ಒಟ್ಟು 12 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣಾಕರ ಕೃಪಾಲ ಶ್ರೀ ಗುರು ಎನ್ನ ಕಾಯೊ ದಯದಿಂದೆನ್ನ ಪರಮಪಾವನ ಧ್ರುವ ಹುಟ್ಟಿಸಿಹ್ಯ ಜೀವನ ಸೃಷ್ಟಿಯೊಳು ನಾ ನಿಮ್ಮ ದೃಷ್ಟಿಸಿ ನೋಡಲು ಎನ್ನ ಕಷ್ಟಪರಿಹಾರ ಶಿಷ್ಟಜನ ಪ್ರತಿಪಾಲ ದುಷ್ಟಜನ ಸಂಹಾರ ಎಷ್ಟೆಂದು ಪೊಗಳಲಯ್ಯ ಕೃಷ್ಣಕೃಪಾಲ 1 ಇನ್ನೊಂದು ಅರಿಯೆ ನಾ ಅನ್ಯಪಥÀವೆಂಬುದನು ನಿನ್ನ ಚರಣಕೆ ಪೂರ್ಣ ನಂಬಿಹ್ಯನು ಭಿನ್ನವಿಲ್ಲದೆ ಎನ್ನ ಚನ್ನಾಗಿ ಸಲಹಯ್ಯ ಧನ್ಯಗೈಸೊ ಪ್ರಾಣ ಚಿನ್ಮಯನೆ 2 ವಾಸನೆಯ ಪೂರಿಸೊ ವಿಶ್ವವ್ಯಾಪಕ ಎನ್ನ ಭಾಸ್ಕರಕೋಟಿ ಪ್ರಕಾಶ ಪೂರ್ಣ ಲೇಸು ಲೇಸಾದಿ ಪಾಲಿಸೊ ವಾಸುದೇವನೆ ದಾಸಾನುದಾಸ ನಿಜದಾಸ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ದಯದಿಂದೆನ್ನ ಕಾರುಣ್ಯ ನಿಧಿಯೇ | ಯದು ನಾಯಕನೇ ದೇವ ದೇವಾ ಪ ಪುಷ್ಯರಾಗದಿ ನವರತ್ನ ಪದಕಧರ | ಘನಶ್ಯಾಮ ಉರಗಶಯನಾ | ಕಶ್ಯಪ ವಸಿಷ್ಠಾದಿ ಸ್ಮರಣೆ ಮಾಳ್ವವರಿಂಗೆ | ದೃಶ್ಯನಾಗಿಹ ಮುರಾರಿ ಶೌರಿ1 ನಂದಸುಕುಮಾರ ಸಿರಿನಾರಿಯ | ಸದ್ಬಕ್ತವೃಂದ ರಕ್ಷಕ ಭೂಧರಾ | ಇಂದಿರಾ ಭಾವನೆಯೂ ಪೂರಿತಿಕೇಳು | ಜಗವಂದ್ಯ ಮುಕುಂದ ಗರುಡರೂಢಾ2 ಚಕ್ರಕರ ಕಮಲಾಕ್ಷ ಚತುರಾಸ್ಯ ಜನಕ ಬಲಿ | ಚಕ್ರವರ್ತಿಗೆ ವರದನಾ | ಶಕ್ರನುತ ಮಹಿಪತಿ ಸ್ವಾಮಿ ಸುತ ಪ್ರೀಯಾ | ತ್ರಿವಿಕ್ರಮನೆ ಕೋಮಲಾಂಗಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ನಿತ್ಯದಿತಿಜರು ಕಲಿಗೆ ದೂರುತಿಹರೋ ಸತ್ಯಧ್ಯಾನರ ಕಾಟ ತಾಳಲಾರೆವೊಯೆಂದು ಪ ನೀ ಕಲಿಸಿದಾಟವನು ತಾ ಕಳೆದು ಜನರ ಅಘನೂಕಿ ಜಗಸತ್ಯ ಶ್ರೀ ಹರಿಯು ಪರನು ಶ್ರೀಕಮಲಭವರೆಲ್ಲ ದಾಸರೆಂದರುಪಲು ತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1 ಭೂಸುರರಿಗನ್ನ ಧನ ಭೂಷಣಗಳಿತ್ತು ಅಭ್ಯಾಸಗೈಸಿದ ಸಕಲ ವೇದಶಾಸ್ತ್ರ ಏಸು ವಿಧ ಯತ್ನಗಳು ನಾ ಮಾಡಿದರು ಜಯ ಲೇಸು ಕಾಣದೆ ನಿನ್ನ ಬಳಿಗೆ ಬಂದೆವು ಎಂದು 2 ಇಂತು ತಾ ಮಾಡಿದನು ಪಿಂತಿನಾಶ್ರಮದಿ ಈ ಗಂತು ನಮ್ಮವರಾದ ವದು ಮತ್ಸರಾ ಕಂತು ಕೋಪಾದಿಗಳಿಗಂತಕನು ಯನಿಸಿ ಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು 3 ತಾಪಸೋತ್ತಮ ಸತ್ಯದ್ಯಾನದಿಂ ಭೂತಳದಿ ಪಾಪ ಸರಿದಿತು ಪುಣ್ಯವೆಗ್ಗಳಿಸಿತು ಲೇಪಿಸದು ಖತಿಜನಕ ಇವರ ದಯದಿಂದೆಮ್ಮ ವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4 ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾ ಪರಹಿಂಸೆ ಧನಯುವತಿ ದ್ಯೂತತೊರದಾ ವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದು ಅರುಹಿದನು ಭೃತ್ಯರಿಗೆ ಕಲಿ ಮನನೊಂದು 5
--------------
ಅಸ್ಕಿಹಾಳ ಗೋವಿಂದ
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ ಪ ಸತ್ಯ ಪೂರ್ಣ ಕರಜರೆನಿಸಿ | ಸುತ್ತಿಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಫತ್ತೇಸಿಂಗ ಭೇಟಿಯಾದ 1 ಶತೃಗಳ ಗೆದ್ದು ಬಂದು | ಸತ್ಯಪ್ರಿಯರಿಗೆರಗಿ ಅವನೂ ಇತ್ತು ಊರುಗಳನೆರಡು | ನೆತ್ತಿ ಚಾಚಿ ನಮಿಸೀದ 2 ಮಾನಮಧುರಿ ಊರಿನಲ್ಲಿ | ಪ್ರಾಣೋತ್ಕ್ರಮಣ ಸಮಯದಲ್ಲಿಜ್ಞಾನಿ ರಾಮಾಚಾರ್ಯರಿಗೆ | ದಾನ ಮಾಡ್ದ ತುರ್ಯಾಶ್ರಮ 3 ಮಾಧವನ ದಯದಿಂದೆ | ಸಾಧಿಸುತ ಬದರಿ ಯಾತ್ರೆವೇದವತಿ ತೀರದಲ್ಲಿ | ಸಾಧುಗಳ ವೃಂದಾವನ 4 ವೇದ ವೇದ್ಯನಾದ ಗುರು | ಗುರುಗೋವಿಂದ ವಿಠಲನಮೋದದಿಂದ ಭಜಿಸುತ್ತ | ಆದರದಿ ಧ್ಯಾನಾಸಕ್ತ 5
--------------
ಗುರುಗೋವಿಂದವಿಠಲರು
ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥ ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1 ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2 ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3
--------------
ಭೀಮಾಶಂಕರ
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |ಅಂಬುಜನಾಭ ದಯದಿಂದೆನ್ನ ಮನೆಗೆ ಪಜಲಚರಜಲವಾಸ ಧರಣೀಧರ ಮೃಗರೂಪ |ನೆಲನಳೆದೀರಡಿ ಮಾಡಿ ಬಂದ ||ಕುಲನಾಶಿ ವನವಾಸಿ ನವನೀತಚೋರನಿವ |ಲಲನೆಯರ ವ್ರತಭಂಗ ವಾಹನತುರಂಗ 1ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |ಅಣಕಿಸುವ ಬಾಯ್ದೆರೆದು ಬಾಲತನದಿ ||ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |ಮಾನವ ಬಿಟ್ಟು ಕುದುರೆಯನೇರಿ ಮೆರೆವ2ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |ನರಮೃಗ ಬಲಿಬಂಧ ಕೊರಳಗೊಯ್ಕ ||ಶರಮುರಿದೊರಳೆಳೆದು ಬತ್ತಲೆ ಹಯವನೇರಿ |ಪುರಂದರವಿಠಲ ನಮ್ಮ ಮನೆಗೆ ಹರುಷದಲಿ 3
--------------
ಪುರಂದರದಾಸರು
ನಿನ್ನದೇ ಹಂಗೆನಗೆ ಶ್ರೀಹರಿನಿನ್ನದೇ ಹಂಗೆನಗೆ ಪನಿನ್ನದೇ ಹಂಗೆನಗುನ್ನತ ಸುಖವಿತ್ತುಮನ್ನಿಸಿ ದಯದಿಂದೆನನುದ್ಧರಿಸಯ್ಯ ಅ.ಪಜಿಹ್ವೆಗೆ ನಿಮ್ಮಯ ಧ್ಯಾನದ ಸವಿಸಾರವಿತ್ತಯ್ಯಾಭವಭವದಲ್ಲಿ ಪುಟ್ಟಿ ಜನಗೀಡೆನಿಸುವದಯದಿ ಪಿಡಿದು ಎನ್ನ ಭವಭಯಹರಿಸಿದಿ 1ವಿಸ್ತಾರ ತವಚರಿತ ಪಾಮರನ್ಹಸ್ತದಿಂ ಬರೆಸುತ್ತಅಸ್ತವ್ಯಸ್ತವೆಲ್ಲ ನಾಸ್ತಿ ಮಾಡಿ ನೀನೆಪುಸಿಯಾಗೆನ್ನಗೆ ಸ್ವಸ್ಥಪಾಲಿಸಿದಿ 2ಸದಮಲ ಶ್ರೀರಾಮ ಭಕುತಾಭಿ ಸದಮಲ ತವನಾಮಸುದಯದಿಂದೆನ್ನಯ ವದನದಿ ನಿಲ್ಲಿಸಿಸದಮಲವೆನಿಪ ಸಂಪದವಿಯ ನೀಡಿದಿ 3
--------------
ರಾಮದಾಸರು
ವೈದ್ಯವ ನಾನರಿಯೆ - ಭವರೋಗದ-|ವೈದ್ಯ ನೀನೆ ಹರಿಯೆ ಪನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |ಪಾದೋದಕವನು ಎನಗೆ ಕೊಡಿಸು ಸರ್ವ-||ವ್ಯಾಧಿನಿವಾರಣ ಕಷಾಯ ನೀ ಕೊಡು 1ಹರಿನಿನ್ನ ಕರುಣವೆಂಬ-ಸ್ಮರಣೆಯ |ತ್ವರಿತ ಙ್ಞÕನದಿಂದ ||ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||ದುರಿತನಿವಾರಣ ಕಷಾಯ ನೀ ಕೊಡು 2ಕೃಷ್ಣ ನೀ ಕೃಪೆವಿಡಿದು-ಕಪಟದ-|ಉಷ್ಣವಾಯುವಳಿದು ||ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3ನಿನ್ನ ದಾಸ ನಾನು-ದುರಿತಗ-|ಸಳೆನ್ನ ಕಾಡುವುವೇನು ||ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|ವನ್ನು ಮಾಡಿ ಶ್ರೀಹರಿ ಸಲಹೆನ್ನನು 4ಪಂಡಿತದಯಾಸಿಂಧು-ಕಾಡುವ-|ಪಾಂಡುರೋಗ ಕೊಂದು ||ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
--------------
ಪುರಂದರದಾಸರು
ಶ್ರೀ ಸತ್ಯಧ್ಯಾನರುನಿತ್ಯದಿತಿಜರು ಕಲಿಗೆ ದೂರುತಿಹರೋಸತ್ಯಧ್ಯಾನರ ಕಾಟ ತಾಳಲರೆವೊಯಂದು ಪನೀಕಲಿಸಿದಾಟವನು ತಾ ಕಳೆದು ಜನರ ಅಘನೂಕಿಜಗಸತ್ಯ ಶ್ರೀಹರಿಯು ಪರನುಶ್ರೀ ಕಮಲಭವರೆಲ್ಲ ದಾಸರೆಂದರು ಪಲುತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1ಭೂಸೂರರಿಗನ್ನ ಧನ ಭೂಷಣಗಳಿತ್ತುಅಭ್ಯಾಸಗೈಸಿದ ಸಕಲ ವೇದಶಾಸ್ತ್ರವೀಸುವಿದ ಯತ್ನಗಳು ನಾ ಮಾಡಿದರು ಜಯಲೇಸುಕಾಣದೆ ನಿನ್ನ ಬಳಿಗೆ ಬಂದೆವು ಎಂದು 2ಇಂತು ತಾಮಾಡಿದನು ಪಿಂತಿನಾಶ್ರಮದಿಈಗಂತು ನಮ್ಮವರಾದ ವದುಮತ್ಸರಾಕಂತುಕೋಪಾದಿಗಳಿಗಂತಕನು ಯನಿಸಿಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು3ತಾಪಸೋತ್ತಮ ಸತ್ಯಧ್ಯಾನದಿಂ ಭೂತಳದಿಪಾಪ ಸರಿದಿತು ಪುಣ್ಯವೆಗ್ಗಳಿಸಿತುಲೇಪಿಸದು ಖತಿಜನಕ ಇವರ ದಯದಿಂದೆಮ್ಮವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾಪರಹಿಂಸೆ ಧನ ಯುವತಿ ದ್ಯೂತ ತೊರದಾವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದುಅರುಹಿದನು ಭೃತ್ಯರಿಗೆಕಲಿಮನನೊಂದು 5
--------------
ಸಿರಿಗೋವಿಂದವಿಠಲ