ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತಾನಂದ ಗೋವಿಂದ ಎಚ್ಚರಾಗಿರು ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ. ಪವನ ಮುಷ್ಟಿವೆಷ್ಟವಿಷವ ಶಿವನು ಗೆಲಲು ನಿನ್ನ ನಾಮ ಸ್ತವನಗೈದನೆಂದು ಮಂತ್ರ ಕವಿಗಳೆಂಬೊ ಕವನವೇನೊ 1 ಭರ್ಮಗರ್ಭಾದಿಗಳು ಪೇಳ್ದ ಕರ್ಮಕಾಂಡ ನೋಡೆ ದೇವ ಶರ್ಮ ವರದ ನಿನ್ನ ಸ್ಮರಣೆ ಮರ್ಮವೆಂದು ಒದರುತಿಹುದು 2 ಮೂರಾರು ಪುರಾಣ ಮಹಾ ಭಾರತಾದಿ ಕಾವ್ಯಾದಿಗಳ ಸಾರವರದು ನೋಡೆ ದೀನೋ- ದ್ಧಾರ ನೀನೆ ತೋರಿಕೊಂಬಿ 3 ಇಂಥನಂತಾನಂತ ಮಹಿಮ ವಂತ ನೀನೆ ಶರಣನೆಂದು ಚಿಂತಿಸುವರಾಜನರಿ- ಗಂತರಾಯವೆಂತಾಗುವುದು 4 ಚಂದನ ಮೂರುತಿಯ ನಂಬಿ ಕುಂದಿದನೆಂಬಪಕೀರುತಿಯ ಎಂದೆಂದಿಗು ವಹಿಸದಿರು ತಂದೆ ಲಕ್ಷ್ಮೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಾರಣನೇ ಇವನು ಎಲ್ಲಕ್ಕೂ ಕಾರಣನೇ ಇವನು ಪ ಕಾರಣನಿವನು ಸಾಧಾರಣನಲ್ಲನು ಮಾರಮಣನು ಕರುಣಾರಸಮಯನು ಅ.ಪ ಇಚ್ಛೆಯಿಂದಲಿ ತಾನು ಅಖಿಲ ಜಗ ತ್ಸøಷ್ಟಿಯ ಮಾಡುವನು ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು 1 ಎಲ್ಲವ ಬಲ್ಲವನು ಈಶನು ಇಲ್ಲದ ಸ್ಥಳವಿಲ್ಲ ಚಿಲ್ಲರೆ ದೈವಗಳೆಲ್ಲರು ಈತನ ಚೆಲ್ಲಾಟಗಳಿಗೆ ಉಲ್ಲಾಸಿಸುವರು 2 ಭಿನ್ನರೂಪಗಳಿಂದ ಜಗದೊಳು ತನ್ನ ಲೀಲೆಯ ತೋರ್ಪ ಸನ್ನುತ ಭಕುತಗೆ ಮನ್ನಣೆಯಿಂದ ಪ್ರ ಸನ್ನನಾಗಿ ಉನ್ನತ ಪದವೀಯಲು 3
--------------
ವಿದ್ಯಾಪ್ರಸನ್ನತೀರ್ಥರು
ಯಾಕೊ ಪಾರ್ಥನ ಹೆಸರು ಹೋಕೆ ಮಾತಿನ ಕೃಷ್ಣ ಸಾಕು ನೀ ನಮ್ಮ ಸರಿಯೇನೊ ಕೋಲಸಾಕು ನೀನಮ್ಮ ಸರಿಯೇನೊ ಬಲಿಯ ಮನೆಯ ಬಾಗಿಲ ಕಾಯ್ದು ಬದುಕಿದಿ ಕೋಲ ಪ. ಚಿಕ್ಕಂದಿನಾರಭ್ಯ ವತ್ಸಗಳನೆ ಕಾಯ್ದು ತುಚ್ಛನಾಗಿದ್ಯೊ ಜನರೊಳು ತುಚ್ಛನಾಗಿದ್ಯೊ ಜನರೊಳು ರುಕ್ಮಿಣಿಯಕೂಡಿ ಹೆಚ್ಚಿನವನೆಂದು ಹೆಸರಾದ್ಯೊ ಕೋಲ1 ಜನಿಸಿದಾಕ್ಷಣದಲ್ಲಿ ಜನನಿ ಜನಕರನಗಲಿದಿದನಗಳ ಕಾಯ್ದ್ಯೊ ವನವನ ದನಗಳ ಕಾಯ್ದ್ಯೊ ವನವನ ತಿರುಗಿದ್ದುಮನಕೆ ತಾರಯ್ಯ ಮರೆಯದೆ ಕೋಲ 2 ಬಡಿವಾರ ಬಂದ ಬಗಿ ಹೇಳೊ ಕೋಲ3 ಸತ್ಯಭಾಮೆ ನಿನ್ನ ಹೊಸ್ತಿಲ ಹೊಗಲಿಕ್ಕೆಅತ್ಯಂತ ಪದವಿ ಒದಗಿತುಅತ್ಯಂತ ಪದವಿ ಒದಗಿತು ಕೃಷ್ಣ ನಿನ್ನ ಹೆತ್ತವರ ಭಾಗ್ಯ ಅರಿವೆಯೆ ಕೋಲ4 ಹೆಂಡಿರ ಪುಣ್ಯದಿಂದ ಕಂಡೆಯಾ ಈ ಭಾಗ್ಯವ ಪಾಂಡಿತ್ಯವೆಲ್ಲೊ ಬಲವೆಲ್ಲೊಪಾಂಡಿತ್ಯವೆಲ್ಲೊ ಬಲವೆಲ್ಲೊ ಕೃಷ್ಣ ನಿನ್ನ ಪಂಡಿತರು ಕೇಳೋ ಹುಸಿಯಲ್ಲ ಕೋಲ5 ನಾರಿಯರ ಪುಣ್ಯದಿ ಏರಿದ್ಯೋ ರಥವಾಜಿ ಧೀರತನದಿಂದ ಗಳಿಸಿದ್ಯೊಧೀರತನದಿಂದ ಗಳಿಸಿದ ಗಳಿಕೆಯ ತೋರೊ ರಾಮೇಶ ನಮಗಿನ್ನು ಕೋಲ 6
--------------
ಗಲಗಲಿಅವ್ವನವರು
ಹೇಗೆ ಕಳಕೋಬೇಕೋ ಹರಿಹರಿ ನೀನೆ ಕಳೆಯಬೇಕೊ ಪ ಹ್ಯಾಗೆ ತೊಳಕೋ ಬೇಕು ತಿಳಿಯದು ಎನಗಿದು ನೀಗದಂಥ ಈ ಅಗಾಧ ರಿಣಮುಟ್ಟು ಅ.ಪ ಹೆತ್ತಮುಟ್ಟು ಅಲ್ಲ ತೊಳಕೊಳ್ಳ ಲ್ಸತ್ತ ಸೂತಕಲ್ಲ ಭವ ಸುತ್ತಿಸುತ್ತಿ ಬೆ ನ್ನ್ಹತ್ತಿ ಬಿಡದೆ ಕಾಡುತ್ತ ನೋಯಿಪ ರಿಣ1 ನಿಶ್ಚಲಯಿರಗೊಡದು ಜಗದೊಳು ತುಚ್ಛನ ಮಾಡುವುದು ಮುಚ್ಚು ಮರಿಯಾದೆಯ ಬಿಚ್ಚಿಟ್ಟು ಬಯಲಿಗೆ ಹಚ್ಚಿ ಮಾರುವಂಥ ಉಚ್ಚಿಷ್ಠ ರಿಣಮುಟ್ಟು 2 ಭಕ್ತವತ್ಸಲರಾಮ ನೀನೆ ಮುಕ್ತಿಪಥಕೆ ಸೋಮ ನಿತ್ಯ ನಿರ್ಮಲಮನ ಭಕ್ತನಿಗಿತ್ತು ರಿಣ ಮುಕ್ತನ ಮಾಡಿ ಬೇಗಂತಃಕರಣ ನೀಡೊ 3
--------------
ರಾಮದಾಸರು