ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಮಾಂ ರಂಗೇಶ ಪ ರಕ್ಷಮಾಂ ರಂಗೇಶ ರವಿಕೋಟಿಸಂಕಾಶಪಕ್ಷಿವಾಹನ ಶ್ರೀಶ ಭವ್ಯಗುಣಕೋಶಅಕ್ಷರಾದಿ ಪಿಪೀಲಿಕಾಂತ ಸಂ-ರಕ್ಷಕಾಮಯಹರಣ ಸರ್ವಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ಅ.ಪ. ಕಮಲದಳ ನೇತ್ರ ಕಮಲಾರಿ ಸಮವಕ್ತ್ರಕಮಲಾವಿರಚಿತ ಸ್ತೋತ್ರ ಕರಧೃತ ಗೋತ್ರಕಮಲಜ ನುತಿಪಾತ್ರ ಕರಿರಾಜಯಾತ್ರಕಮಲಧರ ಕರಕಮಲ ಸಮಪದಕಮಲ ಸಂನಿಭವಿನುತ ಕಂಧರಕಮಲ ಸಂನಿಭ ಸುಗಾತ್ರ-ಕಮಲಾಕಳತ್ರ 1 ಅನಿಮಿಷ ಸುಪ್ರೀತಾಖಿಳ ದೋಷ ನಿರ್ಧೂತಸನಕಾದಿ ಶೃತಿಗೀತ ಅರ್ಜುನಸೂತದಿನಮಣಿಕುಲಜಾತ ದೇವಕೀ ಪೋತಕನಕವಸನ ಕೀರೀಟಧರ ಕೋ-ಕನದ ಹಿತ ಕಮಲಾಪ್ತ ನಯನವನದವಾಹನವೈರಿಕುಲಘಾತ ವನಜಭವ ತಾತ2 ಅಂಗನಾಂಬರಹರಣಾನುಪಮ ಸಪ್ತಾವರಣಮಂಗಳ ಕರಚರಣ ಭಕ್ತ ಸಂರಕ್ಷಣಗಾಂಗೇಯಕೃತಸ್ಮರಣ ಕರುಣಾಭರಣರಂಗವಿಠಲ ಭುಜಂಗಶಯನ ತು-ರಂಗಧರ ಕಾವೇರಿ ತೀರ ಶ್ರೀ-ರಂಗನಿಲಯ ತುರಂಗ ಸಂಚರಣ-ಗಂಗಾಚರಣ3
--------------
ಶ್ರೀಪಾದರಾಜರು
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು