ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ದಯವಂತನೋ | ಮಂತ್ರ ಮುನಿನಾಥನೊ ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ ವರ ಪ್ರಹ್ಲಾದನು | ಮರಳಿ ಬಾಹ್ಲೀಕನು | ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1 ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2 ದುರಿತ ಕಳೆವ ಶಕ್ತನು ತರಣಿ ನಿಭಗಾತ್ರನು | ಪರಮಸುಚರಿತ್ರನು 3 ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4 ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5
--------------
ಶಾಮಸುಂದರ ವಿಠಲ
ರಾಘವೇಂದ್ರ ತೀರ್ಥ ಬೋಧಿಸುಭಾಗವತ ಗತಾರ್ಥರಾಘವ ಪದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜ ಪುರುಷಾರ್ಥ ಪ ತುಂಗಾತಟವಾಸ ರಾಘವಸಿಂಗನ ನಿಜದಾಸಪಂಗು ಬಧಿರ ಮುಖ್ಯಾಂಗ ಹೀನರನಪಾಂಗ ನೋಟದಿ ಶುಭಾಂಗರ ಮಾಡಿ 1 ಪಾದೋದಕ ಸೇವಾರತರಿಗಗಾಧ ಫಲಗಳೀವಬೂದಿ ಮುಖದ ದುರ್ವಾದಿಗಳೋಡಿಸಿಸಾಧು ಜನರಿಗಾಲ್ಹಾದ ಬಡಿಸುತಿಹ 2 ಭುಜಗಧರಾಧಿಪನಾ ವೊಲಿಸಿದಸುಜನ ಶಿರೋಮಣಿಯೇನಿಜ ಪದ ಯುಗಳವ ಭಜಿಸುವ ಜನರಿಗೆ(ವಿಜಯದ ನೆನಿಸುವ ದ್ವಿಜಕುಲನಂದನ)ವಿಜಯದ ಗೋಪತಿ ವಿಠಲ ನಂದನ 3
--------------
ಗೋಪತಿವಿಠಲರು
ರಾಘವೇಂದ್ರಸ್ವಾಮಿಗಳ ಸ್ತೋತ್ರ ಕಂಡು ಧನ್ಯನಾದೆ ಗುರುಗಳ - ಕಣ್ಣಾರೆ ನಾಕಂಡು ಧನ್ಯನಾದೆ ಈ ಗುರುಗಳ ಪ ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ - ನರಸಿಂಗನಂಘ್ರಿ ಭಜಕರಿವರ 1 ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯ ಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ 2 ಸೋ ಅಹಂ ಎನ್ನದೆ ಹರಿಯ ದಾಸೋ ಅಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ 3
--------------
ಮೋಹನದಾಸರು
ವಂದಿಸು ಗುರು ಸತ್ಯಸಂಧ ಮುನಿಯಾ ವೃಂದಾವನಕೆ ಹರುಷದಿಂದ ಎಂದೆಂದು ಪ ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು ಜಂಗಾದ್ರಿ ಮೊದಲಾದ ಕ್ಷೇತ್ರಗಳನು ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1 ಭೂದೇವನುತ ಸತ್ಯಬೋಧ ಮುನಿವರ ಕರ ವೇದಿಕದೊಳುದ್ಭವಿಸಿದ ಕಲ್ಪವೃಕ್ಷ ಸಾಧುಜನರಿಗೆ ಬೇಡಿದಿಷ್ಟಾರ್ಥಗಳ ಮೋದದಿ ಕೊಡುವ ಮಹಿಮರ ಕಂಡು 2 ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ ಧೀಮಂತ ಜನರಿಗುಪದೇಶಿಸಿ ನಿರಂತರ ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
--------------
ಜಗನ್ನಾಥದಾಸರು
ಶ್ರೀ ರಾಘವೇಂದ್ರರು ಎಂಥಾ ದಯವಂತರು ರಾಘವೇಂದ್ರರಿನ್ನೆಂಥ ಮಹಿಮ ಪೂರ್ಣರುಚಿಂತಿತ ಫಲರೆಂದೆನಿಸಿ ವೃಂದಾವನದಂತರ್ಗತ ಪೊಳೆವರು ಪ ಪೃಥುವೀಧರನ ದಂತೋದ್ಭವೆಯಾದಆ ತುಂಗಾತಟ ಕೃತ ಮಂದಿರರುಧೃತರಾಷ್ಟ್ರನೃಪರ ಮಕ್ಕಳ ಕೊಂದವನ ಸ ನ್ಮತಾಂಬುಧಿ ಚಂದ್ರಮರು ಪ್ರತಿಯಿಲ್ಲ ಇದರ ಸರಿಯ ಮಹಾತ್ಮೆಯು ಯಾವಯತಿಯೊಳಗೆ ಕಾಣರು ಸತತಾದಿತೇಯ ಸ್ವಭಾವಪೂರ್ಣರಾಗಿ ಇಷ್ಟಾರ್ಥ ಕೊಡುತಿಹರು 1 ಶ್ರಾವಣ ಬಹುಳತೃತೀಯ ರಥ ಸಂತೆ ನೆರೆದಂತೆಳೆವರು 2 ಕರುಣಾರ್ಣವ ಎಂಬ ಗುಣ ನಿಮ್ಮಲ್ಲಿದ್ದಕಾರಣದಿ ಪ್ರಾರ್ಥಿಸುತಿಹರುಧೊರೆ ನೀವು ಸಲಹಬೇಕಲ್ಲವೆ ಮರೆತರೆ ಇನ್ನಾರುಪೊರೆಯುವರು ಕರಿರಾಜವರದ ಐಹೊಳೆಯ ವೆಂಕಟಗೆಪ್ರೀತಿ ಪಾತ್ರರು ಗುರು ಸಾರ್ವಭೌಮ ನಿಮ್ಮಂಘ್ರಿಯುಗಳಲ್ಲಿ ಭಕ್ತಿಯಲಿ ಉದ್ಧರಿಸುವರು 3
--------------
ಐಹೊಳೆ ವೆಂಕಟೇಶ
ಶ್ರೀ ರಾಘವೇಂದ್ರರು ನೋಡಿದೆ ನಾ ಗುರುವರನ ಈರೂಢಿಗಧಿಕ ರಾಘವೇಂದ್ರರಾಯನ ಪ ವೃಂದಾವನ ರೂಪನ ಭಕ್ತ ವೃಂದಕಾನಂದ ಕೊಡುವ ಕಲ್ಪದ್ರುಮನಕಂದರ್ಪನ ಗೆಲಿದವನಅಂದಣದಲಿ ನಾಲವಿಂದ ಮೆರೆವರ 1 ಕಮಲಾಕ್ಷಿಮಾಲಾ ಕಂಧರನ ಈ ಕ್ಷಿತಿಯೊಳು ಮಧ್ವಮತಾಬ್ಧಿ ಚಂದಿರನತಮವೈರಿಸಮತೇಜದವನ ಸಾಧುಸುಮನ ಪ್ರಿಯ ಸುಧೀಂದ್ರ ಕರಜನ2 ಶೃಂಗಾರಾಭರಣಭೂಷಣ ದಿವ್ಯಅಂಗ ಪುಣ್ಯದಿ ಲೋಕ ಪವಿತ್ರ ಗೈಯುವನತುಂಗಾತಟ ಮಂದಿರನ ಮಹಮಂಗಲಪ್ರದ ಮಂತ್ರಾನಿಲಯದೊಲ್ಲಭನ 3 ಲೇಸಾದ ಭಿಕ್ಷು ಎನಿಪನ ತನ್ನದಾಸರಾ ಸ್ತುತಿಗೆ ಸರ್ವಾರ್ಥದಾಯಕನಭಾಸುರಾಗಮ್ಯ ಮಹಿಮನ ಜಗಧೀರ ನರಹರಿದೂತ ದೇವಸ್ವಭಾವನ 4 ಪರವಾದಿ ಹೃದಯದಲ್ಲಣನ ದ್ವೈತಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನಪರಿಮಳಾದಿ ಗ್ರಂಥ ಬೀರಿದನ ಕರಿವರದ ಐಹೊಳೆ ವೆಂಕಟನ ಕಿಂಕರನ 5
--------------
ಐಹೊಳೆ ವೆಂಕಟೇಶ