ತ್ರಾಹಿ ತ್ರಾಹಿ ಶ್ರೀಗುರು ಅವಧೂತ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ಧ್ರುವ
ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ
ಕೃಪಾಸಿಂಧು ಸದ್ಗುರು ಪರಬ್ರಹ್ಮ
ಪಾಪಿ ದುರಾಚಾರಿಯು ನಾಪರಮ
ಕೃಪೆಯಿಂದ ಕಾವದು ದಯನಿಮ್ಮ 1
ಗುಣದೋಷ ನೋಡದಿರೊ ಶ್ರೀಹರಿ
ದುರಿತ ಕೋಟಿಗಳ ಸಂಹಾರಿ
ನೀನಹುದೊ ಬಡವನಾಧಾರಿ
ಅನುದಿನ ಕಾಯೊ ನೀ ಪರೋಪರಿ 2
ಒಮ್ಮೆ ಬಂಧನವ ಬಿಡಿಸೊ
ಸಮ್ಯಕ ಙÁ್ಞನ ಸಾರದೊಳು ಕೂಡಿಸೊ
ನಿಮ್ಮದಾಸ ಮಹಿಪತಿಯೆಂದೆನಿಸೊಬ್ರಹ್ಮಾನಂದದೊಳು ನಲಿದಾಡಿಸೊ 3