ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವದೇವನಾ ಭಜಿಸು ಜಾನಕಿ ಪ್ರೇಮನಾ ಬಿಡದೆ ಇನ್ನು ಪ ಇಂದಿರೇಶನಾ ಸಕಲ ವಿಶ್ವನಾಥನಾ ಸುಂದರ ರೂಪನ ಸುಗುಣ ಸುಜನವಂದ್ಯನಾ ಸಿಂಧು ಶಯನನಾ ಚೆಲುವ ಶ್ರೀನಿವಾಸನಾ ಮಂದರಾದ್ರಿಯನೆ ಪೊತ್ತ ಮಹಿಮಾನಂದನ 1 ವಾರಿಜನಾಬನಾ ಘನ ವಾಸುಕಿಶಯನನಾ ನೀರಜ ನಯನನಾ ಕೃಷ್ಣಾ ನಿಗಮಗೋಚರನಾ ನವನೀತ ಚೋರನಾ ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ2 ಪನ್ನಗ ಭೂಷಣನಾದ ಪಾರ್ವತೀಶನಾ ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ ಹೆನ್ನ ತೀರನಿಲಯ ಸುಪ್ರಸನ್ನ 'ಹೆನ್ನ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ಸ್ವಾಮಿಪುಷ್ಕರ ತೀರನಿಲಯನಮೋಸ್ವಾಮಿವರಾಹ ವೆಂಕಟನಾಯಕಸ್ವಾಮಿಪಾಹಿಪಾಹಿ ಸ್ವಾಮಿತ್ರಾಹಿಸ್ವಾಮಿ ವರಾಹವೆಂಕಟನಾಯಕ ಪ.ಯಜÕಗಾತ್ರ ವಿಧಿನುತ ಪ್ರಭು ಶ್ರೀಯಜÕವರಾಹವೆಂಕಟನಾಯಕಯಜÕ ಭೋಕ್ತø ಹೇಮಾಂಬಕ ಹರಯಜÕವರಾಹವೆಂಕಟನಾಯಕ1ಭೂಭಯದೂರ ಧರಾಮನೋಹರಭೂವರಾಹ ವೆಂಕಟನಾಯಕಶೋಭಿತ ಬಾಲಚಂದ್ರೋಪಮಕ್ರೋಡಭೂವರಾಹ ವೆಂಕಟನಾಯಕ 2ಶ್ವೇತಾದ್ರೀಶಾರ್ಚಿತ ಪಾದಕಮಲಶ್ವೇತವರಾಹ ವೆಂಕಟನಾಯಕಪಾತಕಮೋಚಕಪ್ರಸನ್ವೆಂಕಟಶ್ವೇತವರಾಹ ವೆಂಕಟನಾಯಕ 3
--------------
ಪ್ರಸನ್ನವೆಂಕಟದಾಸರು