ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಶ್ರೀ ಜಯತೀರ್ಥ ಸ್ತೋತ್ರ ಯತಿಕುಲಮುಕುಟ ಶ್ರೀ ಜಯತೀರ್ಥ ಸದ್ಗುಣಗಣ ಭರಿತ ಅತಿಸದ್ಭಕುತಿಲಿ ನುತಿಪಜನರ ಸಂ - ತತ ಪಾಲಿಸುತಲಿ ಪೃಥಿವಿಲಿ ಮೆರೆವ ಪ ಶ್ರೀ ಮಧ್ವಮತ ವಾರಿಧಿನಿಜಸೋಮ ಅಗಣಿತಸನ್ಮಹಿಮ ಆಮಹಾಭಕ್ತಾರ್ತಿಹ ನಿಷ್ಕಾಮ ಈ ಮಹಿಸುರರನು ಪ್ರೇಮದಿ ಪಾಲಿಪ ಕಾಮಿತ ಫಲದ 1 ಮಧ್ವಮುನಿಗಳಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಙÁ್ಞನ ವಿದ್ಯಾರಣ್ಯನ ಸದ್ವಾದÀದಿ ನಿಧನ ಗೈಸಿದಗುಣಪೂರ್ಣ ಅದ್ವೈತಾಟವಿ ದಗ್ಧಕೃತಾನಲ ಸದ್ವೈಷ್ಣವ ಹೃತ್ಪದ್ಮಸುನಿಲಯ 2 ಲಲಿತಾ ಮಂಗಳವೇಡಿಪÀ ರಘುನಾಥ ವನಿತಾಸಂಜಾತ ಮಳಖೇಡ ಕಾಗಿನಿ ತೀರನಿವಾಸ ಮಾಡಿಹ ಮೌನೀಶನಲವರದೇಶ ವಿಠಲನ ವಲಿಮೆಯಲಿ ಇಳಿಯೊಳು ಬೋಧಿಪ ಅಲವ ಬೋಧಾಪ್ತ 3
--------------
ವರದೇಶವಿಠಲ
ಭೂರಿಕರುಣಿ ಹನುಮ ಪಾಲಿಸುಪ.ಬೀರಕಬ್ಬಿಯ ಕೃಷ್ಣಾತೀರನಿವಾಸಭಾರತಮಲ್ಲ ಬುಧರ ಪರಿತೋಷ ಅ.ಪ.ಕರ್ತನ ನೇಮದಿ ಕಡಲ ಕಾಲುವೆ ಮಾಡಿಅರ್ತಿಲಿ ದಾಟಿ ರಕ್ಕಸರ ಪಟ್ಟಣದಿಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದಮೂರ್ತಿಬಲ್ಲಿದರಾಮನ ಬಂಟನಹುದೊ1ಭೀಕರಅಕ್ಷಮೊದಲಾದರೊದೆದುಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದುಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂಲೋಕದಿ ನಿನಗೊಬ್ಬ ಸಮನೆನ್ನಬಹುದೆ 2ಅತಿ ಘಾತಿಸಿಕೊಂಡು ಕಪಿಗಳು ರಣದಲಿಮೃತ ವಿಕ್ರಮರಾಗಿ ಹರಣಗುಂದಿರಲುಮೃತ ಸಂಜೀವನವ ತಂದು ರಕ್ಷಿಸಿದೆ ಅಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ 3
--------------
ಪ್ರಸನ್ನವೆಂಕಟದಾಸರು