ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿಬಹಳ ಸಂತೋಷಿ ಬಗಳ ಬಹಳ ಸಂತೋಷಿಪಕಾಂತಿಯೆಂಬ ಸತಿಯು ದೊರಕಲಿ ಬಹಳ ಸಂತೋಷಿಕಾಂತಿ ಎಂಬ ಕುಲಕುಡಿಬೆಳೆಯಲಿ ಬಹಳ ಸಂತೋಷಿ1ಕ್ಷಮೆಯು ಎಂಬ ಕ್ಷೇಮವು ಬೆಳೆಯಲಿ ಬಹಳ ಸಂತೋಷಿದಮೆಯು ಎಂಬ ದನಕರು ಹೆಚ್ಚಲಿ ಬಹಳ ಸಂತೋಷಿ2ಆತ್ಮ ಸಂತೋಷದಾ ಅಂಗಡಿ ನಡೆಯಲಿ ಬಹಳ ಸಂತೋಷಿಸ್ವಾತ್ಮಾನುಸುಖ ಸಾಮ್ರಾಜ್ಯ ದೊರೆಯಲಿ ಬಹಳ ಸಂತೋಷಿ3ಭೂತ ದಯೆಯ ಅಂಗಿಯ ತೊಡಿರಿ ಬಹಳ ಸಂತೋಷಿಖ್ಯಾತಿ ಎಂಬ ಕುಪ್ಪಸ ಹಾಕಿರಿ ಬಹಳ ಸಂತೋಷಿ4ಸೂಸಲಿ ಚಿದಾನಂದ ಕೃಪೆಯಿಂದಿಗೆ ಬಹಳ ಸಂತೋಷಿವಾಸವಮಾಡಲಿ ನಮ್ಮಲ್ಲಿ ಬಗಳೆ ಬಹಳ ಸಂತೋಷಿ5
--------------
ಚಿದಾನಂದ ಅವಧೂತರು