ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಸುವೆನು ವ್ಯಾಸಾರ್ಯ | ಸುಮನಸರಿಗತಿ ಪ್ರೀಯ ವಿಮಲಕೀರ್ತಿ ಸುಶಯ್ಯ ಯತಿವರಾರ್ಯ ಪ ಅಮಮ ನಿಮ್ಮಯ ಕೀರ್ತಿ ಪೊಗಳಲಳವೇ ಎನಗೆಸುಮನಸ ಮುನಿಯನುಗ್ರಹೀತಾ - ಖ್ಯಾತಾ ಅ.ಪ. ಕನಕ ಕಶ್ಯಿಪು ಸುತನೆ | ಧನಕನಕ ತೃಣಗಣನೆಅಣು ಘನನ ಶ್ರೀ ಚರಣ | ವನಜ ಭ್ರಮರಾ |ಮನುಜಮೃಗ ವೇಷ | ಶ್ರೀ ನರಹರಿಯ ಮೂರ್ತಿಯನುಘನವಾದ ಸ್ತಂಭದೊಳು | ಕರೆದು ತೋರಿಸಿದೇ 1 ಮತ್ತೆ ನೀ ತ್ರೇತೆಯಲಿ | ಹತ್ತು ತಲೆ ರಾವಣನಭ್ರಾತೃವಾಗವತರಿಸಿ | ಕೀರ್ತಿಯಲಿ ಮೆರೆದೇ |ಭೃತ್ಯ ಭಾವದಿ ನಮಿಸಿ | ಸತ್ಯಾತ್ಮ ಶ್ರೀಹರಿಯವಿಸ್ತರದ ಕೀರ್ತಿಯಲಿ | ಲಂಕ ಪತ್ತನವಾಳ್ದ 2 ನರಪ ಪ್ರತೀಪನಾ | ಪರಸೂನು ವೆಂದೆನಿಸಿ ಕುರುಪತಿಯ ಋಣಸೇವೆ | ಸರಿಯಾಗಿ ಸಲಿಸೀ |ಮರುತಾತ್ಮ ಭೀಮನಿಂ | ವರವನೇ ಪಡೆಯುತ್ತವರ ಕಲೀಯಲಿಯತಿ | ವರನೆನಿಸಿ ಮೆರೆದೇ 3 ಬ್ರಹ್ಮಣ್ಯಯತಿ ಕರಜ | ಬ್ರಹ್ಮ ಬ್ರಾಹ್ಮಣ ಪ್ರೀಯಬ್ರಹ್ಮಣ್ಯ ಪ್ರೀಯ ಸು | ಬ್ರಹ್ಮಣ್ಯನಾವೇಶನೇ |ಬ್ರಹ್ಮಾಸ್ಮಿ ಎಂದೆನಿಪ | ಬ್ರಹ್ಮದ್ವೇಷಿಯ ನಿಕರಬ್ರಹ್ಮಾಂಡದಲಿ ತರಿದೇ | ಬ್ರಾಹ್ಮಣರ ಪೊರೆದೇ 4 ಭಾಗವತ ಪ್ರೀಯ 5
--------------
ಗುರುಗೋವಿಂದವಿಠಲರು
ಪರಿಪಾಹಿ ಗುರು ರಾಘವೇಂದ್ರ ಪ ಶರಣರ ಪೊರೆಯಲು | ವರ ಮಂತ್ರಾಲಯಪುರದಲಿ ನೆಲಿಸಿಹೆ | ಕರುಣಿಗಳರಸಅ.ಪ. ಪಿತನ ಬಾಧೆಗೆ ಲವ | ವ್ಯಥೆಯನು ಪಡದಲೆರತಿಪತಿ ಪಿತನೆ ಸ | ರ್ವೋತ್ತಮನೆಂದೂರದೆ 1 ದ್ವಿತಿಯ ಯುಗದಲಿ | ದೈತ್ಯನಲ್ಲುದಿಸುತಸೀತೆಯ ರಮಣನ | ಪ್ರೀತಿಯ ಪಡೆದೆಯೋ 2 ದ್ವಾಪರದಲಿ ಪ್ರ | ತೀಪನ ಸುತನೆನಿಸೀ ಶ್ರೀಪತಿ ಕೃಷ್ಣನ | ಪ್ರೀತಿಯ ಪಡೆದೇ 3 ಇಷ್ಟವಿಲ್ಲದ ಪುಣ್ಯ | ಎಷ್ಟೂ ಗಳಿಸಿ ನೀವುಶಿಷ್ಟರ ಪಾಲಿಸೆಂದು | ಕೃಷ್ಣನ ಮೊರೆಯಿಟ್ಟೆ 4 ವ್ಯಾಸರಾಯರಾಗಿ | ಭೂಸುರ ಸುಜನರಕ್ಲೇಶವ ಹರಿಸಿದೆ | ದಾಸಕೂಟಕೆ ಹಿರಿಯಾ 5 ಶ್ರೀಶನರಹರಿ | ವ್ಯಾಸ ರಾಮಾ ಕೃಷ್ಣಈಸು ರೂಪಗಳಲ್ಲಿ | ವಾಸವು ವೃಂದಾವನದಿ 6 ಪರಿಪರಿ ವಿಧ ನಿಮ್ಮ | ಚರಣವ ಸ್ಮರಿಸುವನರರ ಮನೋರಥ | ಹರಿಯ ಕರುಣಿಪ 7 ಸರಸಿಜಾಸನ ಮುಖ | ಸುರಪ ದೇವರ್ಕಳಲ್ಲಹರಿಯನು ಚರರೆಂಬಾ | ವರಮತಿ ಪಾಲಿಸೋ8 ಭವ ಭಯ ಹರಿಸೀ 9
--------------
ಗುರುಗೋವಿಂದವಿಠಲರು
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು