ಸ್ವಾಮಿ ಸದ್ಗುರುವೆ ನಿಮ್ಮ ದಯದಕ್ಷಿ ಸುಭಿಕ್ಷ ದ್ರುವ
ನಿಮ್ಮ ಅಭಯ ಹಸ್ತ ಬ್ರಹ್ಮಾನಂದದ ಸುಪ್ರಸ್ತ
ನಮ್ಮ ಜೀವಕೆ ಪ್ರಶಸ್ತ ನಿಮ್ಮಿಂದೆ ಸ್ವಸ್ತ 1
ನಿಮ್ಮ ದಯಕರುಣ ಸಮ್ಯಙÁ್ಞನದ ಸ್ಫುರಣ
ನಮ್ಮ ಜನ್ಮದುದ್ಧರಣ ನಿಮ್ಮಿಂದ ಪೂರ್ಣ 2
ಸಾಹ್ಯಮಾಡುವ ನಿಮ್ಮ ಬಾಹ್ಯಾಂತ್ರದಲಿ ಸಂಭ್ರಮ
ಮಹಿಪತಿಗಾನಂದೋ ಬ್ರಹ್ಮ ಇಹಪರ ಸುಪ್ರೇಮ 3