ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂ ತಾಪಗಳು ಕಳೆದುವಿಂದು ಪ ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ ಕಾಪಾಡುತಿರುವರೆಂದು ಅ.ಪ ಪೂರ್ಣರಿದ್ದರು ಲೋಕದಿ ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ ನಿರ್ಣಯಗಳಿತ್ತರಿವರು 1 ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ ಪಾಂಗ ಪಾತ್ರರು ಪೂಜ್ಯರು ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು ಹಿಂಗಿತೆಮ್ಮಯ ಕೊರತೆಯು 2 ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ ಮಾನಸ ಪ್ರಸನ್ನರಿವರು ಮೌನಿವರ ವ್ಯಾಸತೀರ್ಥರಲಿ ಪರಮಾದರದಿ ಜ್ಞಾನಧಾರೆಯ ಕರೆದರು 3
--------------
ವಿದ್ಯಾಪ್ರಸನ್ನತೀರ್ಥರು
124-2ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಆರಣೀ ಸಜ್ಜನರ ಸೌಭಾಗ್ಯ ಏನೆಂಬೆಸೂರಿವರ ಸತ್ಯವರ್ಯ ಭಾವಿ ಸತ್ಯಪ್ರಿಯರಆರಾಧಿಸಿ ಕಳುಹಿಸಿದ ಸ್ವಲ್ಪ ಕಾಲದಲೆಆರಣಿಗೆ ಬಂದರು ಸತ್ಯವಿಜಯಾರ್ಯ 1ಸಂಸ್ಥಾನ ಮೂರ್ತಿಸ್ಥ ಹರೀಪೂಜೆ ವೈಭವವುನಿತ್ಯಪ್ರವಚನ ಪಾಠ ಕೀರ್ತನೆ ಏನೆಂಬೆಸತ್ಯವಿಜಯರು ಯುಕ್ತ ಕಾಲದಲಿ ದೇಹಅದಾರುಢ್ಯ ಹೊಂದಿದರು ರಾಜಗೆ ಹೇಳಿದರು 2ತಮ್ಮ ತರುವಾಯ ಸಂಸ್ಥಾನ ಸರ್ವಾಡಳಿತಶ್ರೀಮನೋಹರ ಹರಿಪ್ರಿಯರು ಸತ್ಯವರ್ಯಸುಮನೋಹರ ಸತ್ಯಪ್ರಿಯ ತೀರ್ಥ ನಾಮದಲಿರಮಾರಮಣನ ಸೇವೆಗೆ ವಹಿಸಬೇಕೆಂದು 3ಆದ ಕಾರಣ ಆ ಸ್ವಾಮಿಗಳ ಕರೆತರಿಸಿಭಕ್ತಿ ವಿನಯದಿ ಮಠವ ಒಪ್ಪಿಸಬೇಕೆಂದುಹಿತದಿ ಆಜ್ಞಾಪಿಸಿ ಹರಿಪುರಯೈದಿದರುಚೈತ್ರ ಕೃಷ್ಣ ಪುಣ್ಯದಿನ ಏಕಾದಶಿ ದ್ವಾದಶಿಲಿ 4ಆರಣೀರಾಜನು ಸತ್ಯವರ್ಯ ತೀರ್ಥರಲಿಅರಿಕೆ ಮಾಡಿ ಸ್ವಾಮಿಗಳು ಕೆಲವು ದಿನಮೇಲ್ಆರಣಿಗೆ ಪೋದರು ಶ್ರೀಮಠದ ಆಡಳಿತಹರಿಪ್ರೀತಿ ಸೇವೆಗೆ ಕೊಂಡರು ತಾವು5ಮೊದಲೇವೆ ಶ್ರೀ ಸತ್ಯವರ್ಯ ತೀರ್ಥರ ಮಠಸಂಸ್ಥಾನ ವೈಭವದಿ ಪ್ರಕಾಶಿಸುತ್ತಿತ್ತುಸತ್ಯ ವಿಜಯರ ಕೋರಿಕೆಯಂತೆ ಈವಾಗಹೊಂದಿದರು ಸತ್ಯವಿಜಯರ ಸಂಸ್ಥಾನ 6ಸತ್ಯಾಭಿನವರ ಪದ್ಧತಿಯಲ್ಲಿ ಶ್ರೀಮಠಸತ್ಯಪೂರ್ಣ ಸತ್ಯವಿಜಯರಿಂದ ವೈಭವದಿಇದ್ದ ಆಮಠ ಪೀಠ ಅಲಂಕರಿಸಿದರೀಗಸತ್ಯವರ್ಯ ವೈರಾಗ್ಯ ನಿಧಿಯು ಶ್ರೀಮಾನ್ 7ಬಾದರಾಯಣರಾಮ ಯದುಪತಿಯ ಸೇವೆಗೆಪ್ರೀತಿಗೆ ಸ್ವಾಮಿಗಳು ಮಠವನ್ನು ಹೊಂದಿಸತ್ಯವಿಜಯರು ಕೋರಿದಂತೆ ತಮ್ಮಯನಾಮಸತ್ಯಪ್ರಿಯತೀರ್ಥರೆಂದು ಕೊಂಡರು ಮುದದಿ 8ಧನ ಸತ್ಯಪ್ರಿಯ ತೀರ್ಥರುವಿಜೃಂಭಣೆಯಿಂದ ಚರಿಸಿ ಪುರಜನರ್ಗೂರಾಜನಿಗೂ ಫಲ ಮಂತ್ರಾಕ್ಷತೆಗಳ ಕೊಟ್ಟುರಾಜ ಮಾರ್ಯಾದೆ ಕೊಂಡುಹೊರಟರು ಅಲ್ಲಿಂದ 9ಆಂಧ್ರದೇಶದ ಕಡಪ ಉತ್ತರ ಕರ್ನಾಟಕಮತ್ತು ದಕ್ಷಿಣ ಕರ್ನಾಟಕ ಶ್ರೀರಂಗಇಂಥ ಸ್ಥಳಗಳಲ್ಲಿ ಸಂಚಾರ ಮಾಡುತ್ತಾಹಿತದಿ ಅನುಗ್ರಹಿಸಿದರು ಭಕ್ತವೃಂದಕ್ಕೆ 10ಪೀತಾಸಿಂಗ ರಾಘವಜಿ ಮುರಾರಿ ಮೊದಲಾದಕೃತಜÕ ಜನ ಪ್ರಮುಖರ ಭಕ್ತಿ ಯುತವಾದಭೂದಾನ ಗ್ರಾಮದಾನ ಮಾಡಿದ್ದ ಸ್ವೀಕರಿಸಿಶ್ರೀದನಿಗೆ ಅರ್ಪಿಸುತ ಒಲಿದರು ಸಜ್ಜನಕೆ 11ರಾಯಚೂರು ಹರಿಯಾಚಾರ್ಯರೆಂಬ ವೈಷ್ಣವಕಾಯವಾಙ್ಮನ ಇದ್ದ ಬ್ರಾಹ್ಮಣ ದಂಪತಿಯುಪ್ರಿಯ ವತ್ಸರುಗಳೊಡೆ ಸ್ವಾಮಿಗಳ ಕಡೆ ಬಂದುವಿನಯದಿ ನಮಿಸಿ ನಿಂತರು ಮಠದಲ್ಲಿ 12ಹರಿಯಾಚಾರ್ಯರ ಮಕ್ಕಳಲಿ ರಾಮಾರ್ಯಸ್ಫುರದ್ವರ್ಚಸ್ ಯುತ ಬಹುಚೂಟಿಯಾದ ಮಗನುಶ್ರೀ ಶ್ರೀಗಳು ಆ ಹುಡುಗಗೆ ಮಠದಲ್ಲಿಶಾಸ್ತ್ರಾಭ್ಯಾಸಾದಿಗಳ ಒದಗಿಸಿದರು 13ಕಾಲಕ್ರಮದಲ್ಲಿ ವಟುಗೆ ವಿವಾಹ ಮಾಡಿದರುಮಕ್ಕಳು ರಾಮಚಾರ್ಯರಿಗೆ ಎರಡುಮಾಲೋಲ ಇಚ್ಛೆಯಿಂ ಸ್ವಾಮಿಗಳು ದಕ್ಷಿಣಸ್ಥಳ ಯಾತ್ರೆ ಗೈದರು ಸೇತು ಸಮೀಪ 14ಮಾನಾಮಧುರೆಯ ವೇಗವತೀ ತೀರವುತನ್ನ ಮಠವನ್ನು ಸ್ಥಾಪಿಸಿದರು ಅಲ್ಲಿಘನಮಹಾ ಸೂರಿಯು ರಾಮಚಾರ್ಯರನ್ನತನ್ನ ಸಮೀಪದಲ್ಲೇ ನಿಲ್ಲಿಸಿದರು 15ಬಹು ವರ್ಷ ಸಂನ್ಯಾಸ ರತ್ನರಾಗಿ ಬೆಳಗಿವಹಿಸಿ ಸಂಸ್ಥಾನವ ಏಳು ವರ್ಷಶ್ರೀಹರಿಗೆ ಪ್ರಿಯರಾಮಾಚಾರ್ಯರಿಗೆ ಸಂನ್ಯಾಸವಿಹಿತದಿ ಇತ್ತರು ಶ್ರೀ ಸ್ವಾಮಿಗಳು 16ಸತ್ಯಪ್ರಿಯ ಗುರುವರ್ಯ ತಮ್ಮ ಪ್ರಿಯ ಶಿಷ್ಯರಿಗೆಸತ್ಯಬೋಧ ತೀರ್ಥವೆಂಬ ಸಂನ್ಯಾಸ ನಾಮವನ್ನಿತ್ತುಚೈತ್ರ ಶುದ್ಧ ಹದಿಮೂರನೆ ಪುಣ್ಯ ದಿನದಿಯದುಪತಿಯ ಧ್ಯಾನಿಸುತ ಹರಿಪುರಯೈದಿದರು 17ಮತ್ತೊಂದು ಅಂಶದಲಿ ಬೃಂದಾವನದಲ್ಲಿನಿಂತಿಹರು ಅಶ್ವಾಸ್ಯಧ್ಯಾನಪರರಾಗಿಹಿತದಿ ಕೊಡುತಿಹರು ವಾಂಛಿತವ ಶರಣರಿಗೆಸದಾನಮೋ ಮಾಂಪಾಹಿ ಗುರುವರ್ಯ ಶರಣು 18ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 19 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು