ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಜಯದೇವ | ಶಂಕರ | ಜಯ ಪಾರ್ವತಿ ಮನೋಹರ ಪ ರವಿಕೋಟಿ ತೇಜಂಗ ಸ್ಮಿತವದನ | ಭವಗಜ ಪಂಚಾನನಾ 1 ಸ್ಮರಹರ ಫಾಲಾಕ್ಷತ್ರಿಪುರಾರೀ | ಸುರಮುನಿಜನ ಸಹಕಾರಿ 2 ಇಹಪರ ಸುಖದಾತಾ ಪಾವನಾ | ಮಹೀಪತಿ ಸುತ ಜೀವನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭೂತ ಬಡೆದಿತೊ | ಬ್ರಹ್ಮಭೂತವ ಬಿಡಿಸುವರಾರಮ್ಮ ಪ ಪೃಥ್ವಿ ಆಪ ತೇಜಂಗಳನೆಲ್ಲ ನುಂಗಿತು |ಮತ್ತೆ ಸಮೀರ ಸಹ ಆಕಾಶವ |ಚಿತ್ತ ಹಂಮಿನ ಮೂಲಕ ಹವಣಿಸುತಿದೆ |ಕರ್ತು ತಾನಾಗಿ ಸುಮ್ಮನೆ ಕೂತಿತಮ್ಮಾ 1 ಕಳವಳ ಕಳೆದೀತು ಒಳ್ಳೆ ಬೆಳಗಾದೀತು |ಸುಳದ್ಹಾಂಗೆ ಸುಳದೀತು ಅಳಿವಿಲ್ಲದೆ |ಮೂಲ ಪ್ರಕೃತಿಯ ಮೇಲೇರಿ ನಿಂತಿತು |ಸೊಲ್ಲದಿಂ ಸೋಂಕಲು ಬಲು ಭಯವಮ್ಮಾ 2 ದಿಮ್ಮನೆ ಬಡದೀತು ಹಂಮನೆ ನುಂಗೀತು |ನಮ್ಮಗೆ ಎಲ್ಲಿಹುದು ಉಲಗಡೆಯಮ್ಮಾ |ಬ್ರಹ್ಮಾಂಡದಾಚೀಲಿ ಭೂತ ಕುಣಿಯುತಿದೆ |ಭೀಮಾಶಂಕರನ ಮನಿ ದೈವವಮ್ಮಾ 3
--------------
ಭೀಮಾಶಂಕರ