ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ದುರ್ಗತಿಗೆ ಆವಾನಂಜನೊ ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಪ ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ ಬಲುದೂರ ತಿರುಗಾಡಿ ಬಪ್ಪನೇಕೆ ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ ಪಾದ ನೆಳಲು ಸೇರಿದವ 1 ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ ಕಾನÀನದಲಿ ಬಂದು ಸೇರನೇಕೆ ದಾನ ಧರ್ಮಂಗಳ ಮಾಡದೆ ಇರನೇಕೆ ದಾನವಾರಿಯ ಕಾಣುತಲಿಪ್ಪವ 2 ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ ಅಡಿಗಡಿಗೆ ಜಪಮಣಿ ಎಣಿಸನೇಕೆ ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ 3 ಓದದೆ ಇರನೇಕೆ ವೇದ ಪಠಿಸನೇಕೆ ವೇದಮಂತ್ರ ರಚಿಸದರನೇತಕೆ ಓದನವೀಯದೆ ಬಾಳುತಲಿ ಇರನೇಕೆ ಮಾಧವನ ಚರಣಾರಾಧನೆ ಮಾಳ್ಪ 4 ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ ವ್ಯರ್ಥ ದಿವಸವೆಂದು ಅನಿಸಲೇಕೆ ಆರ್ಥಿಯನ್ನು ನೋಡಿ ಆಟ ಆಡುವನೇಕೆ ತೀರ್ಥಪದನ ದಿವ್ಯತೀರ್ಥ ಬಯಸುವವ 5 ವ್ರತವು ಮಾಡನೇಕೆ ಕಥಿಯ ಕೇಳನೇಕೆ ಸತಿಯ ಸಂಗಡ ನಿತ್ಯರಮಿಸನೇಕೆ ಚತುರ ಸಾರೆ ಉಂಡು ಹಾಗೇ ಇರನೇಕೆ ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ6 ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ ಕರದೊ ಮತ್ತಾವದೋ ಅದರ ವರ್ಣಾ ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ- ತೊರೆದು ಕಾಣೊ ಹಣೆ ನೋಡದೆ ಮಹಾ 7
--------------
ವಿಜಯದಾಸ
ಮುಖ್ಯಕಾರಣ ವಿಷ್ಣು ಸ್ವತಂತ್ರನೆಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ ಪ. ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ 1 ಧ್ವನಿ ವರ್ಣಉಭಯ ಶಬ್ದದ ವಾಚ್ಯನು ನೀನೆಗುಣದೇಶಕಾಲ ಕರ್ಮದನು ನೀನೆತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ 2 ಹಯಾಸ್ಯ ಧನ್ವಂತ್ರಿ ವೃಷಭ ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು ಆದೆ ಕೃಪಾಳುವೆ ಶ್ರೀಶ 3 ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-ಚೇತನನು ಸರಿ ನೀನು ಸುಮ್ಮನಿರಲುಯಾತರವ ನಾನಯ್ಯ ನಿನ್ನಧೀನವು ಎಲ್ಲಚೇತನನಹುದೊ ನೀ ಚಲಿಸೆ ಚಲಿಸುವೆನು 4 ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆತಿಳಿಸೊ ಸೋತ್ತುಮರೆಲ್ಲ ತಿಳಿದ ಶೇಷತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿಚಲಿಸದಲೆ ಮನ ನಿಲಿಸೊ ಗೋಪಾಲವಿಠಲ 5
--------------
ಗೋಪಾಲದಾಸರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ ಪ.ತೀರ್ಥಪದನ ಭಜಿಸಿ ತಾ ಕೃ - |ತಾರ್ಥನಾಗದವನ ಜನುಮ ಅಪಒಂದು ಶಂಖವುದಕದಿಂದ |ಚೆಂದದಲಭಿಷೇಕ ಮಾಡಿ ||ಗಂಧ - ಪುಷ್ಪ ಹರಿಗೆ ಅರ್ಪಿಸಿ |ವಂದನೆ ಮಾಡದವನ ಜನುಮ 1ಮುಗುಳುದೆನೆಯ ಎಳೆ ತುಳಸಿ ದ - |ಳಗಳ ತಂದು ಪ್ರೇಮದಿಂದ ||ಜಗನ್ಮೋಹನ ಪೂಜೆಯ ಮಾಡಿ |ಚರಣಕೆರಗದವನ ಜನುಮ 2ಕಮಲ ಮಲ್ಲಿಗೆ ಸಂಪಿಗೆ ಜಾಜಿ |ವಿಮಲ ಕೇದಗೆ ಪ್ರೇಮದಿಂದ ||ಕಮಲನಾಭನ ಅರ್ಚನೆ ಮಾಡಿ |ಕರವ ಮುಗಿಯದವನ ಜನುಮ 3ಪಂಚಭಕ್ಷ್ಯ ಪಾಯಸಘೃತ |ಪಂಚಾಮೃತ ಹರಿಗರ್ಪಿಸದೆ ||ಮುಂಚೆ ಉಂಡು ಹೊರಗೆ ತಾ ಪ್ರ - |ಪಂಚಮಾಡುವವನ ಜನುಮ 4ಸಜ್ಜನಸಂಗ ಮಾಡದವನ |ದುರ್ಜನ ಸಂಗವ ಬಿಡದವನಅರ್ಜುನಸಖಪುರಂದರ |ವಿಠಲನನ್ನು ಭಜಿಸಿದವನ 5
--------------
ಪುರಂದರದಾಸರು