ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಹು(ಣು?)ವೆ ಎನ್ನ ಮನೋಹರ ಎಂದಿ[ಗೆಕಾ] ಹುದಿನ್ನೆಂದಿಗೆ ಬಂದೆ ಭವಭವಭವವೀ ದುಃಖದಿ ನೊಂದೆನೊ ರಂಗನಂಘ್ರಿ ಚರಣವ ಪ. ಮಂಗಳಾಂಗನ ಮಾಧವನ ಕೋಟಿ ಅಂಗಜಜನಕವಿಲಾಸನ ಗಂಗಾಜನಕನ ಗರುಡವಾಹನ ತುಂಗವಿಕ್ರಮನಂಘ್ರಿ ಚರಣವ 1 ಕಂತುಜನಕನ ಕಮಲನಾಭನ ಸಂತತದ ಸರ್ವೇಶನ ಯಂತ್ರವಾಹಕ ಎನ್ನ ಒಡೆಯನ ಚಿಂತಾಯ[ಕ]ನ ಶ್ರೀ ಚೆಲುವಚರಣವÀ 2 ಪರಮಪುರುಷನ ಪುಣ್ಯನಾಮನ ಶರಣುಜನಸರ್ವೇಶನ ಕರುಣಿ ಹೆಳವನಕಟ್ಟೆರಂಗನ ಚರಣ[ವ]---------- 3
--------------
ಹೆಳವನಕಟ್ಟೆ ಗಿರಿಯಮ್ಮ
ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ ಮಕರ ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1 ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2 ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3 ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4 ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5 ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6 ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7 ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8 ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9 ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10
--------------
ಅನ್ಯದಾಸರು
ನಿತ್ಯ ಭೂತಗಳಟ್ಟಿ ಕಿಂಕರರನು ಸಲಹುತಲಿ ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ ಶಂಕರನಾರಾಯಣರ ಪ ಪಡುವಿನ ಗಡಲಿನ ತಡಿಯಲಿ ವಿಪ್ರನ ಗಡಣದ ನಡುವೆ ಕಾನನದಿ ಒಡೆದುಮೂಡಿದ ದೇವರೊಡೆಯನ ಕೊಡಗಿಯ ಮೃಡನಾರಾಯಣರ ವರ್ಣಿಸುವೆ1 ದರ್ಪನ ವೈರಿಯಪಿತನ ತಪ್ಪದೆ ನಂದಿ ಗರುಡವಾಹನನಾ- ಗಿಪ್ಪದೇವನ ಕಂಡೆನಿಂದು 2 ಮಂಜುಳ ಸರ್ಪಾಭರಣನ ಕಂಡೆನು ಮಂಜುಳ ಹಾರಪದಕನ ಕುಂಜರ ಚರ್ಮವು ಪೊಂಬಟ್ಟೆವಸನವು ಕೆಂಜೆಡೆ ಮಕುಟದ ಪ್ರಭೆಯು 3 ಪುರಹರ ಗೌರೀಶಲಕ್ಷ್ಮೀಶ ಗಿರಿವಾಸ ವೈಕುಂಠವಾಸ ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ- ತ್ರ್ಯರ ಮನ್ನಿಸುವ ಕರುಣದಲಿ 4 ವ್ರತದಿಂದ ನೋಡುವ ಯತಿಗಳ ಸಂದಣಿ ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ ಮತಿಗೆ ಮಂಗಳವೀವುತಿದಿದಕೊ 5 ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ ಮಂಗಳಾರತಿಯ ಸಂಭ್ರಮವು ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ ಹಿಂಗದೆ ನೋಡುವ ಜನರು 6 ಅಯನದ ಶ್ರೀಬಲಿ ದೀಪದುತ್ಸಹಗಳು ಭುವನದ ನಡುವೆ ಕಾನನದಿ ಹಯವದನನೆಂಬ ಕೊಡಗಿಯ ದೇವನ ನಯದಿ ನರರಿಗೆ ತುತಿಸಲಿನ್ನಳವೆ 7
--------------
ವಾದಿರಾಜ
ಪರಮ ಸಾಹಸವಂತ ಧೀಮಂತ ಹನುಮಂತ ಪ ಸರಸರನೆ ತಾ ಬೆಳೆದ ತಾ ಮುಗಿಲ ಪರ್ಯಂತ ಅ.ಪ. ಇಳೆಯಿಂದ ನಭವ ಪರಿಯಂತವೇಕಾಕೃತಿಯು ಬೆಳಗುತಿರೆ ನೋಡಲತಿ ಚೋದ್ಯವು ವಿಲಸಿತದ ವಿಂಧ್ಯಗಿರಿಯಂತೆ ಶೋಭಿಸಿತು ಫಲಗುಣಾಗ್ರಜ ನೋಡಿ ಬೆÉರಗಾಗುತಿರಲು 1 ಪಿಂಗಾಕ್ಷಿಗಳು ದಿಕ್ತಟಂಗಳನು ಬೆಳಗುತ್ತ ಕಂಗೊಳಿಸುತಿರ್ದುದಾ ಸಮಯದಿ ಶೃಂಗಾರ ಕಾಂತಿಯಿಂ ತುಂಗವಿಕ್ರಮನ ಉ ತ್ತುಂಗ ದೇಹವು ದಿವ್ಯರಂಗು ಒಡೆದೆಸೆಯೆ 2 ಶರಧಿಶತಯೋಜನ ನೆರೆದಾಂಟಿದಾ ದೇಹ ಅರಿಭಯಂಕರ ದೇಹ ಗುರುತರದ ದೇಹ ಕರಿಗಿರೀಶನ ಚರಣ ಸರಸೀರುಹ ದ್ವಂದ್ವ ಪರಿಚರ್ಯಕ್ಕನುವಾದ ಪರಮದೇಹವಿದೆನಲು 3
--------------
ವರಾವಾಣಿರಾಮರಾಯದಾಸರು
ಬಾರೊ ಗೋವಿಂದ ಹೃತ್ಸರೋಜಕ್ಕೆ ಪ ಗಾರ ಗುಣಪೂರ್ಣ ಮಾರಜನಕನೆ ಅ.ಪ ಅಂಡಜವಾಹನ ಬ್ರಹ್ಮಾಂಡ ಗುಣಪೂರ್ಣ ತೊಂಡರ ಪಾಲಿಪೊ ಪುಂಡರೀಕಾಕ್ಷನೆ 1 ತುಂಗವಿಕ್ರಮನೆ ಸಂಗೀತಲೋಲನೆ ಮಂಗಳಮಹಿಮನೆ ಗಂಗೆಯ ಪಿತ ಹರಿ 2 ಸಿರಿ ಸಹಿತ ನಿಲಯನೆ ಶೌರಿ ವಾರಿಜದಳ ನಯನ 3 ವಿಜಯ ರಾಮಚಂದ್ರವಿಠಲರಾಯನೆ ಅಜವಂದಿತ ನಿನ್ನ ಭಜನೆಯ ಪಾಲಿಸೊ 4
--------------
ವಿಜಯ ರಾಮಚಂದ್ರವಿಠಲ
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ
ವಾರಿಜನಯನಗೆ ಜಯ ಮಂಗಳ ಶುಭ ಮಂಗಳಾ ಪ ನೀರಧಿಶಯನಗೆ ಜಯ ಮಂಗಳ ಶುಭ ಮಂಗಳಂ ಅ.ಪ ಭವ ಭಯ ಹರನಿಗೆ ಪವನಜನಮಿತಗೆ ಭುವನಸುಂದರನಿಗೆ ಜಯಮಂಗಳಂ ಕುವಲಯಶ್ಯಾಮಗೆ ನವಮಣಿಮಾಲಗೆ ದಿವಿಜಸಂಸೇವ್ಯಗೆ ಶುಭಮಂಗಳಂ1 ಕರುಣಾಜಲಧಿಗೆ ಶರಣರ ಪೊರೆವಗೆ ನರಹರಿರೂಪಗೆ ಜಯ ಮಂಗಳಂ ಪುರುಷೋತ್ತಮನಿಗೆ ದುರಿತಸಂಹಾರಗೆ ಶುಭ ಮಂಗಳಂ 2 ಗಂಗೆಯ ಜನಕಗೆ ಮಂಗಳರೂಪಗೆ ಸಂಗರಧೀರಗೆ ಶುಭಮಂಗಳಂ ತುಂಗವಿಕ್ರಮನಿಗೆ ಇಂಗಿತವರಿವಗೆ ಮಾಂಗಿರಿಯರಸಗೆ ಜಯ ಮಂಗಳಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಾರತಿ ಕೀರ್ತನೆಗಳು259ಮಂಗಳಂ ಜಯ ಮಂಗಳಂ | ಜಯಮಂಗಳಂಪರಮೇಷ್ಟಿಜನಕ ಉಪೇಂದ್ರಾ ಪವೇದ ಉದ್ಧಾರ ಶ್ರೀಬಾದರಾಯಣಮಧು |ಸೂದನ ಅಮರರ ಕಾಯ್ದ ದಯಾಬ್ಧೀ 1ನಂದಗೋಪಾತ್ಮಜಸಿಂಧೂರಪಾಲ ಮು- |ಕುಂದಪಾಲಿಪುದೆನ್ನ ಇಂದೀವರಾಕ್ಷಾ 2ತುಂಗವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀವಿಹಂಗವಾಹನನೇ 3ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ 4ಪ್ರಾಣೇಶ ವಿಠಲ ಶ್ರೀಮಾನಿನಿಪ್ರತಿಶತ|ಮೀನಾಂಕಲಾವಣ್ಯಭಾನುಪ್ರಕಾಶಾ 5
--------------
ಪ್ರಾಣೇಶದಾಸರು