ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಡುಗಾಣೆನಯ್ಯ ಜಗದೊಳಗೆ ಪ. ಬೇಡಿದಭೀಷ್ಟಗಳ ಕೊಡುವ ಹನುಮ ಭೀಮ ಮಧ್ವರಾಯ ಅ.ಪ. ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ ದಿಟ್ಟನಾಗಿ ನಿರಂತರದಿ ಹನುಮಾ 1 ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು ವರ ವಿಭೀಷಣ ಸುಗ್ರೀವರ ಪುಚ್ಛದಲಿ ತರುಬಿದಿಯೊ ಸಮರ್ಥ ಹನುಮಾ 2 ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ ಖಳರ ಸೀಳಿದ್ಯೊ ನೃಪರ ನಿಂದೆ ಯುದ್ಧದಲಿ ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3 ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ ವಜ್ರ ಭೇದ ಮತಾಂಬುಧಿಗೆ ಚಂದ್ರ ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ ಸಾಧುಜನರಿಗೆ ತತ್ವಬೋಧಿಸಿದೆ ಮೇದಿನಿಯೊಳು ಮಧ್ವರಾಯ ನಿಮಗೆ 4 ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು ವಂದಿಸಿ ರಾಮಕಥೆಯ ಪೇಳಿದೆ ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5
--------------
ಅಚಲಾನಂದದಾಸ
ಶರಣು ಶಂಕರ ಭೂಷಣಾದ್ರಿಗೆ ಶರಣು ಅಭಯಾಚಲನಿಗೆ ಪ ಶರಣು ಖಗಮೃಗ ತರುಲತಾಂಕಗೆ ಶರಣು ವಿಂಶತಿ ನಾಮಗೆ ಅ.ಪ. ವರಹ ನೀಲಾಂಜನ ಕನಕಋಷಿ ಗರುಡ ಘನ ನಾರಾಯಾಣಾ ಉರಗ ತೀರ್ಥಾನಂದ ಶ್ರೀ ಪು ಷ್ಕರ ವೃಷಭ ವೈಕುಂಠಗೆ 1 ಜ್ಞಾನ ಪರ್ವತ ಮೇರು ಶೃಂಗಗೆ ಶ್ರೀನಿವಾಸ ಸುಕ್ರೀಡಗೆ ಪಂ ಚಾನನಾಹ್ವಯ ವೆಂಕಟಾದ್ರಿಗೆ ಕ್ಷೋಣಿಯೊಳು ಸುರಮಾನ್ಯಗೆ 2 ರತುನ ಕಾಂಚನ ಶ್ರೀನಿವಾಸನ ಪ್ರತಿಮೆಯಂದದಿ ಪೊಳೆವಗೆ ಕೃತಿರಮಣ ಜಗನ್ನಥವಿಠಲಗೆ ಅತುಳ ಮಂಗಳನೆನಿಪಗೆ 3
--------------
ಜಗನ್ನಾಥದಾಸರು