ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ
ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ
ಕುಂದರದಾನನ ಸುಂದರ ಕಾಯನೆ ಬಾ 1
ನೀರಜ ನೇತ್ರನೆ ಮಾರಸ್ವರೂಪನೆ ಬಾ 2
ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | 3
ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | 4
ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | 5