ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1 ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2 ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3 ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4 ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5 ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ ದಯದಿ ರಾಮರಾಮ6 ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7 ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ8 ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9 ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10 ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11 ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12 ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13 ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14 ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15 ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16 ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17 ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18 ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19 ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20 ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ21 ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22 ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23 ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24 ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25
--------------
ವಿಜಯದಾಸ
ವೈಶಾಖದುತ್ಸವ ಗೀತೆ ವರ್ಣಿಸಲಳವೆ ವೈಶಾಖದುತ್ಸವವಾ ಪ. ವೃಷಭಸೇರಿದ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ ಯರ್ಸಹಿತ ದಿಟ್ಟತನದಲಿ ಪೊರಟು ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ 1 ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ ಬಂದ ಅರ್ಜುನ ಸಾರಥಿಯು 2 ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ ಪುರುಷನು ಬರುವ ಪರಿಯನೇನೆಂಬೆ 3 ದಂತದ ಉಯ್ಯಾಲೆಮಂಟಪದಲಿ ನಿಂದು ಕಂತುಪಿತ ಕರ್ಪೂರದಚೂರ್ಣದಲಿ ಮಿಂದು ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ ಕಾಂತನು ನಡೆತರುವ ಪರಿಯನೇನೆಂಬೆ 4 ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು ಛಂದದಿಂ ರಂಭೆಯರ ಕೋಲಾಟಗಳ ನೋಡಿ ಇಂದಿರೆಯಿದಿರು ಮಂಟಪಕೆ ನಡೆತಂದ 5 ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು 6 ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ ಮುತ್ತಿನಾ ಹಾರವನು ಹಾಕಿ ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ 7 ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು ರತ್ನದಾ ಹಸ್ತದಲಿ ಅಭಯವನು ಕೊಟ್ಟು ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ 8 ಹತ್ತಿ ಹಯವನು ರಂಗ ಒಂಭತ್ತು ದಿನದಲಿ ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು ಅರ್ತಿಯಿಂ ಬಂದ ನೀರಾಳಿಮಂಟಪಕೆ 9 ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ ಬಂದು ಕಂಕಣವನ್ನು ಬಿಚ್ಚಿ ಆ ಘೃತ ಚೂತಫಲಗಳ ಸವಿದು ನಿಂದ ವೆಂಕಟರಂಗ [ಕರುಣಾಂತರಂಗ] 10
--------------
ಯದುಗಿರಿಯಮ್ಮ
ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿಮಾನವರೆಲ್ಲ ಮೌನದೊಳಗೆ ನಿಂದು ಪ ನಿತ್ಯ ಗಂಗಾ ಸ್ನಾನ 1 ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನಪರನಿಂದೆಯ ಮಾಡದಿದ್ದರೊಂದು ಸ್ನಾನಪರೋಪಕಾರ ಮಾಡುವುದೊಂದು ಸ್ನಾನಪರತತ್ತ್ವವನರಿತುಕೊಂಬುದೆ ಒಂದು ಸ್ನಾನ2 ನಿತ್ಯ ಗಂಗಾ ಸ್ನಾನ 3
--------------
ಕನಕದಾಸ
ಶ್ರೀ ರಮಣನ ಪಾದಸೇವನ ಮಾಡಿ ಬುಧರು ಪ.ಈರಮತದವರನುದಿನ ಅ.ಪ.ಮಹಾಲಕುಮಿಪಾದಸರೋರುಹದ್ವಯವ ತೋಳಲಪ್ಪಿಸ್ನೇಹವಾರ್ಧಿಯಲ್ಲಿ ಮುಳುಗಿಗಹನದಿ ಭಜಿಸುತಲಿಪ್ಪ 1ವಿಧಿಯು ನೈಜಭುಕ್ತಿಭರಿತಹೃದಯ ಸರೋವರದಲ್ಲಿಟ್ಟುಪದಸರೋಜಾವಧಿ ಇಲ್ಲದೆಮುದದಿ ಭಜಿಸಿ ಸುಖಿಸುತಿಪ್ಪ 2ಮತ್ತೆ ತನ್ನ ಭಕ್ತಿಯಲ್ಲಿಸತ್ಪದಾಬ್ಜಗಳನು ತೊಳೆದುಸತ್ತ್ರಿಪಥದ ಗಾಮಿನಿಯಳುಪೊತ್ತು ಪೂಜೆ ಮಾಡುತಿಪ್ಪ 3ಸಾಲಿಗ್ರಾಮವಾಗಿ ಭವನಮೌಳಿತೀರ್ಥದಲ್ಲಿ ತೋಯಿಸಿಮೇಲೆರಡೇಳ್ಜಗಂಗಳಘವಪಾಳುಮಾಡಿ ಪೂಜೆಗೊಂಬ 4ಮುಕ್ತರಿಗೆ ವ್ಯಕ್ತಪಾದಶ್ರೀಕರ ಪ್ರಸನ್ವೆಂಕಟವಲ್ಲಭಸುಖಮುನೀಶಗೊಶನಾಗಿಪ್ಪ 5
--------------
ಪ್ರಸನ್ನವೆಂಕಟದಾಸರು