ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ 1ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ'ಜಯ ಗೋಪಾಲ ದಾಸರು ಅನುಗ್ರ'ಸಿದರು 2ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ 3ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ 'ಜಗನ್ನಾಥ'ಠಲ'ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ 4ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿ'ಠ್ಠಲನು ಕುಣಿದ 5
--------------
ಭೂಪತಿ ವಿಠಲರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು