ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಕೃಪೆ ಬಾರದೋ ನಿನಗ್ಯಾಕೆ ದಯಬಾರದೊ ಪ ಲೋಕರಕ್ಷಕ ದುಷ್ಟಕಾಲಶಿಕ್ಷಕ ನಿನಗ್ಯಾಕೆ ಅ.ಪ ಪಕ್ಷಿವಾಹನನೆನಿಸಿ ಲಕ್ಷಿಸದಿರಲು ಲೋಕದಿ ಲಕ್ಷಣವೆಲ್ಲವು ಶುಭಲಕ್ಷಣ ಮೂರುತಿ ನಿನಗ್ಯಾಕೇ 1 ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ ದಕ್ಷಿಣ ಶೇಷಾದ್ರಿವಾಸ ರಕ್ಷಿಸು ನಿನಗ್ಯಾಕೇ ಕೃಪೆ 2 ವಾಸವಸನ್ನುತ ಶ್ರೀನಿವಾಸ ನಿನ್ನದಾಸನೊಳು ದೋಷವನೆಣಿಸದೆ ಕಾಯೊ ದೋಷರಹಿತನೆ ನಿನಗ್ಯಾಕೆ 3 ಶುಭ ದೃಷ್ಟಿಯಿಂದ ನೋಡಿ ಎನ್ನ ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು 4 ವಾರಣವರದಭವ ತಾರಣ ಚರಣ ಗುಣ ಪು ರಾಣ ವರದವಿಠಲ ಕಾರುಣಿಕರರಸ ನಿನಗ್ಯಾಕೇ 5
--------------
ವೆಂಕಟವರದಾರ್ಯರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ