ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಎನ್ನಿರೊ -ಹರಿ ಗೋವಿಂದ ಎನ್ನಿರೊ ||<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವಿಂದನ ನಾಮವ ಮರೆಯೆದಿರಿರೊ ಪ.ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು |ಸಂಭ್ರಮದರಸುಗಳೈದು ಮಂದಿ ||ಡಂಭಕತನದಿಂದ ಕಾಯುವ ಜೀವವ |ನಂಬಿ ನಚ್ಚಿ ಕೆಡಬೇಡಿ ಕಾಣಿರೊ 1ನೆಲೆಯು ಇಲ್ಲದಕಾಯ ಎಲವಿನ ಹಂದರವು |ಬಲಿದು ಸುತ್ತಿದ ಚರ್ಮದ ಹೊದಿಕೆ ||ಮಲಮೂತ್ರಂಗಳು ಕೀವುಗಳು ಕ್ರಿಮಿಗಳು |ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ 2ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ |ಹರಿಯೇ ಸರ್ವೋತ್ತಮನೆಂದೆನ್ನಿರೊ ||ಪುರಂದವಿಠಲನ ಸ್ಮರಣೆಯ ಮಾಡಲು |ದುರಿತಭಯಂಗಳ ಪರಿಹರಿಸುವುದು3
--------------
ಪುರಂದರದಾಸರು
ಶ್ರೀ ಸದ್ಗುರು ಭೀಮಾ ಶಂಕರಲಿಂಗ |ಭವಬಾಧೆ ಭಂಗಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಧರಿಸಿದಿ ಶಿರದಲ್ಲಿ ಸುರಗಂಗಾ |ಕೊರಳೊಳು ಶೋಭಿಸುವಭುಜಂಗ|ಹರ ಹುಲಿ ತೊಗಲನು ಮಾಡಿದಿ ಶಯ್ಯಂಗ1ಭವಹರಮುನಿಮನ ಚಿತ್ ಶೃಂಗಾಭಕ್ತಚಕೋರಶೇಷಾಂಗಪಯನಿಧಿಜಾವರಸಖಶಂಕರ ಲಿಂಗ2ಕಮಲಜ ಜನಕನ ಸುತ ಅನಂಗಗೆ ಮುನಿದಿ |ಉರಿ ನಯನದಿಭಂಗ|ಹಿಮಗಿರಿಜಾ ಪಾರ್ವತಿಗಿತ್ತ ಅರ್ಧಾಂಗ3
--------------
ಜಕ್ಕಪ್ಪಯ್ಯನವರು
ಹೇಳಲಾಗದು ತತ್ವ ಹೇಳಲಾಗದು ಜ್ಞಾನಖೂಳಮೂಳರಾದ ಕುಹಕಿಗಳಿಗೆಪನಾರುತಿಹ ತೊಗಲನು ಕಡಿದನಾಯಿ ಮುಖದ ಮುಂದೆದಾರವಟ್ಟದಲಿ ತುಪ್ಪವ ನೀಡಲು ಅರಿವುದೆಘೋರಸಂಸಾರ ವಿಷಗಟ್ಟಾಗಿ ಹಿಡಿದವಗೆಸಾರಬೋಧೆಯನರಿಯಲು ತಿಳಿಯುವುದೇ1ಗೊಜ್ಜಲ ತೃಣವನು ತಿಂಬ ಗಾರ್ಧಭನ ಮುಂದೆಸಜ್ಜಿಗೆಯ ತಂದಿಡಲಿಕೆ ಅದನರಿವುದೆಲಜ್ಜೆಯಹ ನಾನಾ ಮೋಹ ಪಾಶಲಿಪ್ಪರಿಗೆಸಜ್ಜನ ಶಾಸ್ತ್ರವನೊರೆಯಲದು ತಿಳಿವುದೇ2ದೊಡ್ಡಕ್ಕಚ್ಚನೆ ಕುಡಿವ ಗೊಡ್ಡೆಮ್ಮೆಯ ಮುಂದಕೆಲಡ್ಡುಗೆಯ ತಂದಿಡಲಿಕೆ ಅದನು ತಿಳಿವುದೇದಡ್ಡ ಬುದ್ಧಿಯು ಬಲಿತು ದೊಡ್ಡನಾದವಗೆದೊಡ್ಡ ಚಿದಾನಂದ ಬ್ರಹ್ಮವು ತಿಳಿವುದೇ3
--------------
ಚಿದಾನಂದ ಅವಧೂತರು