ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

101. ಹರಿಹರ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿ | ದುರುಳ ಗುಹಾಸುರನ ಕೊಂದರೆಂದೂ | ಮರಳು ಮಾನವರು ತಿಳಿಯಾದೆ ನುಡಿವರು | ಹರಿಹರರೀರ್ವರು ಏರವಾದರೆ ಅಂದು | ಹರನು ಮೈಮರೆದು ನಿಂದನ್ಯಾತಕೆ | ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ | ಸುರರ ಓಡಿಸಿ ಪ್ರಬಲನಾಗಿರೆ | ಪರಮ ಪುರುಷ ಹರಿ ನರಹರಿರೂಪವನ್ನು | ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ | ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು | ಮೆರದಾನೇನೋ ಅವತಾರ ಮಾಡಿ | ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ | ಚರಿಸೂವ ಪರಬೊಮ್ಮ ಗುಣಪೂರ್ಣ ನೂ | ತುರಗವದನ ಮತ್ಸ್ಯಕೂರ್ಮಸೂಕರ ವೇಷ | ಧರಿಸಿದಾತನು ಕಾಣೋ ಯುಗಯುಗದೀ | ಕರುಣಾಸಿಂಧು ನಮ್ಮ ವಿಜಯವಿಠಲರೇಯಾ | ಹರಿಹರ ರೂಪ ಧರಿಸಿದ ಕಾಣಿರೋ 1 ಮಟ್ಟತಾಳ ದೀಪದ ಉಪಕಾರ ದಿನಪಗೆ ಏನಾಹದು | ಭೂಪತಿಗಾಳಿನ ಅನುಸುಣ್ಯಾತಕೆ | ಕೋಪವನು ತಾಳಿ ಭೃಗುಮುನಿ ಕೈಯಿಂದ | ಶಾಪನ ಕೈಕೊಂಡನಂದು ಭಸ್ಮಾ ಸುರನ | ಆ ಪತ್ತಿಗಾರದೆ ಮೊರೆ ಇಡಲು ಕೇಳಿ | ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ | ಗೋಪಾಲ ವಿಜಯವಿಠಲ ಹರಿಹರ | ರೂಪವು ತಾನಾದ ಅನೇಕ ರೂಪನೊ 2 ತ್ರಿವಿಡಿತಾಳ ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ | ಣಾಂತರದಲ್ಲಿ ಪೇಳುತಿವೆ ನೋಡಿಕೊ | ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ | ನಖ ಮೌಳಿ ಅಭೀದಾನು | ವೈರಿ ಅರ್ಧಂಗವನೆ ತಾಳಿ | ನಿಂತಿಪ್ಪ ಶ್ರೀ ಹರಿಯಾ ಕೂಡಾ | ನಂತಾ ಕಲ್ಪರೆ ನಿಗಮಾ ಗೋಚರ ಸರ್ವ | ಸ್ವತಂತ್ರನು ಒಬ್ಬಾರ ಹಂಗಿಗಾನೆ | ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು | ಸಂತತವಿಟ್ಟರೆ ಸರಿಯಾಗೋದೆ | ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ | ಚಿಂತೆಮಾಡಿದನೆಂಬೊ ವಾರ್ತಿಯೇನೂ | ನಿತ್ಯ ಮೇಹಕವನೆ ತೋರಿ | ಅಂತು ಗಾಣದ ನರಕಕ್ಕೆ ಹಾಕೂವ | ದಂತಿ ವರದ ದೇವ ವಿಜಯವಿಠಲ ಜಗ | ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ 3 ಅಟ್ಟತಾಳ ಹರಗೆ ಈ ಪ್ರತಿಪ ಉಳ್ಳರೆ ಭಸುಮಾ | ಸುರಗಂಜಿ ಹರಿಗೆ ಮೊರೆ ಇಡುವನೇನೊ | ಜರಸಂಧನಿಗೆ ಇತ್ತಾವರ ಮತ್ತೇನಾಯಿತು | ಮರಳಿ ರಾಮನಕೂಡ ಶರಧನು ಪಿಡಿದು ಮೈ | ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು | ಕರಿ ರಾಜಾ ಆ ಮೂಲಾವೆಂದು ಕರೆವಾಗ | ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ | ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ | ಹರಿಹರರೂಪಾ ಶ್ರೀ ವಿಜಯವಿಠಲರೇಯಾ | ಚರಿತೆಯ ತೋರುವ ಅವರ ಯೋಗ್ಯತಾದಷ್ಟು 4 ಆದಿತಾಳ ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು | ಪಶುವಾಹನನಾಗಿ ಇಪ್ಪದಿದೆ | ಅಸುರಾರಿಯಲ್ಲದೆ ಅನ್ಯರೂಪಗಳಲ್ಲ | ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ | ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ | ಶಶಿಧರ ಹರಿರೂಪ ದೊ[ಳು]ಕೂಡುವನೆ | ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ | ಕುಶನ ಬಯಸುವನು ಸಮನಾಗಿ ನಿಲ್ಲುವನೆ | ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ | ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ 5 ಜತೆ ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ | ರಂಗ ವಿಜಯವಿಠಲ ಹರಿಹರ ಮೂರುತಿ 6
--------------
ವಿಜಯದಾಸ
ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ಪ ಭಾರ್ಗವಿ ಭಜಕರ ವರ್ಗವ ಕರುಣದಿ ಅ.ಪ ಸರ್ಗಸ್ಥಿತಿ ಲಯಕಾರಣೆ ಜಗಕೆ ಸು ಮಾರ್ಗದಿ ನಡೆಯಲನುಗ್ರಹ ಮಾಡೆ 1 ವಂದಿಸುವೆನು ಭವಬಂಧವ ಬಿಡಿಸ್ಯಾ ನಂದವ ಕರುಣಿಸು ನಂದಾತ್ಮಜಳೆ 2 ಕಡಲತನುಜೆ ತವಕಡು ಕರುಣದಲಿ ಬಡಜಭವ ಮುಖರು ಪಡೆದರು ಪದವನು 3 ನಭ ಸಂಚಾರಿಣೆ ಆಯುಧ ಭವ ಭಯಹಾರಿಣಿ ನಮೊನಮೋ4 ಇಂದಿರೆ ಪದುಮ ಸುಮಂದಿರೆ ತವಪದ ದ್ವಂದ್ವದಿ ಭಕುತಿಯ ಪೊಂದಿ ಸುಖಿಸುವಂತೆ 5 ವೀರರೂಪಿ ಅಸÀುರಾರಿಯೆ ತವಪರಿ ವಾರದ ಭಯವನು ತಾರದಿರೆಂದಿಗೂ 6 ಮಂಗಳಕೃಷ್ಣ ತರಂಗಿಣೆ ಕಾರ್ಪರ ತುಂಗಮಹಿಮೆ ನರಸಿಂಗನ ರಾಣಿ7
--------------
ಕಾರ್ಪರ ನರಹರಿದಾಸರು
161ರಂಗ ಒಲಿದ ದಾಸರಾಯರ - ಪಾದಪದುಮಕಂಗಳಿಂದ ನೋಡಿದಾವರ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರಾ - ಏನು ಪೇಳಲಿವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವನಿಂಥಾ ಅ.ಪಪರಮಭಕುತರೆನಿಸಿ ಸತತ-ಹರಿಯ ಮಹಿಮೆತುತಿಸಿಪಾಡುತಾ- ತಮ್ಮ ಮನದಿಹರಿಯ ಮೂರ್ತಿಯನ್ನೇ ನೋಡುತಾ - ಸಾಧುಜನರದುರಿತರಾಶಿ ದೂರಮಾಡುತಾ- ನಿತ್ಯದಲ್ಲಿಹರುಷದಿಂದ ಸ್ತಂಭದೊಳಗೆ -ಇರುವೆವೆಂಬಭಾವಜನಕೆಅರುಹಿ ಜನರ ಈಪ್ಸಿತಾರ್ಥ ಕರೆದು ನೀಡಿ ಮೆರೆವೊರಿಂಥಾ 1ಪರಮತತ್ವ ಸಾರಪುಂಜ - ಹರಿಕಥಾಮೃತಸಾರಹರುಷದಿಂದ ರಚಿಸಿ ಹರಿಯ -ಚರಣಭಜಿಪ ಜನಕೆ ಉಣಿಸಿಪರಮ- ಗೋಪ್ಯ-ಭಾವತಿಳಿಸಿದಾ-ಅರಿಪು ಮಾಡಿರೆಂದು ಪೇಳಿದಾ - ಮೂಢ ಜನಕೆದೊರೆಯದೆಂದು ತಾನು ಪೇಳಿದಾ - ತನ್ನ ಜನಕೆಪರಮಸುಲಭ ತೋರಿ ಮುದದಿಪರಿಪರಿಯಲಿ ಪೊರೆವೊರಿಂಥಾ 2ಧಾತನಾಂಡ - ಮಧ್ಯದಲ್ಲಿ ಜಾತರಾದ ಸ್ವೀಯ ಜನರಮಾತೆ- ಜನಕರಂತೆಅವರಮಾತನಡಸಿಕೊಡುವ ಜಗ -ನ್ನಾಥವಿಠಲನೊಲಿದನೀತಗೆ - ಜಗದಿ ತಾನುನಾಥನಾಮ ಕಾಣೆನೆಂದಿಗೆ - ದಾಸಜನಕೆನಾಥರೆನಿಸಿ ಜಗದಿ ಮಹಾ - ದಾತರಾಗಿ ಸಕಲಭೀಷ್ಠ -ವ್ರಾತಸಲಿಸಿಗುರುಜಗ-ನ್ನಾಥದಾಸವಿಠ್ಠಲ ಪ್ರೀತಿಗೊಳಿಪರಿಂಥಾ 3
--------------
ಗುರುಜಗನ್ನಾಥದಾಸರು
ರಂಗ ಒಲಿದ ದಾಸರಾಯರ - ಪಾದಯುಗ್ಮಕಂಗಳಿಂದ ನೋಡಿದಾವರÀ - ಪಾಪಂಗಳೆಲ್ಲಹಿಂಗಿಪೋಪವಲ್ಲೊ ಸತ್ವರ - ಏನು ಪೇಳಲೀವರಾ ಪತುಂಗಮಹಿಮೆ ತೋರಿ ಜನಕೆಮಂಗಳಾವ ಕೊಡುವರಿಂಥಾ ಅ.ಪಬ್ಯಾಗವಾಟನಾಮ ಗ್ರಾಮದಿ - ನಾರಸಿಂಹಭಾಗವತಆದಿ ಶಾಸ್ತ್ರಭೋಗಿಶಯನ ಕರುಣದಿಂದಆಗ ಈಗ ಎನದೆ ಸದಾನುರಾಗ ತೋರುವಂಥ 1ಮುದದಿ ದಾಸ್ಯಭಾವದಿಂದಲಿ - ಜಗದಿ ಜನರಹೃದಯಭಾವಪೂರ್ತಿಯಿಂದಲಿ- ಪ್ರೀತಿಗೈದುಪದುಮನಾಭನ ಪ್ರೀತಿಯಿಂದಲಿ - ಗುಣಗಳನ್ನುಭುಧರಮ್ಯಾಳಸಂಗದಿಂದಮುದದಿ ಮನವ ಧರಿಸಿನಿತ್ಯಪದುಮನಾಭನ ಭಜನಿಗೈಯುತ - ತತ್ವಸಾರವದನದಿಂದುಚ್ಭಾರ ಗೈಯುತ - ತೀರ್ಥಯಾತ್ರೆಮುದದಿಕಾಯಧರಿಸಿ ಹರಿಯ ಭಜನೆಗೈದು ಸುಖಿಸಿದಂಥ2ಖ್ಯಾತ ಶುಕ್ಲ ಬಾದ್ರಪದದಿ ನವಮಿ ಜಗ -ನ್ನಾಥ ವಿಠಲಪಾದಪದುಮದಿ ಮನವೆ ಮೊದಲುಭೂತಕಾಶಮಾರ್ಗ ಸಂಗದಿ - ಹೃದಯ ಮಂಡಲಧಾತನಿಂದ ಕೂಡಿ ವಿ -ಧಾತನಾಂಡ ಭೇಧಿಸಿ ಗುರುಜಗ -ನ್ನಾಥ ವಿಠಲಪಾದಪೊಂದಿದಾ - ಈತನಂಥಆತುರಾದಿ ಕೊಡುವ ನಂದನ - ಏನು ಮಹಿಮೆವಾತದೇವನ ನಿಜಾವೇಶದಿಂದ ಯುಕ್ತರಾದ 3
--------------
ಗುರುಜಗನ್ನಾಥದಾಸರು