ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ಪ ಡಂಕಸಾರಿದ ತನ್ನ ತುಂಟದೂತರಿಗ್ವೊ ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ ಕಾಲಕಾಲದಿ ಹರಿಯಕಥೆ ಕೀರ್ತ ನಾಲಿಸುವರ ನೆರೆಯು ತಾಳದಮ್ಮಡಿ ಸಮ್ಮೇಳದೊಡನೆ ಆ ನೀಲಶ್ಯಾಮನ ಭಜಿಪರಾಳಿನಾಳನುಕಂಡು ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು 1 ಮಂದಿರಂಗಳದಿ ವೃಂದಾವನ ದಂದ ಕಂಡಾಕ್ಷಣದಿ ಸಿಂಧುಶಯನ ಬಂಧುಭಕ್ತರ ಮಂದಿರವಿದೆಂದು ಹಿಂದಕ್ಕೆ ನೋಡದೆ ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು 2 ಪರರಂಗನೆಯರ ಸ್ಮರಿಸುವ ಪರಮ ನೀಚರನ್ನು ನರಹರಿ ಸ್ಮರಣೆಯ ಅರಿಯದ ಆಧಮರ ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ ದರದರನೆಳೆತಂದು ಉರಿಯೊಳ್ಪೊಯಿರೆಂದು 3 ಪರದ್ರವ್ಯವಪಹರಿಸಿ ಲಂಚದಿಂದ ಸರುವ ತನ್ನದೆನಿಸಿ ನಿರುತ ಮಡದಿಮಕ್ಕಳೊರೆವ ದುರಾತ್ಮನರ ಗುರುತಳನೆಳತಂದು ಕರಿಗಿದಸೀಸಬಾಯೊಳ್ ವೆರಸಿ ಜನಕಕೊಂಡದುರುಳಿಸಿಬಿಡಿರೆಂದು 4 ವೇಣು ಕರದಿ ಪಿಡಿದು ಬಾಣಾರಿ ಧ್ಯಾನದೊಳಗೆ ಬರೆದು ಜಾನಕೀಶನ ಲೀಲೆ ಗಾನದಿಂ ಪಾಡುತ ಆನಂದಿಪ ಮಹಜ್ಞಾನಿಗಳನು ಕಂಡು ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು 5 ಇಂದಿರೇಶನದಿನದಿ ಅನ್ನವನು ತಿಂದ ಮೂಢರ ಭರದಿ ತಂದು ಒದೆದು ಮಹಗಂಧಮದು ರ್ಗಂಧನಾರುವ ಮಲತಿಂದು ಬದುಕಿರೆಲೊ ಎಂದು ಮನೆಹೊರಗಿನ ಮಂದಿರದಿಡಿರೆಂದು 6 ವಿಮಲ ತುಳಸೀಮಣಿಯ ಧರಿಸಿ ಅಮಿತ ಮಹಿಮನ ಚರಿಯ ವಿಮಲಮನಸರಾಗಿ ಕ್ರಮದಿ ಬರುವ ಶ್ರೀ ರಾಮದಾಸರ ಪಾದಕಮಲಗಳನು ಕಂಡು ಯಮದೂತರೆನ್ನದೆ ನಮಿಸಿ ಬನ್ನಿರೆಂದು 7
--------------
ರಾಮದಾಸರು