ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮದ್ರಾಮಾಯಣ ಮಂಗಳಂ ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ ಪ ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ 1 ಭರತಸಹವಾಗಿ ಜನಿಸಿದ ರಾಮಚಂದ್ರಗೆ 2 ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ3 ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ 4 ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ 5 ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ 6 ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ 7 ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ ಬಂದ ರಾಮಗೆ 8 ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ 9 ಕರವ ಪಿಡಿದು ಪೊರಟ ರಾಮಗೆ 10 [ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ 11 ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ 12 ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ 13 ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ 14 ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ 15 ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು [ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ 16 ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ 17 ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ 18 ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ 19 ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ 20 ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ 21 ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ 22 ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ 23 ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ 24 ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ 25 ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ [ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ 26 ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ 27 ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ 28 ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ 29 ಬೆಳೆದ ಹನುಮಗೆ 30 ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ 31 [ವೀರ] ಹನುಮಗೆ 32 ದುರುಳ ರಾ ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ 33 ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ 34 ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ ಹನುಮನನಾಲಿಂಗಿಸಿದವಗೆ 35 ಬಂದ ರಾಮಗೆ 36 [ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ 37 ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು [ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ 38 ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ 39 ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ 40 ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ 41 ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ 42 ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ ಕಡಿದ ರಾಮಗೆ 43 ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು ಸುರರು ಶಿರದಿ ಧರಿಸಿದ ರಾಮಚಂದ್ರಗೆ 44 ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ 45 ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ [ಬ ರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ 46 ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ [ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ 47 ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ 48 ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ 49 ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ [ವಿ ರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ 50 ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು ರಾಮಚಂದ್ರಗೆ 51 ಪಾದ ಪಿಡಿದಿಹ ರಾಮಚಂದ್ರಗೆ
--------------
ಯದುಗಿರಿಯಮ್ಮ
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳು ಹಯಗ್ರೀವಮೂರ್ತಿ ಪ. ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ 1 ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ ಪರಶು ಪಿಡಿದು ಬಾಹುಜರ ಕಿತ್ತೆ ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳಕಾಳಿಂಗನ ಶಿರದಿ ನಿಂತೆ 2 ಪರವ್ರತೆಯರ ಮಾನಭೇದನ ಚತುರ ತುರಗವೇರಿ ನಲಿವನ ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನ 3
--------------
ವಾದಿರಾಜ
ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣ ಜಯ ಪಾವನ ದಿವ್ಯಚರಣ ಪ. ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯ ಪೂರ್ವಾಮರಪುರದಹನ ಪೂರ್ಣಗುಣಗಣ 1 ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನ ತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ 2 ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣ ಲಕುಮಿನಾರಾಯಣಶರಣ ಬಕವಿದಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯಮಂಗಳಂ ಪ ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1 ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2 ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3 ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4 ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
--------------
ವೀರನಾರಾಯಣ
ನಿನ್ನ ಭಕ್ತರು ಬಹಳ ಬಲವಂತರಹುದೈ ಜನ್ಮಜನ್ಮಕೂ ಚರಣಶರಣನ್ನ ಮಾಡೈ ಪ ಹಾರಿದನು ಹನುಮಂತ ಕಡಲ ಕಾಲುವೆಯಂತೆ ಸಾರಿ ಸೇತುವೆಯ ಕಟ್ಟಿ ನೀ ದಾಟಿದೇ ಮಾರುತಿಯು ಬಲ್ಲಿದನು ಎಂದು ನಾಂಪೇಳಲೇ ಸಾರಸಾಕ್ಷನೆ ಸಾಕ್ಷಿ ಯೇತಕೈ ಬೇರೆ 1 ಭೀಷ್ಮನನು ಬೆದರಿಸಲು ತೋರಚಾಪವ ತೊಟ್ಟ ಸೂಕ್ಷ್ಮದಿಂಹಾರಿಸಿದ ಸಂಗರದಲವನು ತೀಕ್ಷ್ಣಸಾಹಸಿಯಾತನೆಂದು ನೀಂತಿಳಿಯತೈ ಶ್ರೇಷ್ಠ ಮಾರುತಿಕೈಯ ಪರಶುವಂ ಕೇಳು 2 ಶಬರ ಶಂಕರನೊಡನೆ ಕಾದಿ ಕಡೆಯಲಿ ಗೆಲ್ದು ಪ್ರಬಲನೆನ್ನಿಸಿ ಪಾಶುಪತವನ್ನೆ ಪಡೆದಾ ಪ್ರಭುವೆ ನಿನ್ನು ಪದೇಶ ಪಡೆದ ಪಾರ್ಥನ ಕೇಳು ಸುಬಲರೈ ಜಾಜೀಶ ದಾಸರೀ ಜಗದಿ 3
--------------
ಶಾಮಶರ್ಮರು
ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣಜಯ ಪಾವನ ದಿವ್ಯಚರಣ ಪ.ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯಪೂರ್ವಾಮರಪುರದಹನ ಪೂರ್ಣಗುಣಗಣ 1ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ 2ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣಲಕುಮಿನಾರಾಯಣಶರಣ ಬಕವಿದಾರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ