ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ಪ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ ಬಂದಿದ್ದನೋ ಏನೋ 1 ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ ಕರ್ಮ ಮಾಡಿದ್ದೆನೊ | ಜನಪತಿಗಳ ಮಾತು ಕೇಳದೆ ಧರ್ಮಕ್ಕೆ | ಅನುಕೂಲನಾಗಿದ್ದೆನೊ | ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ | ಉಣಿಸಿ ಸುಖಪಡಿಸಿದ್ದೆನೊ | ವನಗಳನು ಕಡಿದು ದೇವಾಲಯವ ಕಟ್ಟಿಸಿ | ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ 2 ಉತ್ತಮನು ಮನೆಗೆ ಬಂದಾಗ ಮಾಡುವಂಥ | ಸತ್ಕರ್ಮ ತೊರೆದಿದ್ದೆನೋ | ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ | ಹತ್ತೆಂಟು ಕಟ್ಟಿಸಿದೆನೊ | ದತ್ತಾಪಹಾರವನು ಮಾಡಿ ಅದರಿಂದನಗ್ನಿ- ಹೋತ್ರವನು ಸಾಧಿಸೆದೆನೊ | ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ- ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ3
--------------
ವಿಜಯದಾಸ
ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ
ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1 ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2 ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ ವಿಠಲ ನಿನ್ನ ದಯವಾಗಲಿ ಹರಿಯೆ 3
--------------
ಶ್ರೀಪಾದರಾಜರು
ನಾ ನಿನಗೇನ ಬೇಡುವುದಿಲ್ಲ - ಎನ್ನಹೃದಯಕಮಲದೊಳು ನೆಲಸಿರು ಹರಿಯೆ ಪಶಿರ ನಿನ್ನ ಚರಣಕೆರಗಲಿ -ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ||ನಿರುಮಾಲ್ಯ ನಾಸ ಘ್ರಾಣಿಸಲಿ -ಎನ್ನಕರಣ ಗೀತಂಗಳ ಕೇಳಲಿ ಹರಿಯೆ 1ನಾಲಗೆ ನಿನ್ನ ಕೊಂಡಾಡಲಿ ಎನ್ನತೋಳು ಕರಂಗಳ ಮುಗಿಯಲಿ ಹರಿಯೆ ||ಕಾಲು ತೀರ್ಥಯಾತ್ರೆಗೆ ಪೋಗಲಿ -ಮನಓಲೈಸಿ ನಿನ್ನನು ಸ್ಮರಿಸಲಿ ಹರಿಯೆ 2ಚಿತ್ತ ನಿನ್ನೊಳು ಮುಳುಗಾಡಲಿ -ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ||ತತ್ತ್ವಯೋಗಾಭ್ಯಾಸಕ್ಕಾಗಲಿ -ಉಕ್ಕಿಸತ್ಯ ಮೂರುತಿ ನಮ್ಮಪುರಂದರವಿಠಲ3
--------------
ಪುರಂದರದಾಸರು
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಸಂಸಾರವೆಂಬ ಸಾಗರವನುತ್ತರಿಸುವರೆಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.ಯತಿಯಾಗಬೇಡ ವೈರಾಗ್ಯವರಿತು ಸಕಲವ್ರತವ ಮಾಡುವೆನೆಂಬ ನೇಮ ಬೇಡ ||ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡ ||ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |ವನಜಾಕ್ಷ ನಾಮವೊಂದೇ ಸಾಕು ಮರುಳೆ 2ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ -ತಾರ್ಥನಾದೆನೆಂಬ ಹೆಮ್ಮೆ ಬೇಡ ||ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** 3
--------------
ಪುರಂದರದಾಸರು