ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(37ನೇ ವರ್ಷದ ವರ್ಧಂತಿ) ದಯದೋರೊ ದೀನಾನುಕಂಪಾ ಲಕ್ಷ್ಮೀಶಾ ಭಯಹಾರಿ ಭಾಮಾ ಮುಖಾಬ್ಜ ದಿನೇಶ ಪ. ಒಂದೊಂದುಪಾಧಿ ಸಂಬಂಧಿಸಿ ಬರುವಾ ಮಂದಾಭಿಲಾಷಗಳಿಂದ ನಿಂದಿಸುವ ಕುಂದ ನಾನೆಂದಿಗು ಹೊಂದದಂದದಲಿ ನಿಂದು ಮನದಿ ಪೂರ್ಣಾನಂದ ಸಂತಸದಿ 1 ನಾವಿಬ್ಬರೊಂದೆ ವೃಕ್ಷದಿ ಸೇರಿರುವೆವು ಕೋವಿದ ನೀನಾದರಿಂದ ಎನ್ನಿರವು ಜೀವ ಕರ್ತೃತ್ವಾದಿ ಬಳಲುವದೈತು ತಾವಕನೆಂಬ ಭಾವನೆ ದೂರ ಹೋಯ್ತು 2 ಮತ್ತೇಳು ಮೂವತ್ತು ವತ್ಸರಗಳನು ಎತ್ತಿನಂದದಿ ಕಳೆವುತ್ತ ಬಾಳಿದೆನು ಎತ್ತಾಲು ಹೊಂದದೆ ಎರಡೇಳು ವಿಧದ ಭಕ್ತಿಯ ಬಯಸುವ ಭಯ ದೂರ ವರದ 3 ಮನಸಿನ ದೌರಾತ್ಮ್ಯವನು ಪೇಳಲಾರೆ ತನುವ ದಂಡಿಸಿ ಕರ್ಮಗಳ ತಾಳಲಾರೆ ಅನುಕೂಲವಲ್ಲದಿಂದ್ರಿಯಗಳನೆಲ್ಲ ವನಜಾಕ್ಷ ನಾನೆಂತು ಗೆಲ್ಲುವೆ ಶ್ರೀನಲ್ಲ 4 ಈರೇಳು ಭುವನಾಧಿನಾಥ ನಿನ್ನನ್ನು ಸೇರಿದೆ ಶೇಷಾದ್ರಿ ಶಿಖರವಾಸ ಸಾರಿದೆ ಸರ್ವಾಭೀಷ್ಟದ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಇ) ಆತ್ಮನಿವೇದನೆ ಏನು ಮಾಡಲಿ ವೆಂಕಟೇಶ ಈ ಬೆಳೆಯು ಸೋನೆಯಿಲ್ಲದೆ ಉರಿದುದು ಪ ನಾನಾ ಪ್ರಕಾರದೊಳು ಹಾನಿಯಾಯಿತು ಇರವು ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ ಮೂಡದೆಸೆಯಳು ಬಂದುದು, ಆ ಮಳೆಯು ಬಡಗದೆಸೆಯಳು ಸುರಿದುದು ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ ನಡುವೆ ಬಿಡುವುದು ಯಾತಕೆ 1 ಕಟ್ಟುಕಡು ಮದಗ ಸಹಿತ, ಈ ಊರ ತಲೆ ಗಟ್ಟಿನೊಳು ನಾ ಕಾಣೆನು ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ ದೃಷ್ಟಿಯಲಿ ನೋಡು ನೀನು 2 ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ ಫಲವೆಲ್ಲ ಬೆಳೆ ಕೆಟ್ಟಿತು ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು ಎಳೆದೆಳೆದು ಕೊಲುವನಲ್ಲ 3 ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ ಬಿಟ್ಟು ಪೋದುದು ಇಳೆಯನು ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ ಮುಟ್ಟಿ ನೋಡುವರಿಲ್ಲವೊ 4 ಹದಿನಾಲ್ಕು ಲೋಕವನು ನೀ ನಿನ್ನ ಉದರದೊಳಗಳವಟ್ಟಿಹೆ ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ ಉದುರದೇತಕೆ ಇಳೆಗೆ ಮಳೆಯು 5 ಎಲ್ಲ ಬೇಡಿಯೆ ಕೊಂಬರು, ಈ ಹರಕೆ ಯಲ್ಲಿ ಅಂತರಬಾರದು ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು ಬೆಲ್ಲವಾಗಿಹ ಮಳೆಯನೆರೆಯೊ 6 ನೀಲಮೇಘಶಾಮ ವರ್ಣ, ಕಾಣಲಾ ಮೂಲೋಕದೊಡೆಯಾ ನಿನ್ನ ಕಾಲಮೇಘವು ನಿನಗೆ ದೂರವಾಗುವುದುಂಟೆ ಆಲಸ್ಯ ಮಾಡಬೇಡ 7 ಬಡವರೆಲ್ಲರು ಕೂಡಿಯೇ, ಒಪ್ಪು ಕೈ ವಿಡಿದು ಬೇಡಿಯೇ ಕೊಂಡೆವು ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ ಒಡೆಯ ದಯದೋರೊ ನೀನು 8 ಸ್ವಾಮಿ ನಿನ್ನಯ ನಾಮವು, ಜನರಿಂಗೆ ಕಾಮಿತಾರ್ಥವನೀವುದು ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ 1 ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ 2 ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ 3 ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ 4 ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಧನಿ ಧನೀ ದಯದೋರೊ ಬ್ಯಾಗೆನ್ನ ಅನಾಥ ರಕ್ಷಕ ಬೇರ್ಯಾರೊ ಪ. ಜಲಜನಾಭ ನಿನ್ನಲಿ ಮನವಿರಿಸಲು ಸುಲಭವು ಮೋಕ್ಷಾಂತದ ಫಲವು ಎಂದು ತಿಳಿದುದು ನೀಯರಿದಿರೆ ದೀನನ ಇಂಥ ಫಲದಲಿ ತಳಮಳಗೊಳಿಸುವದ್ಯಾತಕೆ 1 ಆರಿಗೊರೆವದೀ ಕ್ರೂರವೇದನೆಯನ್ನು ಸೈರಿಸಲಾರೆನು ಸರ್ವೇಶ ಕಂಸಾರಿ ನೀ ಗತಿ ಎಂದು ಚೀರುವೆ ಚಿನ್ಮಯ ತ್ರಿಗುಣೇಶ 2 ಘೋರಾಪದ್ಗಣ ವಾರುಧಿಯೊಳಗೀಸ- ಲಾರದೆ ಮುಳುಗಿದೆ ಮಾರಮಣ ಪಾರಗಾಣಿಸದಿರೆ ದೂರು ನಿನಗೆ ಬಂದು ಸೇರದೆ ಬಿಡದು ವೆಂಕಟರಮಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಿಯ ಪಾಂಡುರಂಗ ವಿಠಲ | ದಯದೋರೊ ಇವಗೆ ಪ ನಯವಿನಯದಿಂ ಬೇಡ್ವ | ಹರಿದಾಸದೀಕ್ಷಾ ಅ.ಪ. ಸದ್ವಂಶದಲಿ ಬಂದು | ಮಧ್ವಮತದೀಕ್ಷೆಯಲಿವಿದ್ಯೆಯನು ತಾ ಕಲಿತು | ಹರಿದಾಸ್ಯದಿ ಮನವಬುದ್ಧಿ ಮಾಡ್ಡವ ನೀನೆ | ಮಧ್ವಾಂತರಾತ್ಮಕನೆಸದ್ವಿಧ್ಯೆತರತಮವ | ಬುದ್ದಿಗೆಟಕಿಸೊ ದೇವಾ 1 ಪಂಚಬೇಧವನರುಹಿ | ಪಂಚಾತ್ಮ ನಿನಕಾಂಬಸಂಚುಗಳ ತಿಳಿಸುತ್ತ | ಕಾಪಾಡೊ ಇವನಾಅಂಚೆಗಮನನೆ ಪಿತನೆ | ನಿಷ್ಕಿಂಚನಾರಾಧ್ಯಹೆಂಚು ಹಾಟಕದಿ ಸಮ | ಬುದ್ದಿಯನೆ ಈಯೋ2 ಭಕ್ತಿ ವೆಗ್ಗಳವಾಗಿ | ನಿತ್ಯತವ ಪದಮಹಿಮೆಸತ್ಕೀರ್ತಿ ಪಾಡುತಲಿ | ಹರಿಗುರು ಸೇವಾ ಕೃತ್ಯದಲಿ ಸನ್ಮೋದ | ಚಿತ್ತದಲಿ ಆನಂದಬಿತ್ತುತಲಿ ಪೊರೆ ಇವನ | ಚಿತ್ತಜನಪಿತನೆ 3 ಗುಣರೂಪ ಕ್ರಿಯೆಗಳಲಿ | ಅನಗುತನು ವ್ಯಾಪ್ತನೂಎನುವ ಸುಜ್ಞಾನವನು | ಕರುಣಿಸೊ ಹರಿಯೇಕನುಕರಣ ಮನಮೂಲ | ಗುಣಭೋಗದನುಭವನಉಣಿಸಿ ಸಾಧನಗೈಸಿ | ಪೊರೆ ಇದನ ಹರಿಯೇ 4 ನೋವು ಸುಖಗಳ ಸಮತೆ | ಭಾವವನೆ ಕರುಣಿಸುತಶ್ರೀ ವರನೆ ಪೊರೆ ಇದನ | ಸರ್ವಾಂತರಾತ್ಮಾಶ್ರೀ ವಲ್ಲಭನೆ ಗುರು | ಗೋವಿಂದ ವಿಠಲನೆಓದಿಮದ್ಭಿನಪವ | ಪಾಲಿಸೊ ಹರಿಯೇ5
--------------
ಗುರುಗೋವಿಂದವಿಠಲರು