ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ ಇಂಥಾ ಗುರುಗಳನೆಂದು ಕಾಣೆನಾ ನಂತ ಚೇತನರಂತರ ಬಹಿರದಿ ನಿಂತು ಕರ್ಮವವರಂತೆ ಮಾಳ್ಪಾ - ನಂತ ಮಹಿಮಾನಂತನಾಂಶಜರಿಂಥಾಅ.ಪ ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ ತುಂಗ ವಿಕÀ್ರಮ ಜಗದೀಶಾ ಶ್ರೀಹರಿ ದಾಸಾ ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ - ಪಾಂಗ ಯತಿಕುಲೋತ್ತುಂಗ ಮಾಯಿ ಮಾ - ತಂಗ ಸಂಘಕೆ ಸಿಂಗ ದುಷ್ಟ ಭು - ವಿಹಂಗ ಸ್ವಮತೋ - ಭೃಂಗ ಮನ್ಮನೋ - ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ ಕಂಗಳಿಗೆ ತಾವು ಕಂಗೊಳಿಪರಿಂಥಾ 1 ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ ಭೇಧಮತವನೆ ಸಾಧಿಸೀ ವಾದದಿ ಜೈಸಿ ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ ಭೋಧಿಸಿ ತತ್ತ್ವವ ಭೇಧಿಸಿ ಪರಮತ ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ ಹಾದಿಯ ಹಿಡಿಸಿ - ಮೋದಕೊಡುವ ಪಂಚ ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ ಶೋಧಿಸಿ ಜನಮನೋ ಖೇದಗೊಳಿಪ ಭ - ವೋಧಧಿ ದಾಟಿಸಿ ಶ್ರೀದÀನ ತೆರದಲಿ ಮೇದಿನಿಯಾಳುವರಿಂಥಾ 2 ಧಿಟ್ಟ ಗುರು ಜಗನ್ನಾಥ ವಿಠಲದೂತಾ ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ ಶಿಷ್ಟಜನರನುತ್ನøಷ್ಟದಿ ಪಾಲಿಪ ಎಷ್ಟು ಪೇಳುವುದೋ ಉತ್ಕøಷ್ಟನ ಗುಣಗಳ ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ - ಳೆಷ್ಟು ಪೇಳಲವಶಿಷ್ಟವೆನಿಪವೋ ದೃಷ್ಟಿಹೀನರಿಗೆ ದೃಷ್ಟಿ ನೀಡುವ ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ 3
--------------
ಗುರುಜಗನ್ನಾಥದಾಸರು
ಗುರುವರ್ಯರನು ಭಜಿಸೋ ರಾಘವೇಂದ್ರ ಗುರುವರ್ಯರನು ಭಜಿಸೋ ಪ ಧರೆತಲದಲಿ ಅವತರಿಸಿ ಸುಜನರನು ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ ಖಳರ ದುರ್ಮತಗಳನಳಿಸಿ ದಶಪ್ರಮತಿ ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ ಇಳೆಯೊಳು ಸುಜನಕೆ ತಿಳಿಯುವ ತೆರದಲಿ ಬೆಳಗುತಿರುವ ಪರಿಮಳ ಮುಖವರ ಗ್ರಂಥ ಗಳನು ರಚಿಸುತ ಉಳಿಸಿ ಸುಮತಿಯನು ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1 ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ ಕಂಗೊಳಿಸುತ ಚರಣಂಗಳ ಭಜಿಪರ ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ ಮಂಗಳ ತತಿಗಳ ನೀಡಿ ಅವರ ಆಘ ಭಂಗವಗೈಯುತ ಅನುದಿನದಲಿ ದ್ವಿಜ ಪುಂಗವ ನಿಕರದಿ ಪೂಜೆಯಗೊಂಬ ಉ ತ್ತುಂಗ ಚರಿತರಥಾಂಗಧರ ಪ್ರಿಯ 2 ಮುನ್ನ ಪ್ರಹ್ಲಾದನೆನೆಸಿ ಶ್ರೀ ನರಹರಿಯನ್ನು ಸತತ ಭಜಿಸಿ ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ ಯೆನ್ನಿಸಿ ಖಲಮತವನ್ನು ಖಂಡಿಸುತಲಿ ಚಿನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ ಳನ್ನು ಬೋಧಿಸುತ ತನ್ನ ಭಕುತಜನ ರನ್ನು ಹರುಷದಲಿ ಧನ್ಯರೆನಿಸಿದ ಪ್ರ ಸನ್ನ ಶ್ರೀರಾಮರ ಭಕುತ ಶಿರೋಮಣಿ 3
--------------
ವಿದ್ಯಾಪ್ರಸನ್ನತೀರ್ಥರು
ತುಂಗಾತೀರದಿ ಕಂಗೊಳಿಸುವ ಮುನಿ ಪುಂಗವರಾಯರ ನಯನದಿ ನೋಡೆ | ಮನದಿ ಕೊಂಡಾಡೆ ವರಗಳ ಬೇಡೆ ಪ ಆದಿ ಯುಗದಿ ಪ್ರಹ್ಲಾಲದನೆನಿಸಿ ಕ ಯಾದವಿನುದರದಿ ಜನಿಸುತಲಿ | ಸಖಿಜನಿಸುತಲಿ ಮಾಧವ ಪರನೆಂದುಮೋದದಿ ಸ್ತಂಭದಿ ತೋರಿದ ಧೀರನೆ 1 ಅದ್ವೈತಾಟವಿ ದಗ್ಧಕೃತಾನಲ ಮಧ್ವಮತಾಬ್ಧಿಗೆ ಭೇಶನೆಂದೆನಿಸಿ ಸದ್ವೈಷ್ಣ ವರುದ್ಧಾರಕನಾದ ಪ್ರ ಸಿದ್ಧನಾದ ವ್ಯಾಸಕರ್ಮಂದ ಕುಲೇಂದ್ರನೆ 2 ಧರಣಿ ತಳದಿ ರಾಘವೇಂದ್ರ ಸುನಾಮದಿ ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ ಕರುಣದಿ ದ್ವಿಜರಿಗೆ ಎರದು ಪೊರೆವಗುರು ಮರುತಾವೇಶದ ದೇವಸ್ವಭಾವನೆ 3 ಸ್ವಾಂತÀದಿ ಭಜಿಪರ ಚಿಂತೆಯ ಕಳೆಯಲು ಚಿಂತಾಮಣಿಯಂತೆ ಸತತ ಸಖಿಯೇ | ಸಂತತ ಸಳಿಯೇ ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ ನಿಂತ ಪರಮ ಸುಶಾಂತ ಮೂರುತಿಯೆ 4 ವಂದಿಸಿ ಸ್ತವಿಸುವ ವಂದ್ಯಾಂಧಕರಿಗೆ ಕಂದ ರಕ್ಷಿಗಳ ಕರುಣಿಸಿಹರೇ | ಕರುಣಿಸಿಹರೇ ಇಂದು ಧರಾಮರ ವಂದಿತ ಶಾಮ ಸುಂದರ ವಿಠಲನ ದಾಸೋತ್ತಮನೆ 5
--------------
ಶಾಮಸುಂದರ ವಿಠಲ
ತುಂಗಾತೀರದಿ ನೆಲಸಿಹಗೆ | ಮಂಗಳ ಗುರು ರಾಘವೇಂದ್ರನಿಗೆ | ಗಂಗಾಜನಕನ ಭಕುತ ಶ್ರೇಷ್ಠ ಯತಿ | ಪುಂಗವನೆನಿಸುತೆ ಮೆರೆವವಗೆ ||ಮಂಗಳಂ ಜಯ ಮಂಗಳಂ|| ಪ ದಾವಣಗೆರೆಯೊಳು ನಿಂದವಗೆ| ಕೋವಿದ ಭೂಸುರ ಸೇವ್ಯನಿಗೆ| ಧಾವಿಸಿ ಬರುತಿಹ ದೀನಜನಾಳಿಗೆ| ದೇವ ತರುವಿನಂತೀವನಿಗೆ ||ಮಂಗಳಂ ಜಯ ಮಂಗಳಂ|| 1 ಶುದ್ಧ ಟೀಕೆಗಳ ರಚಿಸಿದಗೆ| ಪರಿ | ಮೂರ್ತಿ ರಾಘವೇಂದ್ರನಿಗೆ ||ಮಂಗಳಂ ಜಯ ಮಂಗಳಂ|| 2 ಭಾಸುರ ರಘುವೀರಾರ್ಚಿಪಗೆ| ಶ್ರೀಶಕೇಶವ ಪಾದಾರಾಧಕಗೆ ಸುರ| ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ||3
--------------
ಶ್ರೀಶ ಕೇಶವದಾಸರು
ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ. ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ. ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ 1 ಒಂದು ಅರಿಯದ ಮಂದಮತಿಯಳ ಬಂದು ಕಾಯೋ ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ 2 ತುಂಗಾತೀರದಿ ನಿಂತಿರುವಿ ಮಂಗಳಾಂಗನೆ ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ 3 ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ 4 ರಾಮ ದೂತನೆ ಎನ್ನ ಮೊರೆಯ ಲಾಲಿಸಿ ಪಾದ ಬೇಗ ತೋರಿಸೊ 5
--------------
ಸರಸಾಬಾಯಿ
ರಾಘವೇಂದ್ರರಾಯರೆಂಬ ರತುನ ದೊರೆಕಿತೋ ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ ಮಂಗಳಾರಿಗರು ತುಂಗಾತೀರದಿ ನಿಂದಿಹರೋ ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ1 ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ 2 ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ 3 ಶ್ರೀ ರಾಘವೇಂದ್ರರೂ ನಂತ ಮಹಿಮರೂ 4 ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ 5
--------------
ರಾಧಾಬಾಯಿ
ಸ್ಮರಿಸುವೆ ನಾ ನಿಮ್ಮ ಚರಣಕಮಲಗುರುವಿಜಯರಾಯಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯದಿವಿಜರ ವೇಷದಿಂದವನಿಯೊಳುದಿಸಿದ್ಯೊ ವಿಜಯರಾಯಭಾಗವತಧರ್ಮವಹಿಸಿ ತ್ರಿರಾವರ್ತಿ ವಿಜಯರಾಯಕಂಚಿಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ ವಿಜಯರಾಯಮರಿಯಾದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯಮಹಿಯಲ್ಲಿ ತಿರುಗಿ ಸರ್ವಕ್ಷೇತ್ರದಿ ವಿಜಯರಾಯಗುರೂಪದೇಶಕನಾಗಿ ವ್ಯಾಸಕಾಶಿಯಲ್ಲಿದ್ಯೊ ವಿಜಯರಾಯಸ್ವಚ್ಛವಾಗಿ ಗಂಗಾತೀರ ವಾಸಮಾಡಿ ವಿಜಯರಾಯತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ ವಿಜಯರಾಯಮಧ್ವಮತದಸಾರಕವನದಿ ರಚಿಸಿದ್ಯೊ ವಿಜಯರಾಯಶುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯಸದಾಚಾರಸಂಪತ್ತು ಮಧುಕರವೃತ್ತಿಯು ವಿಜಯರಾಯಭಕ್ತರ ಅಪಮ್ಯತ್ಯುಬಿಡಿಸಿ ಆಯುನಿತ್ತೆ ವಿಜಯರಾಯನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ ವಿಜಯರಾಯಭಕ್ತಜನರಿಗೆ ತತ್ವೋಪದೇಶವ ಮಾಡಿ ವಿಜಯರಾಯಎಲ್ಲರಲಿ ಸಿರಿನಲ್ಲನ ಅಂಶವ ವಿಜಯರಾಯಬಲ್ಲಿದನೀನೊಂದುರೂಪದಿ ಎನ್ನಲ್ಲಿ ವಿಜಯರಾಯನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ ನಾವು ವಿಜಯರಾಯಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ ವಿಜಯರಾಯಈಗ ಈ ಯುಗದಿ ಸಾಧನವೆಂಬುದು ಕಾಣೆ ವಿಜಯರಾಯಗುರುನಿನ್ನ ಕರುಣಕವಚತೊಟ್ಟ ಭಕುತರ್ಗೆ ವಿಜಯರಾಯ
--------------
ಗೋಪಾಲದಾಸರು