ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರೋಗ ಪರಿಹಾರ ಸ್ತುತಿ ವರಾಹ ನರಹರಿ ನಿನ್ನಾ ಚರಣಕೆರಗುವೆ ಎನ್ನ ಬಿನ್ನಪಕೇಳಿ ಪೊರೆ ಇವಳನ್ನಾ ಪ ಉದರ ಶೂಲಿ ಎನಲು ವೈದ್ಯಪಂಡಿತರು ಶಸ್ತ್ರ ಪ್ರಯೋಗಿಸಲಿಹರು ಅವಶ್ಯ ಇಲ್ಲದಲೆ 1 ಶಸ್ತ್ರದ ವೈಷಮ್ಯ ಬಾಧೆಗಳ ಕಳೆದು ನಿತ್ರಾಣ ನರ ಉದರ ಮಾಂದ್ಯಗಳ ತಿದ್ದಿ ಕಾಪಾಡು 2 ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸ ಘೃಣಿಯೇ ನಿನ್ನ ದಯದಿಂದಲೇ ಜೀವರು ನಮ್ಮೆಲ್ಲರ ಯೋಗ ಕ್ಷೇಮಗಳು 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಗೋಪಾಲದಾಸರು ನಿನ್ನ ದಯದಿಂದಲೇ ಎನ್ನ ಜೀವನವು ಘನ್ನ ಗೋಪಾಲ ವಿಠ್ಠಲ ದಾಸರಾಯ ಪ ತುಂಗೆ ಕೃಷ್ಣೆ ಮಧ್ಯರಂಗ ಕ್ಷೇತ್ರದಿ ಮುದದಿ ತುಂಗ ವಿಜಯಾರ್ಯರ ಪದಂಗಳಿಗೆ ಎರಗಿ ಗಂಗೆಪಿತ ಮಾತಂಗ ವರದನಾಮನ ಅಂತ ರಂಗದಿ ನೋಡಿ ಗುಣಗಳನು ಪಾಡಿದೆಯೊ 1 ಅನುಜರಿಗು ಅಚಲ ಮಾತೆಗು ಶರಣು ಸುಜನರಿಗು ಮೌನಿ ಪಂಡಿತರಿಗೂ ಎನ್ನಂಥ ಪಾಮರಗು ಜ್ಞಾನ ಸುತತ್ವ ಸನ್ಮಾರ್ಗ ಬೋಧಿಸಿ ಜಗ ನ್ನಾಥನ ಮನಸಿನ ಅನುಭವಕೆ ತಂದೆ 2 ಬೇಸರದಿ ನಾ ಸೀತಾಪತಿಪಲ್ಲಿಯಲಿ ಮಲಗೆ ಏಸು ಕರುಣವೊ ದಾಸರಾಜ ನೀ ಬಂದು ವ್ಯಾಸಮುನಿಮಠ ಗುರುಪೂಜೆಗೆ ಕರೆದೊಯ್ದು ದಶಪ್ರಮತಿ ಭಾಷ್ಯಪಠನಾರ್ಚನೆಯ ತೋರಿಸಿದೆ 3 ಗೋ ಎನಲು ಗರುಡವಾಹನ ಪೀಡೆ ಪರಿಹರಿಪ ಪಾ ಎನಲು ಪರಮಪೂರುಷ ಪಾಲಿಸುವ ಲ ಎನಲು ಲಕ್ಷ್ಮೀಶ ನಿಖಿಳೇಷ್ಟಗಳನೀವ ಅನವರತ ಗೋಪಾಲದಾಸರಿಗೆ ಶರಣು 4 ಆನಂದಮುನಿಹೃಸ್ಥ ವನಜಸಂಭವಪಿತ ಪ್ರ ಸನ್ನ ಶ್ರೀನಿವಾಸ ಜಗನ್ನಾಥ ನಿನ್ನ ಪಾದ ಸಂಸ್ಮರಿಸುವ ಸುಜನರನು ಅನವರತ ಪಾಲಿಸುವ ಸಂದೇಹವಿಲ್ಲ 5
--------------
ಪ್ರಸನ್ನ ಶ್ರೀನಿವಾಸದಾಸರು