ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ತಾರಿಸೊಎನ್ನಾ ದುರಿತಾರಿ ಮುಕ್ತಿ ದಾರಿ ಸಾರಿ ದೋರಿ ದಯಬೀರಿ ಪ ಕಮನೀಯ ಲಾವಣ್ಯ ರೂಪ ಶಂಖಾರಿ ವಿಮಲಗದಾಂಭುಜಧಾರೀ ಸುಮನಸಾಧುಜನ ಹೃದಯ ವಿಹಾರಿ 1 ಮುರ ಅರಿ ಚೆಲುವಕಸ್ತೂರಿ ಶ್ರೀಹರೀ ಸಲಹುತಿಹ ಮಾಮನೋ ಹಾರಿ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾವಿನುತ ಹರಿ ವಿಠಲ ಸಲಹ ಬೇಕಿವನ ಪ ನೀ ವೊಲಿಯದಿರಲ್ಯಾರುಗತಿ | ಜೀವಿಗಳಿಗಿರುತಿಹರೊ ದೇವ ಅ.ಪ. ದುರುಳ ಕಶ್ಯಪು ತನ್ನ | ತರಳನನು ಪರಿಪರಿಯಉರುತರದಿ ಭಾದಿಸಲು | ಪೊರೆದ ತೆರದಂತೇಶರಣಜನ ವತ್ಸಲಗೆ | ನರಹರಿಯೆ ಕುಲದೈವಕರುಣದಿಂದಲಿ ನೀನೆ | ಪೊರೆಯ ಬೇಕಿವನ 1 ಸೇವ್ಯ ಕಮಲ ಭವ ಮುಖ್ಯ | ಸಕಲ ಜಗಕರ್ತಾ 2 ಕರ ಪಿಡಿದಿವನಮೃತ್ಯುಂಜಯಾರಾಧ್ಯ | ಉತ್ತಮೋತ್ತಮನೆ 3 ಮಾರ ಪಿತ ಹರಿಯೇತೋರುತವರೂಪ ಹೃ | ದ್ವಾರಿಜದಲೆಂದೆನುತಮಾರಾರಿ ಬಿಂಬನಿಗೆ | ಪ್ರಾರ್ಥಿಸುವೆ ಹರಿಯೆ 4 ಪ್ರಿಯತಮನು ನೀನೆಂಬ ಸಥೆಯಿಂದ ಬೇಡುವೆನೊವಯನ ಗಮ್ಯನೆ ಹರಿಯೆ | ವಾಯ್ವಂತರಾತ್ಮಾಹಯಮೊಗಾಭಿಧ ಗುರು ಗೋವಿಂದ ವಿಠ್ಠಲನೆದಯಬೀರಿ ಶರಣನ್ನ ಉದ್ಧರಿಸೊ ದೇವಾ5
--------------
ಗುರುಗೋವಿಂದವಿಠಲರು
ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ | ಭವ ಪಾಶವಾ ಪ ಅಹಂಮಮತಾವೆಂಬಾ ಸಂಚಾರ ವಾಯಿತು | ಸೋಹಂವೆಂಬಾ ತಿಳಿವಾದೆಚ್ಚರ ಹೋಯಿತ್ತು | ನಾಹಂಕರ್ತಾನೆಂದು ಸುವಿಚಾರ ಸೇರಿದಾ | ಸೋಹಂ ಎಂದು ನುಡಿಯದಾ ಕುಮತಿ ಮೀರಿದಾ 1 ಅನಾತ್ಮದಲ್ಲಿ ಆತ್ಮ ಭಾವನೆ ಮೂಡಿದೇ | ಸನಾತನ ಚೈತನ್ಯ ತಾನೆಂದು ನೋಡದೆಲ | ಮನದಿಂದ ಈ ಕ್ಷಣ ತ್ರಯವಕೂಡಿದೇ | ಕನಸಿನಂದದಿ ಸಂಸಾರ ದೊಳಾಡಿದೇ2 ಮರಹು ಬಿಡಿಸಿ ನಿನ್ನೆಚ್ಚರ ದೋರಿಸೀ | ಚರಣದ ಭಜನೆಗೆ ಕಣ್ಣ ದೆರೆಸೀ | ಗುರುಮಹಿಪತಿ ಪ್ರಭು ದಯಬೀರಿಸೀ | ಹೊರೆವದೆನ್ನಯ ಅಪರಾಧ ಕ್ಷಮಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿಬಾರೆ ಸುರಮೋಹನ ನೀಕರತಾರೆ ಪ ಮಕರಾಂಕನಯ್ಯನ ಕಾಣದೇ ನಾ ನಿಲ್ಲಲಾರೆ| ಯುಕುತಿಲೇ ತಂದು ನೀತೋರೇ| ಕ್ಷಣಯುಗವ ನೋಡುವರೇ| ಪ್ರಕಟದಲಿ ಕಣ್ಣಾರೆ ಕಾಂಬೆನೆಂದು 1 ದೀನಬಂಧು ಮೊರೆಹೊಕ್ಕವರ ಬಿಡನೆಂದು| ಮುನಿಜನ ಸಾರುವನೆಂದು|ನಂಬಿದೆನಾಮಕಬಂದು| ವನಜಾಕ್ಷ ಎನ್ನೊಳು ಕುಂದು|ನೊಡುವ ದುಚಿತವೇನಿಂದು| ಸನುಮುಖಕ ಮಾನವನು ತಂದುಕೂಡಿಸೇನಿಜಾ2 ನರಹರಿ ಶರಣಾಗತ ಸಹಕಾರಿ|ಬಿರುದವ ತಾಳಿದಾಪರಿ| ಮೊರೆಗೇಳಿದನು ದುರಿತಾರಿ|ಉರಗಾರಿ ಚಿನ್ನವನೇರಿ| ಬಂದ ನೋಡ ದಯಬೀರಿ| ಗುರು ಮಹಿಪತಿ ಪ್ರಭು ಉದಾರ|ನೆರೆದನೇತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ತಾರಿಸೆನ್ನ ಸಹಕಾರಿ | ದಯಬೀರಿ | ಸಿರಿ ಮನೋಹಾರಿ | ಶೌರಿ | ನರಹರಿ ಮರೆಯದೆ ಹೊರಿ ಮನ ಹರಿವಾರು | ಪರಿ ಪರಿ 1 ಸ್ಪುರಿತಾ ಚಕ್ರಗೋಗದಾಬ್ಜ ಭರಿತಾ | ಯುಧನಿರುತಾ | ಶೋಭಿತಾ | ನಿರ್ಜರ ಸರಿತಾ | ಗುರುತದನವರತ ದಲರಿತರ ದುರಿತಪ | ಹರಿ ಚಿದಾನಂದ ಭರಿತ ಸುಚರಿತಾ 2 ಸನ್ನುತ ಮಹಿಪತಿ | ಅಣುಗನೊಡಿಯಾ ಫಣಿವರ ಶಾಯೀ | ಎಣೆಗಾಣದಗಣಿತ | ಗುಣಗಣ ಮಣಿಖಣಿ | ಅಣುರೇಣು ತೃಣಕಣ ವ್ಯಾಪಕ ಪೂರಣ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು