ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ ಜಗದುದ್ಧಾರಳಿಗೆ ಪ ರಂಗನ ಪಾದದಿ ಗಂಗೆ ಉದ್ಧವಿಸಲು ಅಂಗದಿಂದಾಗಲೆ ತಾನುದಿಸಿ ಬಂದು ಗಂಗಾಧರನ ದೇಹದಿ ಬಂದು ವೇಣಿಯ ಸಂಗಮವಾಗಿ ಬಂದ ದೇವಿಗೆ ಅ.ಪ ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ ಕನ್ಯಾರಾಶಿಗೆ ಗುರು ಬಂದಿರಲು ವಾಸವ ಮಾಡಲು ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ 1 ಇಂದ್ರನ ಪಾಪವ ನದಿಗಳಿಗೆ ಬಿಡಲು ನಿಂದಿತರಾಗಿ ದುಃಖಿಸುತ ಪೋಗಿ ಬಂದ ಕೃಷ್ಣವೇಣಿಗೆ ಗಂಗಾದೇವಿಗೆ 2 ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು ನೇಮದಿಂ ಬಾಗಿನಂಗಳ ಕೊಡಲು ಮಾನಿನಿಯರೆಲ್ಲ ಮೌನದಿಂ ಕೊಡಲು ಮಾಂಗಲ್ಯವಿತ್ತು ಸಲುಹುವ ದೇವಿಗೆ 3 ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು ಋಷಿಗಳು ಪಾಷಾಣವಾಗಿರಲು ನಕ್ರ ಮೊದಲಾದ ಜಂತುಗಳೆಲ್ಲ ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು 4 ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ ನಂದನ ನಳ ಹರಿಶ್ಚಂದ್ರರೆಲ್ಲ ಬಂದು ಸ್ನಾನವ ಮಾಡೆ ಅವರ ಪಾಪಗಳ ಆ ನಂದದಿಂ ಕಳೆದ ಕೃಷ್ಣವೇಣಿಗೆ 5 ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ [ಒಲವಿ]ಂದ ಸ್ನಾನಪಾನವ ಮಾಡಿದವರಿಗೆ [ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ 6
--------------
ಯದುಗಿರಿಯಮ್ಮ
ಶ್ರೀರಾಮ ತುಳಸಿವರ ಶ್ರೀಕೃಷ್ಣ ತುಳಸಿ ಪ ನಿನ್ನ ಪಾದವು ಚತುರ್ಮುಖನ ಭಾಗವು ದೇವಿ ನಿನ್ನ ತುದಿ ಕೈಲಾಸನಾಥ ಶಿವ ಭಾಗವು ನಿನ್ನ ಮೈಯೊಳು ಸಕಲ ದೇವತೆಗಳಿಹರು 1 ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ ರಂಗನಾಥ ಸಮೇತ ದಿವ್ಯ ಕಾವೇರಿಯು ಮಂಗಳೆಯೆ ನಿನ್ನಾವಾಸವಾಗಿಹರು 2 ಕಾಶಿ ಕಂಚಿಯು ಮಧುರೆ ನೈಮಿಷ ಹರಿದ್ವಾರ ಭಾಸುರದ ಗೋಕರ್ಣ ದ್ವಾರಕಾವತಿಯು ಶ್ರೀಶೈಲ ಹಿಮವಂತ ಸರ್ವ ಸುಕ್ಷೇತ್ರಗಳು ಭಾಸಮಾಗಿರುತಿಹವು ನಿನ್ನ ನೆರಳಿನಲಿ 3 ನಿನ್ನ ಬೃಂದಾವನವೆ ವೈಕುಂಠ ಕೈಲಾಸ ನಿನ್ನ ತೀರ್ಥವೆ ಸಕಲ ಪುಣ್ಯತೀರ್ಥ ನಿನ್ನ ದರ್ಶನವೆಲ್ಲ ದೇವತಾ ದರ್ಶನವು ನಿನ್ನ ಪೂಜೆಯೆ ಸಕಲ ದೇವತಾ ಪೂಜೆ 4 ನೀನಿರುವ ದೇಶದಲಿ ರೋಗಗಳ ಭಯವಿಲ್ಲ ನೀನಿರುವ ದೇಶದಲಿ ಯಮನ ಭಯವಿಂತಿಲ್ಲ ನೀನಿರುವ ದೇಶದಲಿ ಭೂತ ಭಯವಿಲ್ಲ 5 ಗಂಧ ಪುಷ್ಪವು ಧೂಪ ದೀಪ ನೈವೇದ್ಯದಿಂ ವಂದಿಸುತ ನಿನ್ನ ನಾಂ ಪೂಜೆಗೈಯುವೆನು ಇಂದಿರೆಯ ಸೌಭಾಗ್ಯ ಸಂತತಿಯ ನೀನಿತ್ತು ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವಂ6 ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ ಜಯ ಮಂಗಳಂ ತುಳಸಿ ಮುರಹರನ ರಮಣಿ ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿಜಯ ಮಂಗಳಂ ತುಳಸಿ ಧೇನುಪುರ ದೇವಿ 7
--------------
ಬೇಟೆರಾಯ ದೀಕ್ಷಿತರು