿಯ | ನೀಡು ಬಿಡದಲೆ ನೋಡು2 ಬೊಮ್ಮ | ಮುಕ್ಕಣ್ಣಗಳ ತನಯ || ಸೊಕ್ಕಿದ ತಾರಕ ರಕ್ಕಸ ಹರ ದೇ | ವಕ್ಕಳ ನಿಜ ದಳಕೆ ನಾಯಕನಾದೆ || ಸಿರಿ ವಿಜಯವಿಠ್ಠಲನ | ಚಕ್ರ ಐದೊಂದು ವಕ್ರಾ 3
--------------
ವಿಜಯದಾಸ
ಏನುಗತಿ ಏನುಗತಿ ಇನಕುಲೇಶ ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ ಮೂರು ಗುಣಗಳಿಂದ ಮೂರು ತಾಪಗಳಿಂದ ಮೂರು ಈರೆರಡೊಂದು ಮದಗಳಿಂದ ಮೂರು ಐದಾರಿಂದ ಮರೆತು ತನು ಮೂಲಗಳ ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ 1 ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ ಸತಿಯ ಸಂಗದಿ ನೆಲಸಿ ಹಿತವ ಮರೆದು ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ 2 ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ3
--------------
ಪ್ರದ್ಯುಮ್ನತೀರ್ಥರು
ಕರುಣಿಸೆನ್ನನು ಕರುಣಾನಿಧಿಯೆ ಪ ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ ಧರಣಿತಳದಲ್ಲಿ ಪರಿಪೂರ್ಣವಾಗೀ ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ 1 ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ ಪೊರೆದ ಕೀರುತಿ ಕೇಳಿ ತ್ವರದೀ ಪಾದ ಸರಸಿಜ್ವದಯವನ್ನು ದುರುಳ ಮಾನವ ನಾ 2 ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ ಋಣಗಳೆದ ಘನ ಮಹಿಮೆ ಕೇಳಿ ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ 3
--------------
ಗುರುಜಗನ್ನಾಥದಾಸರು
ಕವಿತಾರಸದ ಸೊಬಗ ಕವಿಗಳೆ ಬಲ್ಲರಲ್ಲದೆಯುವತಿಯರು ಕವಿಯ ಹೃದಯವ ಕಂಡರುಂಟೆ ಪ ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿಯಗೂಗೆ ಬಲ್ಲುದೆ ಸೂರ್ಯನುದಯವನ್ನುರೋಗಿ ಬಲ್ಲನೆ ಸುಧಾರಸದ ಸುಸ್ವಾದವನುಭೋಗಿ ಬಲ್ಲನೆ ಯೋಗಮಾರ್ಗ ರೀತಿಯನು 1 ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನುಹೊನ್ನಿದ್ದರೇನು ಲೋಭಿಯ ಕೈಯಲಿಹೆಣ್ಣಿದ್ದರೇನು ಪೌರುಷವಿಲ್ಲದ ನರಗೆಪುಣ್ಯಹೀನಗೆ ಕನಕಶಿಲೆಯಿದ್ದರೇನು 2 ಗಾನರಸಮಾಧುರ್ಯವನು ಬಧಿರಬಲ್ಲನೆಆನೆ ಬಲ್ಲುದೆ ಚಂದನದ ರಸವನುಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಪ ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಎಂದೆಗೆಂದಿಗೆ ಮುಂದೆ ಜನನಗಳು 1 ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು | ನೀಡು ಕರುಣವ | ಹೋಡುಗಾರರು ಬೀಡಿನೊಳಗಿದ್ದು | ಕಾಡುವದು ನಾನಾಡಲೇನು | ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ 2 ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ| ಸಾರವೆಂಬದಾಸಾರವನು ನೂಕಿ | ಸಾರ ಹೃದಯರ ಸಾಲೆಲಿರಸೆನ್ನ | ಕಂಸಾರಿ ಪ್ರತಿದಿನ | ಸಾರಥಿಯಾಗೊ ಸಾರಿಸಾರಿಗೆ | ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ 3
--------------
ವಿಜಯದಾಸ
ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ. ನಿತ್ಯ 1 ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ2 ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ 3 ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ4 ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು 5
--------------
ಮೋಹನದಾಸರು
ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳ ಸ್ತೋತ್ರ102ವರಗುರುವರ್ಯ ಶ್ರೀ ಬ್ರಹ್ಮಣ್ಯತೀರ್ಥರ |ಚರಣಕಮಲಕೆ ನಾಅನುದಿನನಮಿಪೆಪಪರಿಪರಿ ದುರಿತವ ತ್ವರಿತದಿ ತರಿದು ಶ್ರೀ |ಹರಿಮಧ್ವ ಚರಣಂಗಳಲಿ ಭಕ್ತಿ ಕೊಡುವಂತೆ ಅ ಪವರಮಧ್ವಮುನಿ ಹೃಸ್ಥ ನರಹರಿ ಶ್ರೀಕೃಷ್ಣ |ಕರಗಳ ಕಟಿಯಲಿಟ್ಟಿರುವ ವಿಠಲರಾಯ ||ವರವೇದವ್ಯಾಸ ವರಾಹನರ್ಚಕರಾದ |ವರಪುರುಷೋತ್ತಮ ಮುನಿಕರ ಕಮಲಜ1ವಿಪ್ರವೃದ್ಧರಿಗೆ ಇವರು ದಯವನ್ನು ಬೀರಿ |ಪುತ್ರ ಭಾಗ್ಯವನಿತ್ತು ಆ ವ್ಯಾಸ ಮುನಿಯನು ||ಸುಪ್ರಖ್ಯಾತರ ಮಾಡಿದಂಥ ಪ್ರಸಿದ್ಧರೀ - |ಸುಪ್ರಬುದ್ಧರ ಮಹಿಮೆಯು ಜ್ವಲಿಪುದು ಎಲ್ಲೂ 2ಪರಮದಯದಿ ಎನ್ನ ಕಷ್ಟದುರಿತ ಕೀಳ್ತು |ಪರಮಸದ್ಗುರುವರ್ಯರೆ ಪೊರೆಯಿರಿ ಎನ್ನ ||ಸರಸಿಜೋದ್ಭವತಾತ' ಪ್ರಸನ್ನ ಶ್ರೀನಿವಾಸ &ಡಿsquo;ವರಕಾಂತಿಯಿಂ ಪ್ರಜ್ವಲಿಸುತಿಹ ನಿಮ್ಮೊಳು3 ಪ
--------------
ಪ್ರಸನ್ನ ಶ್ರೀನಿವಾಸದಾಸರು