ಒಟ್ಟು 16 ಕಡೆಗಳಲ್ಲಿ , 11 ದಾಸರು , 15 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಗೋವಿಂದ ವಿಠಲ | ನೀ ಪಾಲಿಸಿವಳಾ |ಸ್ವಾಪಜಾಗ್ರತ್ಸುಪ್ತಿ ಸರ್ವ ಕಾಲದಲೀ ಪ ಪತಿಸುತರು ಭಾಂದವರು | ಹಿತದಿಂದ ಸೇವಿಸುತಕೃತಿಸರ್ವ ನಿನಸೇವೆ | ಮತಿ ನೀಡೊ ಹರಿಯೇ |ಅತುಳ ವೈಭವ ತೋರಿ | ಕೃತಕಾರ್ಯಳೆಂದೆನಿಸುಕ್ಷಿತಿರಮಣ ನಿನಗಿದುವೆ ಪ್ರಾರ್ಥಿಸುವೆ ದೊರೆಯೇ 1 ಮೋದಮುನಿ ಮತ ದೀಕ್ಷೆ | ಸಾದರದಿ ಕೊಟ್ಟೈದುಭೇದಗಳ ತಿಳಿಸುತ್ತ | ಕಾದುಕೊ ಇವಳಾನೀದಯದಲಂಕಿತವ | ಓದಿಸಿಹೆ ತೈಜಸನೆಸಾದಿಸುವೆ ಅದನೀಗ | ಹೇ ದಯಾವರನೇ 2 ಸಂಚಿತ ಕಳೆವ | ಧರ್ಮ ನಿನ್ನದೊ ಸ್ವಾಮಿಭರ್ಮ ಗರ್ಭನ ಪಿತನೆ | ಕರ್ಮನಾಮಕನೇ ನಿರ್ಮಮತೆ ಮನದಿ ನಿ | ಷ್ಕಾಮ ಕರ್ಮದಲಿವಳಪೇರ್ಮೆಯಲ್ಲಿರಿಸೆಂದು | ಸ್ವಾಮಿ ಪ್ರಾರ್ಥಿಸುವೇ 3 ಸರ್ವಜ್ಞ ಸರ್ವೇಶ | ಸರ್ವದಾ ತವನಾಮಸರ್ವತ್ರ ಸ್ಮøತಿಯಿತ್ತು | ಸರ್ವಾಂತರಾತ್ಮದುರ್ವಿಭಾವ್ಯನೆ ದೇವ | ದರ್ವಿ ಜೀವಿಯ ಕಾವಸರ್ವ ಕರ್ತೃವು ನೀನೆ | ಶರ್ವ ಸನ್ನುತನೇ 4 ಸೃಷ್ಟಿಕರ್ತನೆ ದೇವ | ಕಷ್ಟಗಳ ಪರಿಹರಿಸಿಶಿಷ್ಟಳ್ಹøತ್ಕಂಜದಲಿ | ಇಷ್ಟ ಪ್ರದನಾಗೀಇಷ್ಟ ಮೂರ್ತಿಯ ಕೋರಿ | ಹೃಷ್ಟಳನ ಮಾಡೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಗೋಪಾಲ ಹರಿ ವಿಠಲ ನೀ ಪಾಲಿಸಿವಳಾ ಪ ಪಾಪೌಘಗಳ ಕಳೆದು ಸುಪವಿತ್ರಳನೆ ಮಾಡಿಕೈ ಪಿಡಿದು ಪೊರೆಯಿವಳ | ಗೋಪಾಲ ಬಾಲ ಅ.ಪ. ನಿನ್ನ ಸೇವಿಸೆ ದಾಸ | ಘನ್ನ ದೀಕ್ಷೆಯ ಮನದಿಕನ್ಯೆ ಬಹು ಭಕ್ತಿಯಲಿ | ಬಿನ್ನವಿಸಿ ಇಹಳೊಮನ್ಯು ಸೂಕ್ತೋದಿತನೆ | ಚೆನ್ನ ತೈಜಸನಾಗಿಇನ್ನು ಪೇಳ್ದಂಕಿತವ | ಕನ್ಯೆ ಗಿತ್ತಿಹನೋ 1 ಪತಿಸೇವೆ ದೊರಕಿಸುತ | ಪತಿವ್ರತೆಯಳೆಂದೆನಿಸಿಅತುಳ ವೈಭವ ತೋರಿ | ಹಿತದಿಂದ ಪೊರೆಯೋವ್ರತತಿ ಜಾಸನ ಪಿತನೆ | ಗತಿಗೋತ್ರ ನೀನೆನಿಸಿಸುತೆಸಮಳ ಪೊರೆವುದಕೆ | ಮತಿ ಮಾಡೊ ಹರಿಯೇ 2 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರತತ್ವಗಳುರುಹಿ | ಸಾರತಮ ನಿನ್ನಾಪಾರುಗಾಣದ ಮಹಿಮೆ | ಚಾರುಕೀರ್ತಿಸುವಂತೆತೋರೊ ಸನ್ಮಾರ್ಗವನು | ವಾರಿನಿಧಿ ಶಯ್ಯಾ 3 ಹರಿಗುರೂ ಸದ್ಭಕ್ತಿ | ಹಿರಿಯರಲಿ ಆಸಕ್ತಿಸರ್ವ ಕಾರ್ಯವು ಹರಿಯ ವರಸೇವೆಯೆಂಬಾವರಮತಿಯ ಕರುಣಿಸುತ | ಹರಿಯು ತಾನಿತ್ತುದನಹರುಷದಲಿ ಉಂಬಂಥ | ಅರಿವು ಕೊಡು ಸತತ 4 ಭಾವಜಾರಿಯ ತಾತ | ಪಾವಮಾನಿಯ ಪ್ರೀತಕೇವಲಾನಂದಮಯ | ಜೀವ ಪರತಂತ್ರಾಈ ವಿಧವು ಇರಲಾಗಿ | ನೀವೊಲಿಯಲಿನ್ಯಾರುಕಾವರನು ಕಾಣೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪರಮ ಲಾಲಿಸು ಪುರಾಣವನು ನೀನುದ್ಧರಿಸಿ ಲೋಕಗಳಾಳ್ವ ಧರ್ಮಸಾರವನು ಪಸ್ಟೃಯ ಕ್ರಮವ ಸೂಚಿಸಲು ಮಾಯೆಯಷ್ಟಪ್ರಕೃತಿಯಾಗಲದು ಸರ್ಗ ಮೊದಲುಅಷ್ಟರಾಧಾರದ ಮೇಲೂ ಭೂತಪುಟ್ಟಿಸಿದ ಭೌತಿಕ ಪ್ರತಿಸರ್ಗವೆನಲು 1ವಿವರಿಸುತಿರೆ ವಂಶಗಳನು ಮತ್ತುವಿವಿಧ ಮನುಗಳಹ ವಿಸ್ತಾರವನ್ನುಅವರ ವಂಶಾವಳಿಗಳನು ಪೇಳಿಧ್ರುವವಾದ ಪುರುಷಾರ್ಥ ದಾರಿದೋರ್ಪುದನು 2ಇಹ ಪರಗಳ ಸುಖದಿರವ ಮೋಕ್ಷಬಹ ಯುಕ್ತಿ ಸಹ ಪೇಳ್ವ ಬಹು ಗ್ರಂಥದೊಲವಅಹುದೆಂದು ತಿರುಪತಿಯಾಳ್ವ ಬಹುಮಹಿಮ ವೆಂಕಟನಾಥ ಮನ್ನಿಸು ದೇವಾ 3 ಓಂ ಯೋಗಿನಾಂ ಪತಯೇ ನಮಃ
--------------
ತಿಮ್ಮಪ್ಪದಾಸರು
ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಸಾರ ಪ ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು ಪೂತವಾಗುವದು ಗುರುವರೇಣ್ಯ ಭೂತಳದಲಿ ಪರಮ ಪಾವನ ತೀರ್ಥ ಅನುದಿನ 1 ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ ಶುದ್ಧಿಗೆ ಇದೆ ಮುಖ್ಯ ಕಾರಣ ಉದ್ಭವಿಸುವದು ಭಕ್ತಿ ಜ್ಞಾನ ಅನಿ ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ ವ್ಯಸನಗಳನು ಪರಿಹರಿಸುವ ಬೆಸಸುವದೆನ ಗೀ ಉಪಾಯವ ಚರಿಸಲೇನು ಗಿರಿಗುಹದಲಿ ತ¥ವÀ| ಉ.ವಸುದೇವಸುತನ ಸಂಕೀರ್ತನ ನಾನಾ ವ್ಯಸನ ಪರಿಹಾರಕ್ಕೆ ಕಾರಣ ಮುಸುಕಿರ್ದ ಮೇಘಕ್ಕೆ ಪವಮಾನ ಭವ ವ್ಯಸನಾಂಧಕಾರಕ್ಕೆ ರವಿಕಿರಣ 2 ಪ್ರ:ಏನು ಮಾಡಲಿ ಸದುಪಾಸನ ದೈವಾ ಧೀನದಿ ಬರುವ ವಿಘ್ನಗಳನ್ನು ಕಾಣೆನು ಪರಿಹಾರ ಕೃತಿಯನ್ನು ಇದ ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ ಯಡರುಗಳನು ಪರಿಹರಿಸುವ ದೃಢಮನದಲಿ ತಿಳಿವದು ಜವ ಪೋಪ ದ್ಯಡರು ಪ್ರಾಪಕವಾದ ಪಾತಕವ 3 ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ- ರೋಕ್ಷ ವಾಗುವದಕ್ಕೆ ಸಾಧನ ಶಿಕ್ಷಿಸುವದು ಸದುಪಾಸನ ಆ ಉ:ಆದರದಿ ನೈರಂತರ್ಯದಿ ಯುಕ್ತ ಮಾಧವನಂಘ್ರಿಯ ಸ್ಮರಣದಿ ಸಾಧಿತ ಬಿಂಬಾಪರೋಕ್ಷದಿಸ ನ್ಮೊದ ಭರಿತನಾಗಿರು ಜಗದಿ 4 ಪ್ರ:ಏನು ಮಾಡಲು ಮುಕ್ತಿಸಾಧನವಾದ ಜ್ಞಾನ ವಿಜ್ಞಾನ ಸಂಪದವನ್ನ ಕಾಣುವದೆಂದಿಗೆ ತಿಳಿಸೆನ್ನ ಮುಂದೆ ಸಾನುರಾಗದಲಿ ಬೇಡುವೆ ನಿನ್ನ ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು ಷೋತ್ತಮನಂಘ್ರಿ ಸಂಸ್ಮøತಿಯಿಂದ ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ- ಮೋದ 5 ಪ್ರ:ಜಲಜನಾಭನ ಪದಯುಗದಲ್ಲಿ ನಿ- ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ ಬಲುವಿಧ ಭಕುತಿಯ ಬಗೆ ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ- ಣೇಂದ್ರಿಯಾತ್ಮಾದಿಗಳಿಂದ ಅಧಿಕ ಕಾಣಿಸುವದು ಭಕ್ತಿ ಜವದಿಂದ 6 ಪ್ರ:ದೃಢತರವಾದ ವೈರಾಗ್ಯವ ಪೊಂದಿ ಪಡಿವೆನೆಂದಿಗೆ ಮಾಧವನ ದಯವಾ ಗಡನೆ ಪೇಳಿದಕೇನು ಪಾಯವ ನಿ- ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ ವೇಣು ಗೋಪಾಲನ ಸ್ಮøತಿಯಿಂದ ಕಾಣುವಿ ಸಧೃಡ ವೈರಾಗ್ಯದ ಭಾಗ್ಯ ಶ್ರೀನಿಧಿ ಚರಣಾನು ಗ್ರಹದಿಂದ7 ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ- ಪುಣತರವೆನಿಸುವ ದನುದಿನ ಎನಗೆಂದಾಧ್ಯಾತ್ಮ ತತ್ವದಿ ಮನವೆರಗ ಲೆನಿಸುವದದೆ ಮುಕ್ತಿಸಾಧನ ಉ:ಅನುದಿನ ಶ್ರವಣಾದಿ ಸಾಧನ ದಿಂದ ಜನಿತ ಸದ್ಭಕುತಿಯೆ ಕಾರಣ ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ ಜನಯುಕ್ತ ನಯನ ದಂದದಿ ಮುನ್ನ 8 ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ ನೇನು ಮಾಳ್ಪ ಕರ್ಮಗಳನ್ನು ಸಾನುರಾಗದಿ ಪೇಳುವದುಮುನ್ನ ಮನದಿ ಧ್ಯಾನವ ಮಾಡುವೆ ಪ್ರತಿದಿನ ಉ.ಇಂತಿರುವದು ಬಿಂಬ ಲಕ್ಷಣ ಬಹಿ ರಂತರದಲಿ ತಿಳಿವದು ಮುನ್ನ ಸಂತತ ಸೃಷ್ಟ್ಯಾದಿಗಳನ್ನ ದೇ ಹಾಂತಃ ಸ್ವಪ್ನದಿ ಸಂದರುಶನ 9 ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ ನಲ್ಲನು ವ್ಯಾಪ್ತವೆಂಬರು ಜಗದಿ ಎಲ್ಲದೇಶ ಗುಣಕಾಲದಿಯನ್ನ ಉ:ನಿಂತಿರುವನು ಸರ್ವಜೀವರ ಹೃದ ಯಾಂತರದಲಿ ವ್ಯಾಪ್ತನು ಪೂರಾ ಸಂತತ ಜೀವನ ವ್ಯಾಪಾರ ತಾನೆ ನಿಂತು ಮಾಡಿಸುವನು ನಿರ್ಧಾರ 10 ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ ಪಂಥಕ್ಕೆ ಮುಟ್ಟಲು ಸೋಪಾನ ಅ- ನಂತ ಗುಣಾತ್ಮಕ ಬಿಂಬನ ಗುಣ ಚಿಂತಿಪರಿಗೆ ಬಂಧ ಮೋಚನ ಉ:ಇದೆ ತಿಳಿಬಿಂಬೋಪಾಸನÀ ಚತು ರ್ವಿಧ ದಿಂದಲಾತ್ಮ ಸಮರ್ಪಣ ಮೊದಲು ಆತ್ಮಾನಮೇವಾರ್ಪಣ ದ್ರವ್ಯ ಸದ್ಗುಣ ಕರ್ಮಸಮರ್ಪಣ 11 ಮಾಡಲಾವ ಧರ್ಮಗಳ ಮಾಡಲಿ ಮುನ್ನ ಜೀವರ ಬಂಧ ವಿಮೋಚನ ಮಾಳ್ಪ ಭಾಗವತ ಧರ್ಮಗಳನ್ನು ತಿಳಿದು ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ ಹೃದ್ಗತ ಬಿಂಬೋಪಾಸಾನ ಮಾಡಿ ಸಿದ್ಧನಾಗಿ ಬಾಳೆಲೋ ಮುನ್ನಾ 12 ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ ಪಂಥವ ತೋರಿಸುವವರನ್ನ ಚಿಂತಿಸುವೆನು ಮನದೊಳುಮುನ್ನ ಭಗ ವಂತನ ಮಹಿಮೆ ಪೇಳುವರನ್ನ ಉ:ಜಲಜನಾಭನÀ ಪದಯುಗಲವ ಬಿಟ್ಟು ಚಲಿಸದಿರು ಲವ ನಿಮಿಷಾರ್ಧವ ಇಳಿಯೊಳಗಿಂಥಾ ಸದ್ವೈಷ್ಣವರನ್ನು ತಿಳಿದು ಸೇವಿಸುತಿರು ಮಾನವಾ 13 ಪ್ರ:ಏನು ಕೊಡಲಿ ಗುರುದಕ್ಷಿಣ ಈ ಕ್ಷೋಣಿಯಿತ್ತರು ಸರಿಗಾಣೆ ನಾ ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ ಜ್ಞಾನವ ಕೊಟ್ಟು ರಕ್ಷಿಪರನ್ನ ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ ನಾಥ ನಿಂದನ್ಯ ವಸ್ತುಗಳನ್ನು ಪ್ರೀತಿಸರೆಂದಿಗೂ ಧನವನ್ನು ಈ ಮ- ಹಾತ್ಮರ ಸ್ಮರಿಸುತಲಿರು ಮುನ್ನ 14 ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ ಯುಕ್ತ ನರಸಿಂಹನೊಲಿಸುವಂಥ ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
--------------
ಕಾರ್ಪರ ನರಹರಿದಾಸರು
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವಾಮನಪ್ರಥಮ ಅಧ್ಯಾಯಶ್ರೀ ವಾಮನಪ್ರಾದುರ್ಭಾವಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿಸುದರ್ಶನ ಗದಾ ಜ್ಞಾನಪ್ರದ ದರಾಹಸ್ತಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥಶೃತಿವೇದ್ಯ ಅಜಸೇವ್ಯಪ್ರಣವಪ್ರತಿಪಾದ್ಯ1ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳುಅವತಾರಗಳ ಮಾಡಿ ಸಜ್ಜನರ ಕಾಯುವಿ 2ವೇದೋದ್ಧರಮತ್ಸ್ಯಸತ್ಯವ್ರತನಿಗೆ ಒಲಿದಿಮಂದರವ ಪಾಲ್ಗಡಲಲಿ ಪೊತ್ತಕೂರ್ಮಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿದೈತ್ಯಹರ ಭೂಮಿ ಉದ್ಧರ ಭೂವರಾಹ 3ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇವಿಷ್ಟ ವಾಮನ ತ್ರಿವೃತ್ ಗೋಪಬಾಲಸುಪವಿತ್ರ ಜಮದಗ್ನಿಸುತ ಪರುಶುರಾಮಪ್ರಭಂಜನಸೇವ್ಯಶ್ರೀರಾಮಚಂದ್ರ4ಅಜ್ಞಾನ ಹೃತ್ತಿಮಿರಸೂರ್ಯವೇದವ್ಯಾಸನಿಜಭಕ್ತಜನ ಪಾಂಡವಪ್ರಿಯ ಕೃಷ್ಣದುರ್ಜನ ವಿಮೋಹಕ ಸುರಸುಬೋಧಕ ಬುಧ್ಧಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5ಷಡ್ರೂಪ ಹಯವದನ ಮಹಿದಾಸ ತಾಪಸಕ್ಷಿಪ್ರವಸುಪ್ರದ ಶ್ರೀಕರ ಯಜÕ್ಯ ಕಪಿಲಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನುಆ ಆರ್ಯನ ಸುತ ವಿರೋಚನನೆಂಬುವನುಆ ದೈತ್ಯನ ಪುತ್ರ ಬಲಿಮಹಾರಾಜನುಆಧಿಕ್ಯ ಹೊಂದಿದನು ಬಲಪೌರುಷದಲಿ 7ದೈತ್ಯೇಯ ಬಲಿರಾಜ ಬಲಉನ್ನಾಹದಿಂಜಗತ್ರಯವ ತನ್ನ ವಶ ಮಾಡಿಕೊಂಡಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನವಿದುರರಾಗಲು ದೇವಮಾತೆ ಯೋಚಿಸಿದಳು 8ಸರ್ವಭೂತ ಗುಹಾವಾಸವಾಸುದೇವಜಗದ್ಗುರುಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದುದೇವಮಾತೆಗೆಪತಿಕಶ್ಯಪ ಪೇಳಿದನು9ಆದಿವರಾಹನೇ ಮಹಾಪುರುಷ ಸರ್ವ -ಭೂತ ನಿವಾಸನೇವಾಸುದೇವಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವವಿದ್ಯಾಧಿಪತಿ ಶುಭಮಂಗಳ ಸ್ವರೂಪ 10ಸರ್ವ ಜಗಜ್ಜ£್ಮ್ಞದಿಕರ್ತನೇ ಜಗದೀಶಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇವಿಶ್ವತೋ ಮುಖ ಆದಿದೇವ ನಿನಗೆ ನಮೋಶ್ರೀವರ ನಾರಾಯಣ ನರಹರೇ ಸ್ವಾಮಿ 11ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನಸಿರಿಕಾಂತ ಸರ್ವೇಶ ಕೇಶವ ನಮಸ್ತೆಪುರುಟಾಂಬರಧಾರಿ ಸುರವರೇಣ್ಯನೇ ನಮೋಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12ಅದಿತಿ ದೇವಿಯು ಪಯೋವ್ರತವ ಮಾಡಿದಳುವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದಆದಿ ಪೂರುಷ ಭಗವಂತ ಶಂಖ ಚಕ್ರಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿಆನಂದ ಬಾಷ್ಪವ ಸುರಿಸುತ್ತ ದೀರ್ಘಪ್ರಣಾಮವ ಮಾಡಿದಳು ಗದ್ಗದ ಕಂಠದಿಂನಿನ್ನ ಸ್ತುತಿಸಿದಳು ಆ ದೇವಮಾತೆ 14ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳನಾಮಧೇಯನೇ ಯಜÉÕೀಶ ಯಜÕಪುರುಷಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವಅಕಳಂಕ ಸರ್ವೋರು ಸಚ್ಚಕ್ತಿಪೂರ್ಣಏಕಾತ್ಮ ಸರ್ವಜÕ ಸುಖಜ್ಞಾನಪ್ರದ ಭೂಮನ್ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀಅದಿತಿಯ ಸುತನೆನಿಸಿ ಭವಿಸುವಿ ಎಂದಿಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17ಜಗನ್ನಿವಾಸನೆ ನೀನು ದೇವಮಾತೆಯೊಳುಝಗಝಗಿಸಿಪೊಳೆದಿಯೋ ಉರು ಮಹಾತೇಜಪೊಗಳಲಳವೇ ನಿನ್ನ ಲೀಲಾವತಾರಗಳಅಗಣಿತಮಹಿಮೆಗಳ ದೇವ ದೇವೇಶ18ಸನಾತನನೇ ಅನಘನೇ ಅಜನೇ ಭಗವಂತನೇನೀನು ಅದಿತಿಯಲಿ ಅವತರಿಪುದರಿತುವನರುಹಾಸನ ಹಿರಣ್ಯಗರ್ಭನು ಬಂದುಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದತೋಯಜಾಕ್ಷಶಿಪಿವಿಷ್ಟ ವಿಷ್ಣು ಸರ್ವೋತ್ತಮಅಚ್ಯುತಾನಂತೋರು ಶಕ್ತಿಮಯ ನಿನ್ನ 20ಪದುಮಭವ ಸನ್ನುತನೇಆನಂದಮಯನೀನುಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿಚತುರ್ಭುಜವು ಶಂಖಗದಾಅಬ್ಜಚಕ್ರಪೀತ ಕೆಂಪು ವಸನವನ್ನ ಧರಿಸಿದ್ದಿ 21ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯುನಳಿನಾಯತೇಕ್ಷಣ ಮಕರಕುಂಡಲವುಆನಂದ ಸುಪ್ರಚುರ ವದನಾರವಿಂದವುಏನೆಂಬೆ ಗಂಭೀರವಕ್ಷ ಶ್ರೀವಕ್ಷ 22ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳುವನಜಾಸನಾಶ್ರಿತ ಕೌಸ್ತುಭಮಣಿಯುಸುನೂಪುರ ತೊಟ್ಟ ಶುಭಮಂಗಳಪಾದನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23ಸೌರಶ್ರಾವಣಸಿಂಹ ಚಾಂದ್ರ ಭಾದ್ರಪದನೀ ಪ್ರಾದುರ್ಭವಿಸಿದ್ದು ಸಿತಶ್ರಾವಣದ್ವಾದಶಿಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರುಸುರಗಾಯಕರುಗಳ ಗಾಯನ ನೃತ್ಯ 24ಜಯ ಜಯತು ಜಯ ಜಯ ವಾಮನ ವಟುರೂಪಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋಜಯ ಜಯತು ಸರ್ವ ಜಗಜ್ಜನ್ಮಾದಿಕರ್ತಜಯ ಜಯಪರಮಪೂರ್ಣೈಶ್ವರ್ಯ ಜಯತು25ಸುಂದರವಟುವಾಮನ ನಿನ್ನ ನೋಡಿಮಂದಜಾಸನಮಹಾ ಋಷಿವರ್ಯರು ಬಹುಆನಂದಭರಿತರು ಆಗಿ ಸಂಸ್ಕಾರಅಂದದಿ ಚರಿಸಿದರು ವೈದೀಕ ರೀತಿಯಲಿ 26ಬ್ರಹ್ಮಾದಿದೇವರು ಮಹಾಋಷಿಗಳುಪರ-ಬ್ರಹ್ಮ ವಾಮನ ನಿನಗೆ ಉಪನಯನರೂಪಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿಮಹಾರ್ಹನೇ ನಿನಗಿದು ಅವತಾರ ಲೀಲ 27ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆದೇವತಾವೃಂದವು ನೆರದಿದ್ದ ಮುನಿಗಳುಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂಈ ವಿಧದಿ ಮುದಮನದಿ ಅರ್ಪಿಸಿದರು 28ಕಮಂಡಲ ವೇದಗರ್ಭನು, ಕೃಷ್ಣಾಜಿನಭೂಮಿ, ದಂಡ, ಸೋಮ,ಕುಶಸಪ್ತ ಋಷಿಗಳುಸುಮೇಖಳ ಕಶ್ಯಪ,ಕೌಪೀನಅದಿತಿಯುಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29ಈ ರೀತಿ ಮೇಖಳಸೂತ್ರಆಚ್ಛಾದನಛತ್ರ ಕೃಷ್ಣಾಜಿನ ಕಮಂಡಲು ದಂಡಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆಪರಿಪರಿ ದೇವತೆಗಳು ಅರ್ಪಿಸಿದರು 30ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನಮಹೋತ್ಸವದ ವೈಭವವು ಹೋಮ ಪೂಜಾದಿಗಳುಮಹಿಯಲ್ಲಿ ಅಸದೃಶವು ಸರ್ವಕಾಲದಲು 31ಸೂತ್ರಮೇಖಳಕೌಪೀನಆಚ್ಛಾದನಛತ್ರಮಾಲಾ ಕಮಂಡಲು ದಂಡಹಸ್ತಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪಶ್ರೀರಮಣಪದ್ಮಭವರುದ್ರಾದಿವಂದ್ಯ32ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯದಾನಪ್ರಕರಣಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಸರಸಿಜೋದ್ಭವ ಸುರವೃಂದ ಮಹಾಋಷಿಗಳುಮರೀಚಿಸುತ ಮೊದಲಾದ ಸುಧೀಗಳು ನಿನಗೆಚರಿಸಿದ ಉಪನಯನ ರೂಪಮಹೋತ್ಸವವಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1ನೋಡಿದ ಮಾತ್ರದಲೆಸುಜನವಿಶ್ವಾಸಿಗಳುಮಾಡಿದ ಪಾಪ ಪರಿಹರಿಪ ನರ್ಮದೆಯದಡ ಉತ್ತರದಲಿ ಯಜÕ ಶಾಲೆಕಟ್ಟಿದೊಡ್ಡಕ್ರತುಮಾಡುತ್ತಿದ್ದನು ಬಲಿರಾಜ2ಮೌಂಜಿಮೇಖಳ ಸೂತ್ರದಿಂದ ಬೆಳಗುತ್ತಸಜಲ ಕಮಂಡಲು ಸುದಂಡ ಛತ್ರಪ್ರಜ್ವಲಿಪ ಚಿನ್ಮಯ ಜಟಿಲ ವಾಮನವಿಪ್ರಯಜÕ ಶಾಲೆಯೊಳು ಪ್ರವೇಶ ಮಾಡಿದಿಯೋ 3ಜ್ವಲಿಸುವ ಸ್ವಕಾಂತಿಯುಕ್ಮಾಯಾಮಾಣವಕಬಾಲ ಸುಂದರ ಬ್ರಹ್ಮಚಾರಿಹರಿನಿನ್ನಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿಬಲುಹರುಷದಲಿ ಎದ್ದು ಸ್ವಾಗತಮಾಡಿದರು 4ಭಗವಂತ ವಾಮನ ನಿನ್ನ ಪಾದದಿಬಲಿಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂಹೀಗೆಂದು ತನ್ನ ಪಿತೃಗಳು ತೃಪ್ತರಾದರುತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5ವನಜಜಾಂಡದ ಒಡೆಯ ರಾಜರಾಜೇಶ್ವರನೇನಿನ್ನ ಮುಂದೆಕರಮುಗಿದು ಬಲಿರಾಜಧೇನುಕಾಂಚನ ಗ್ರಾಮವಿಪ್ರಕನ್ಯಾದಿಗಳುಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6ಸುಗಮಸುಹೃತ್ ಧರ್ಮಯುಕ್ ಈ ಮಾತಲ್ಲಿಭಗವಂತ ನೀ ಪ್ರೀತನಾದದ್ದು ಪ್ರಕಟಿಸಿಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7ಆಕಾಶದಲಿ ಆಹ್ಲಾದಕರ ಉಡುಪನುಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸುಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8ಮಹಾ ಗದಾಯುಧದಾರಿ ದಿಗ್ವಿಜಯ ಶೂರನುಆ ಹಿರಣ್ಯಾಕ್ಷನ ಅಣ್ಣನು ಆದಪ್ರಹ್ಲಾದಪಿತ ಹಿರಣ್ಯಕಶಿಪು ವೀರನುಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತದ್ವಿಜವತ್ಸಲ ತನ್ನ ಆಯುಷ್ಯವದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದುಮೂರ್ಜಗ ಅರಿವುದುಬಲಿಆ ಕುಲೀನ10ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರಈ ಧರ್ಮವಂತಬಲಿಎಂದು ನೀ ಪೇಳಿಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿಪದಾಮಮ ಎಂದು ಭೂಮಿ ಯಾಚಿಸಿದಿ 11ನಳಿನಜಾಂಡದ ದೊರೆಹರಿನಿನ್ನ ಮಾಯೆಯಿಂಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದಬಲಿಯು ತನ್ನಲಿ ಕೊಂಡವ ಪೂರ್ಣನಾಗುವಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12ಕರ್ಮಜ ದೇವತಾ ಕಕ್ಷದವ ಬಲಿರಾಜಕರ್ಮನಿಮಿತ್ತದಿ ಸಂಸಾರ ಸುಳಿಯಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆಮಿತಿಯಿಲ್ಲ ಬೆಳೆಯುವುದು ಮೇಲು ಮೇಲುಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸುವರ್ಧಿಸುವುದು ಮತ್ತು ಸುಖವೀವುದೆಂದಿ 14ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿಮೂರಡಿ ಮಾತ್ರವೇ ಕೊಳ್ಳುವಿ ಎನಲುಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲುಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15ವೇದ ವೇದಾಂತಕೋವಿದಶುಕ್ರಾಚಾರ್ಯರುಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರುದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನಭಕ್ತವರ್ಯರು ಎಂದು ನಮಿಪೆ ಸಂತೈಸು 16ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರಶ್ರೀಶ ಭಗವಂತನು ವಿಷ್ಣು ಅವ್ಯಯನೆಕಶ್ಯಪ ಅದಿತಿಯಲಿ ಭವಿಸಿ ದೇವತೆಗಳಕಾರ್ಯಸಾಧನಕಾಗಿ ಬಂದಿರುವ ಎಂದ 17ಮತ್ತು ಪೇಳಿದ ಈ ದಾನ ಕೊಡುವುದರಿಂದದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸುಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18ಇಂಥಾಮಾಯಾಮಾಣವಕಹರಿವಾಮನನುಪಾದಎರಡಲಿಧರೆದಿವಿ ಅಳೆದು ಮೂರ-ನೇದನುಬಲಿಕೊಡಲು ಆಗದೆ ನರಕ ಪೋಗು-ವದು ತಪ್ಪಿಸೆ ದಾನ ಕೊಡಬೇಡ ಎಂದ 19ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರತನ್ನ ಶಿಷ್ಯನಿಗೆ ಬೋಧಿಸಿದರೂ ಸಹಮನ ಸೋಲದೆ ಬಲಿರಾಜ ಧಾರೆ ಎರೆದುದಾನವ ಕೊಡುವೆನು ಎಂದ ವಿನಯದಲಿ 20ಗುರುಗಳ ಮಾತಲ್ಲಿ ಅನಾದರವ ತೋರಿಸಿದಆ ರಾಜನಿಗೆ ಶಾಪ ಇತ್ತರು ಶುಕ್ರರುಸಿರಿಸ್ಥಾನಾದಿಗಳು ನÀಷ್ಟವಾಗುವದೆಂದುಗುರು ಶಪಿಸಿದರೂ ಬಲಿಯ ಮನ ಚಲಿಸಲಿಲ್ಲ 21ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ಸ್ವಾಮಿಭೃತ್ಯವತ್ಸಲ ನೀನು ಬಲಿಯ ಉತ್ಕಷ್ಟಭಕ್ತಿ ಶ್ರದ್ಧೆ ಸತ್ಯ ಧರ್ಮ ತೋರ್ಪಡಿಸಿದಿಅಂತಃ ಪ್ರೇರಕನಾಗಿಬಲಿಶುಕ್ರರಲ್ಲಿ22ಒಳ್ಳೇ ಮೌಕ್ತಿಕ ಆಭರಣ ಮಾಲಾಧರಳುಶೀಲೆ ಪತ್ನಿ ವಿದ್ಯಾವಳಿ ದೇವಿ ಸಹಿತಬಲಿಸ್ವರ್ಣ ಕಲಶ ಜಲದಿಂದ ನಿನ್ನನಳಿನಪದಯುಗವ ಅವನಿಜಿಸಿದ ಮುದದಿ23ಅಚಲಿತ ಭಕ್ತಿಮಾನ್ ಈ ಮಹಾನ್ ಬಲಿರಾಜಅರ್ಚಿಸಿ ಉದಕದಿಂದಲಿ ಧಾರೆ ಎರೆದುಅಚ್ಯುತನೇ ಶ್ರೀಯಃಪತೇ ವಾಮನ ನಿನಗೆ ನೀಇಚ್ಚೈಸಿದ ದಾನ ಹರುಷದಿ ಕೊಟ್ಟ 24ಮುದಾನ್ವಿತರಾದ ದೇವಗಣ ಗಂಧರ್ವವಿದ್ಯಾದರ ಸಿದ್ಧ ಚಾರಣ ಕಿನ್ನರಾದಿಗಳುದೈತ್ಯೇಂದ್ರಬಲಿಕರ್ತೃಕದಾನ ಆರ್ಜವವಉದ್ಗಾಯನ ಮಾಡಿ ಪುಷ್ಪಮಳೆ ಕರೆದರು 25ಬಲಿನಿನ್ನ ಜಗತ್ಪಾವನ ಪಾದೋದಕವತಲೆಯಲಿ ತಾ ಧರಿಸಿ ಕೊಟ್ಟ ಮೂರಡಿದಾನಮಾಲೋಲ ಸರ್ವೇಶ ವಿಶ್ವರೂಪನೇ ವಿಷ್ಣುಲೀಲೆಯಿಂದಲಿ ಕೈ ನೀಡಿ ವಾಮನ ಸ್ವೀಕರಿಸಿದಿ 26ಮಧ್ವಸ್ಥ ಸರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 27-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಆಧ್ಯಾಯಶ್ರೀ ತ್ರಿವಿಕ್ರಮವಿಜಯಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಕಿಂಪುರುಷಕಿನ್ನರಚಾರಣ ಗಂಧರ್ವಾದಿಸುಪರ್ವಾಣ ಗಾಯಕರ ಗೀತೆ ವಾದ್ಯಗಳುಶುಭಘೋಷ ಮಾಡುತಿರೆ ಬಲಿರಾಯ ದಾನವಅರ್ಪಿಸಿ ಕೃತಕೃತ್ಯದಿ ನೋಡಿದ ನಿನ್ನ 1ಉರು ಗುಣಾರ್ಣವ ಮಹೈಶ್ವರ್ಯ ನಿಜಸಚ್ಛಕ್ತಿಹರಿವಾಮನ ನೀನು ವರ್ಧಿಸಿ ಅದ್ಭುತದಿಸುಬೃಹತ್ ವಿಶ್ವರೂಪವ ಕಾಣಿಸಿ ನಿಂತಿನೀರುರುಹ ಜಾಂಡಾಂತರ್ ಬಹಿವ್ರ್ಯಾಪ್ತ ವಿಷ್ಣೋ 2ದೋಷದೂರ ನಿನ್ನ ಒಂದು ರೂಪದಿ ಉಂಟುದೋಷವಿಲ್ಲದ ಪೂರ್ಣ ಅಭಿನ್ನ ಅನಂತನಿನ್ನೀಶಶಕ್ತಿಯಿಂ ಎಲ್ಲವ ಅಡಗಿಸಿಅಕ್ಷೋಭ್ಯ ನೀ ಪ್ರಕಟ ಮಾಡುವಿ ಆಗಾಗ 3ಉತ್ತಮ ಮಹಾಮಹಿಮ ನಿನ್ನ ಈ ರೂಪದಿಭೂ ದಿವಿ ದಿಕ್ ಸರ್ವ ಅಧೋಧ್ರ್ವ ಲೋಕಸುತಪಸ್ವಿ ಮುನಿಗಳು ದೇವನರತ್ರಿರ್ಯಗ್ ಸರ್ವಪ್ರತಿಷ್ಠತವಾಗಿರುವುದು ಕಂಡನು ಬಲಿಯು 4ಈ ಮಹಾವಿಭೂತಿ ರೂಪದಿ ಕಂಡ ತನ್ನಆ ಮಹಾಕ್ರತು ಋತ್ವಿಕ್ಕುಗಳಾಚಾರ್ಯಆ ಮುಖದಿ ನೆರೆದಿದ್ದ ಸದಸ್ಯರನ್ನು ಕಂಡತನ್ಮಾತ್ರ ಭೂತೇಂದ್ರಿಯ ಜೀವಯುಕ್ತ 5ಅನಘಾಂಘ್ರಿ ಪದಯುಗದಿ ಜಲಮೇಘ ಅಧಸ್ ಭೂಮಿಕಣುಕಾಲು ಜಾನೂಲಿ ಮಹಾದ್ರಿ ಪಕ್ಷಿಗಳುಘನಉರುದ್ವಯದಿ ಮಾರುತಅಂಬುಕಣಗಳುವರ್ಣಜಾಲ ಮಿಂಚು ಗುಹ್ಯದಲಿ ಸಂಧ್ಯಾ 6ಜಘನದಲಿ ದೈತ್ಯರ ಗುಂಪುಗಳುಹೊಕ್ಕುಳಲಿನಭಕುಕ್ಷಿಯಲಿ ಸಪ್ತಸಿಂಧುನಕ್ಷತ್ರ ಜ್ಯೋತಿರ್ಮಯಮಾಲಾ ಉರದಲಿಅಕಳಂಕ ಹೃದಯದಲಿ ಧರ್ಮ 7ಸ್ತನದಲಿ ಸತ್ಯವು ಮನಸ್ಸಲಿ ಚಂದ್ರನುಅನುಪಮ ವಕ್ಷದಲಿ ಶ್ರೀ ಪದ್ಮಹಸ್ತಕಂಠದಲಿ ಸುಸ್ವರ ಶಬ್ದ ಸಾಮಾದಿಗಳುಕರ್ಣದಲಿ ದಿಕ್‍ಭುಜದಿ ಇಂದ್ರಾದಿಸುರರು 8ನಾಸಿಕ್ಕದಲಿ ಶ್ವಾಸವಾಯು ಕಣ್ಣಲಿಸೂರ್ಯಶಿರಸ್ಸಲಿ ಮೇಘವು ವದನದಲಿ ªಹ್ನಿರಸನದಿ ಜಲೇಶನು ವಾಣಿಯಲಿ ವೇದಗಳುನಿಷೇಧವಿಧಿಶಾಸನ ಹುಬ್ಬು ಎರಡಲ್ಲೂ9ರೆಪ್ಪೆಯಲಿ ಅಹೋರಾತ್ರಿ ಕ್ರಮಣದಲಿ ಯಜÕವುಸುಪುಷ್ಟದಿ ಅಧರ್ಮ ಸ್ಪರ್ಶದಿ ಕಾಮಲೋಭವು ಅದsÀರದಿ ಮಾಯೆಯು ಹಾಸದಲಿಕೋಪ ಲಲಾಟದಲಿಅಂಬುರೇತಸಲಿ10ಮೃತ್ಯು ಛಾಯೆಯಲ್ಲಿ ಓಷಧಿ ರೋಮದಲಿನದಿಗಳು ನಾಡಿಯಲಿ ಕಲ್ಲು ನಖದಲಿಇಂದ್ರಿಯಗಳಲ್ಲಿ ದೇವಗಣ ಋಷಿ ಸಮೂಹವುಬುದ್ಧಿಯಲ್ಲಿಅಜಗಾತ್ರದಲಿ ಚರಾಚರವು11ಉರುಕ್ರಮ ವಿಶ್ವಮೂರ್ತಿ ವಾಮನ ವಿಭೋಪರಮಪೂರುಷ ನೀನೀರೂಪತೋರಿಸಲುನೆರೆದಿದ್ದ ಅಸುರರು ವಿಸ್ಮಯದಿ ನೋಡುತ್ತಬೆರಗಾಗಿ ನಿಂತರು ಏನೂ ತೋರದಲೆ 12ಸುದರ್ಶನ ಚಕ್ರ ಪಾಂಚಜನ್ಯವು ಶಂಖಕೌಮೋದಕೀ ಗದಾಶಾಙ್ರ್ಗ ಮಹಾಧನುಸ್ಸುಬತ್ತಳಿಕೆಗಳುಅಕ್ಷಯಸಾಯಕವುಕತ್ತಿಖೇಟಕಮುಖ್ಯ ವಿಷ್ಣು ಆಯುಧಗಳು13ಅಸಹ್ಯ ತೇಜೋಯುತ ಚಕ್ರ ಮೊದಲಾದಈಶ ನಿನ್ನಯ ಆಯುಧಗಳು ಇರಲುಪಾಶ್ರ್ವದಿ ನಿಂತಿದ್ದರು ಆನಂದಾದಿಪಾರ್ಷದರು ಸಹ ಲೋಕಪಾಲಕರು ಎಲ್ಲಾ 14ಸ್ಫುರದ್ ಕಿರೀಟಾಂಗದ ಮೀನ ಕುಂಡಲವುಉರದಿ ಶ್ರೀವತ್ಸ ರತ್ನೋಜ್ವಲ ಮೇಖಳಾದಿಗಳುಪೀತಾಂಬರ ಮಾಲೆ ಧರಿಸಿ ಪ್ರಜ್ವಲಿಸಿದಿಉರುಕ್ರಮ ಹರೇ ಶ್ರೀಶ ಭಗವಂತ ವಿಷ್ಣೋ 15ರಾಜರಾಜೇಶ್ವರ ತ್ರಿವಿಕ್ರಮ ನಿನ್ನೊಂದುರಾಜೀವಪಾದದಿಂದಕ್ಷಿತಿಸರ್ವ ಅಳೆದಿಭುಜ ಶರೀರದಿ ಆಕ್ರಮಿಸಿದಿನಭದಿಕ್ಕುಹೇ ಜಗದೀಶನೇ ನಮೋ ನಮೋ ಶರಣು 16ದ್ವಿತೀಯಪಾದದಿ ನೀನು ದ್ಯುಲೋಕ ಸ್ವರ್ಗಾದಿಸತ್ಯ ಲೋಕೋ¥ರಿ ವ್ಯಾಪಿಸಿ ನಿಲ್ಲಲುತೃತೀಯ ಪಾದಕೆ ಸ್ಥಳ ಅಣ್ವತಿ ಇಲ್ಲವುಎಂದರಿತ ಆ ಮಹಾಬಲಿ ದಾನಶೂರ 17ತ್ರಿವಿಷ್ಟಪ ಮಹರ್ಜನೋ ತಪ ಸತ್ಯಲೋಕಗಳತ್ರಿವಿಕ್ರಮ ನಿನ್ನಯ ಪಾದವು ವ್ಯಾಪಿಸಿತೀವ್ರ ಸರಸಿಜಜಾಂಡಕಟಾಹಭೇದಿಸೆ ಬ್ರಹ್ಮಅವನಿಜಸಲಾ ಪಾದದಿಂ ಗಂಗೆ ಪಡೆದಿ 18ಸತ್ಯಲೋಕವು ನಿನ್ನನಖಕಾಂತಿಯಿಂದಜ್ಯೋತಿಯಲಿ ಮುಳುಗಲು ಬ್ರಹ್ಮದೇವಎದ್ದು ಬಂದು ಪಿತ ನಿನ್ನ ಪಾದವ ಕಂಡುಅತಿ ಮುದದಿ ಪೂಜಿಸಿದ ಪರಿವಾರ ಸಹಿತ 19ಬ್ರಹ್ಮಸಹ ವಂದಿಸಿದರು ನಿನ್ನ ಮರೀಜಾದಿಮಹಂತರು ಸನಕಾದಿಯೋಗಿಗಳು ಸರ್ವಮಹಾಪುರಾಣ ಸಂಹಿತ ವೇದ ವೇದಾಂಗದಿಮಹಾಸದಾಗಮ ದೇವತಾ ಸಮೂಹ 20ಕಮಂಡಲದಿ ಜಲ ಪೂರೈಸಿಹರಿನಿನ್ನಕಮಲಪಾದಕೆ ಆಘ್ರ್ಯಪಾದ್ಯಾದಿ ಪೂಜೆನೇಮದಿ ಅತಿಮುದ ಭಕ್ತಿಯಿಂದಲಿ ಜೀವೋ -ತ್ತಮ ಬ್ರಹ್ಮ ಮಾಡಿದನು ನಿಜ ಪುಣ್ಯಶ್ಲೋಕ 21ತ್ರಿವಿಕ್ರಮನೇ ನಿನ್ನಯ ಪಾದತೀರ್ಥವೇ ಗಂಗಾಪವಿತ್ರತಮವೆಂದು ತ್ರಿಲೋಕದಲಿ ಪ್ರಸಿದ್ಧದೇವ ದೇವೋತ್ತಮನೇ ಅದ್ಭುತ ಮಹಾಮಹಿಮಪೂರ್ವವೋಲ್ ನಿಂತಿ ವಾಮನ ರೂಪದಲಿ 22ಕಮಲಾಸನಾದಿಗಳು ಲೋಕಪಾಲಕರೆಲ್ಲತಮ್ಮ ತಮ್ಮ ಅನುಚರ ಸುರರ ಸಮೇತನರ್ಮದಾ ತೀರಸ್ಥ ಬಲಿಯಕ್ರತುಶಾಲೆಯಲಿವಾಮನನೆ ನಿನ್ನ ಬಳಿ ಬಂದು ತುಂಬಿದರು 23ಜಯ ಜಯ ಜಯತು ಅನಂತ ಮಹಿಮನೆ ನಿನ್ನತೋಯಜೋದ್ಭವ ಮೊದಲಾಗಿ ಸುರವರರುಅಘ್ರ್ಯಪಾದ್ಯ ಗಂಧ ಧೂಪ ದೀಪಮಾಲಾನೃತ್ಯಗಾಯನದಿ ಪೂಜಿಸಿದರು ಮುದದಿ 24ಆನಂದ ಉಕ್ಕುವ ಭಕ್ತಿಯಿಂದಲಿ ನಿನ್ನಅನಂತ ಮಹಾತ್ಮ್ಯ ಕೊಂಡಾಡಿ ಸುತ್ತಿಸಿಸುಧ್ವನಿಯಲಿ ಜಯಘೋಷ ಮಾಡಿದರುದುಂದುಭಿಭೇರಿಶಂಖಗಳ ಬಾರಿಸುತ25ಬ್ರಹ್ಮದೇವನ ಸುತ ಜಾಂಬವಂತನು ಆಗಮಹಾಭೇರಿ ಶಬ್ದಿಸಿ ದಿಕ್ಕು ವಿದಿಕ್ಕುಮಹಾರ್ಹ ವಾಮನ ನಿನ್ನ ವೈಭವ ಕೊಂಡಾಡಿದ್ದುಮಹೋತ್ಸವ ಎಂದರು ಮುದದಿ ಸಜ್ಜನರು 26ಸಜ್ಜನರು ಸುರರೆಲ್ಲಾನಂದ ಭರಿತರು ಆಗೆದುರ್ಜನ ದೈತ್ಯರು ನಿಂದಿಸಿ ವಾಮನನುದ್ವಿಜರೂಪಿ ಮಾಯಾವಿ ವಿಷ್ಣು ಸುರಕ್ಷಪಕ್ಷನುವಂಚಕನು ಎನ್ನುತ್ತ ಅರ್ಭಟಮಾಡಿದರು 27ಸತ್ಯಧರ್ಮನುಬಲಿತಡೆದರೂ ಮೀರಿದೈತ್ಯರು ಅಚ್ಯುತನ ಕೊಲ್ಲಲು ಬಾರೆಜಯವಿಜಯವಿಷಕ್ಸೇನಾದಿಸುರರುದೈತ್ಯರಲಿ ಬಹು ಜನರ ಕೊಂದುಹಾಕಿದರು 28ನಂದ ಸುನಂದಜಯವಿಜಯಬಲಪ್ರಬಲಪತತ್ರಿಪಕುಮುದಕುಮುದಾಕ್ಷ ಜಯಂತಶೃತದೇವ ಪುಷ್ಪದಂತ ವಿಷಕ್ಸೇನಸಾತ್ವತಾದಿ ಸರ್ವರ ಶೌರ್ಯ ಏನೆಂಬೆ 29ವಿಪ್ರಚಿತ್‍ಯಾದಿ ದೈತ್ಯರಿಗೆ ಪೇಳಿದಬಲಿಪ್ರಭು ಭಗವಂತನ ಇಚ್ಛಾನುಸಾರವೇಲಭಿಸುವುದು ಸರ್ವವು ಜಯವು ಅಪಜಯವುಲಭಿಸಲು ಜಯ ಈಗಕಾಲಅಲ್ಲವೆಂದು30ಸಾತ್ವಿಕ ಧರ್ಮವಾನ್ಬಲಿಇನ್ನೂ ಬೋಧಿಸಲುಯುದ್ಧದಲಿ ತಾಡಿತ ದೈತ್ಯರು ಪಾತಾಳಯೈದಿದರು ಬೇಗನೆ ಏನೆಂದು ವರ್ಣಿಸುವೆಸದ್ಧರ್ಮ ಸುಜ್ಞÕನಿ ಭಕ್ತಬಲಿಗುಣವ31ಪದುಮಜಾಂಡದ ಪ್ರಭುವೇ ನಿನ್ನಾಜÉÕಯಿಂ ಗರುಡಬಂಧಿಸಿದ ವರುಣ ಪಾಶದಲಿ ಬಲಿಯಬಂಧಿಸಲು ಮಹಾಧ್ವನಿ ಹಾಹಾಕಾರವುಎದ್ದಿತು ದಿಕ್ಕು ವಿದಿಕ್ಕು ಸರ್ವತ್ರ 32ಬ್ರಷ್ಟ ಶ್ರೀ ಸ್ಥಿರಪ್ರಜÕ ಮಹಾಯಶಸ್ವಿ ಬಲಿಯವಿಷ್ಣು ಪ್ರಭವಿಷ್ಣು ವಾಮನ ನೀ ಕೇಳ್ದಿಅಷ್ಟು ಸ್ಥಳಗಳು ಎರಡು ಪಾದದಲಿ ಅಡಗಿದವುಕೊಟ್ಟು ಪೂರೈಸು ಮೂರನೇಪಾದಎಂದು33ಹೇಳಿದಂತೆ ಕೊಡದಿದ್ದರೆ ನಿರಯದಲಿಬೀಳ ಬೇಕೆಂಬುವುದು ಗುರುಗಳೊಪ್ಪುವರುಹೇಳಿದಂತೆ ಕೊಡು ಮೂರನೇಪಾದಸ್ಥಳಇಲ್ಲದಿದ್ದರೆ ನರಕ ಹೋಗು ಎಂದಿ ಬಲಿಗೆ 34ಪದಂ ತೃತೀಯಂ ಕುರು ಸೀಷ್ರ್ಣ ಮೇ ನಿಜಂಎಂದು ಪೇಳುತಬಲಿವರುಣಪಾಶಬಂಧಕೂ ನಿರಯಕೂ ಶೋಕದಿ ಅಂಜುವನಲ್ಲಸಾಧುಸತ್ಯದ ಕೊರತೆಗೇವೆ ಅಂಜುವೆನೆಂದ 35ನೈವಾರ್ಥ ಕೃಛ್‍ರಾಧ್ ಭವತೋ ವಿನಿಗ್ರಹಾದ ಸಾಧು ವಾದಾದ್ ಭೃಷ ಮೃದ್ವಿಜೇಯಥಾಎನ್ನುತಬಲಿಮತ್ತು ತನ್ನ ಕುಲಹಿರಿಯರುನಿನ್ನೊಲಿಸಿಕೊಂಡ ವಿಧ ಸ್ಮರಿಸಿ ಪೇಳಿದನು 36ಉತ್ತಮ ಶ್ಲೋಕ ಹರೇ ಪರಮಗುರು ನಿನ್ನಭಕ್ತವರ್ಯನು ಸಾಧು ಪ್ರಿಯ ಸತ್ಯಧರ್ಮಪ್ರಹ್ಲಾದ ಸರ್ವ ಐಹಿಕ ವಸ್ತು ಸಂಸೃತಿಹೇತುಎಂದು ನಿನ್ನ ಪದ್ಮಾಂಘ್ರಿಯಲ್ಲೇ ರತನಾದ37ಇನ್ನೂ ಬಹುವಾಗಿಬಲಿಭಕ್ತಿಯಿಂ ಮಾತಾಡೆಶ್ರೀನಿಧಿ ನಿನ್ನ ಪ್ರಿಯ ಪ್ರೇಮಿ ಪ್ರಹ್ಲಾದಪೂರ್ಣೇಂದು ಉದಿಸಿದಂದದಿ ಬಂದು ನಿಂತನುಹೊನ್ನು ವಸನಾಬ್ಜಾಕ್ಷ ಸುಂದರ ವಿಗ್ರಹನು 38ಬಂಧಿತಬಲಿಪಿತಾಮಹ ಪ್ರಹ್ಲಾದನಿಗೆಮೂಧ್ರ್ನಾ ನಮಿಸಿದನು ನೇತ್ರಾಂಬು ತುಳಕೆಪದ್ಮಜ ಸುನಂದೇಶನಂದಾದ್ಯುಪಾಸಿತಇಂದಿರೇಶನೆ ನಿನಗೆ ನಮಿಸಿದ ಪ್ರಹ್ಲಾದ 39ಮೋದಬಾಷ್ಪದಿ ನಮಿಸಿ ಪೇಳಿದನು ನೀಬಲಿಗೆಇಂದ್ರಪದ ಕೊಟ್ಟಿದ್ದಿ ಕೊಂಡೀಗ ಅದನ್ನೇಘಾತಕ ಮೋಹಕ ಶ್ರೀ ಕಳೆದು ಅನುಗ್ರಹ ಮಾಡಿದಿಎಂದು ನಮಿಸಿದ ಜಗದೀಶ್ವರನೇ ನಿನಗೆ 40ನಾರಾಯಣಅಖಿಳಲೋಕ ಸಾಕ್ಷಿಯೇ ನಿನಗೆಈ ರೀತಿ ಪ್ರಹ್ಲಾದ ಪೇಳಿದ ತರುವಾಯವಾರುಣದಿ ತನ್ನಪತಿಕಟ್ಟಿಲ್ಪಟ್ಟಿದ್ದು ಕಂಡುಕರಮುಗಿದು ನಮಿಸಿದಳು ನಿನಗೆಬಲಿಜಾಯಾ41ಇಂದ್ರಸೇನ ಎಂಬ ಮತ್ತೊಂದು ಹೆಸರುಂಟುಬಂಧಿತ ಬಲಿರಾಜನಿಗೆ ತತ್ಪತ್ನಿವಿಂದ್ಯಾವಳಿ ದೇವಿ ಭಯ ಭಕ್ತಿಯಿಂದಉಪೇಂದ್ರ ನಿನಗೆ ಬಿನ್ನೈಸಿದಳು ನಮಿಸಿ 42ಆನಂದಮಯಪೂರ್ಣಕಾಮ ಪ್ರಭು ನೀನುವನರುಹಭವಾಂಡವ ಕ್ರೀಡಾರ್ಥ ಪಡೆದಿಅನನ್ಯಾಧೀನ ಸ್ವತಂತ್ರ ಸರ್ವೇಶನುನೀನೇವೆ ಸರ್ವಕರ್ತನು ಅನ್ಯರಲ್ಲ 43ನೀನೇವೇ ಬ್ರಹ್ಮಾಂಡ ದೊರೆಕರ್ತಆಗಿರಲುಅನ್ಯರಿಗೆ ಕರ್ತೃತ್ವ ಸ್ವಾಮಿತ್ವವಿಲ್ಲತಾನು ದೊರೆ ಕೊಂಡಿಹೆ ಕೊಟ್ಟಿಹೆ ಬಿಟ್ಟಿಹೆ ಎಂಬಹೀನ ಅಹಂಕಾರ ಮಾತು ಅಸಂಗತವು 44ದೇವ ದೇವನೇ ನಿನ್ನ ನಾಭಿಜ ಬಿನ್ನೈಸಿದಅವಿಕ್ಲವ ಮನದಿಂದ ಸರ್ವಸ್ಥ ನಿನಗೆನಿವೇದಿಸಿದಬಲಿರಕ್ಷಣಾರ್ಹನಾಗಿಹನುಸರ್ವಸ್ವಾಮಿಯೇ ಭೂತಭಾವನಭೂತೇಶ45ಮಂದನಾದರು ಅರ್ಪಿಸೆ ನಿನ್ನ ಪದಯುಗದಿಭಕ್ತಿಯಿಂ ದೂರ್ವಾಂಕುರ ಸಲೀಲವಾದರೂಉತ್ತಮ ಸೌಭಾಗ್ಯಗತಿ ಈವಿ ಅಂಥವಗೆಂದುಖ್ಯಾತ ಮೂರ್ಜಗದಿ ಕೊಂಡಾಡುತಿಹರೆಂದು 46ಪದ್ಮಜಗೆ ನೀ ಪೇಳ್ದಿ ಈಬಲಿಮಹಾರಾಜಅತಿ ಕಷ್ಟಕೊಳಗಾದ ಶತ್ರು ಪೀಡಿತನುಶಪ್ತನಾಗಿ ಸ್ಥಾನ ಕಳಕೊಂಡರೂ ಸಹಸತ್ಯವಾಕ್ ತ್ಯಜಿಸದ ಸದ್ಧರ್ಮವಂತ 47ಸುವ್ರತ ಈ ಬಲಿಗೆ ಅಮರರಿಗೂ ದುಷ್ಪ್ಮಾಪ್ಯಸಾವರ್ಣಿ ಮನು ಕಲ್ಪದಿ ಇಂದ್ರ ಪದವಈವಿ ನೀ ಎಂದು ಅವ ಆ ಕಾಲದವರೆಗಿರಲಿವಿಶ್ವಕರ್ಮ ನಿರ್ಮಿತ ಸುತಲಿದಿ ಎಂದಿ 48ಆಧಿ ವ್ಯಾಧಿ ಶ್ರಮ ಉಪದ್ರವಗಳಿಲ್ಲ -ದಂಥ ಸುತಲದಲಿ ಸುಖದಿಂದಿರಲಿಎಂದು ನೀ ಬ್ರಹ್ಮನಿಗೆ ಪೇಳಿ ಬಲಿಯನು ನೋಡಿಇಂದ್ರಸೇನ ಮಹಾರಾಜ ಭದ್ರಮಸ್ತುತೆ ಎಂದಿ 49ಸುತಲದಲಿ ಪರಿವಾರ ಸ್ವಜನರಿಂದೊಡಗೂಡಿಭದ್ರದಿ ಸೌಭಾಗ್ಯದಿ ವಾಸಮಾಡುದೈತ್ಯಶತ್ರುಗಳು ಕಾಟಕೊಟ್ಟರೆಅವರಕತ್ತರಿಸುವುದು ಸುದರ್ಶನವು ಎಂದಿ 50ಸದಾ ಸನ್ನಿಹಿತನಾಗಿದ್ದು ರಕ್ಷಿಸುವಿಸದಾ ನಿನ್ನ ದರ್ಶನ ಮಾಡಬಹುದುದೈತ್ಯರ ಸಂಗದಿಂ ಅಸುರಭಾವ ಬಂದರೆ ನಿನ್ನಸುದರ್ಶನದಿ ಅದು ಪೋಪುದು ಎಂದಿ 51ಮಹೈಶ್ವರ್ಯಪೂರ್ಣಹರಿನಿನ್ನ ಮಾತುಕೇಳಿಮಹಾನುಭಾವನು ಸಾಧುಪ್ರಿಯ ಬಲಿರಾಯಮಹಾನಂದ ಬಾಷ್ಪವ ಸುರಿಸುತ್ತ ಸ್ತುತಿಸಿದಮಹಾಕೃಪಾಂಬುಧೇ ಭಕ್ತವತ್ಸಲ ನಿನ್ನ 52ಅನತೇಷ್ಟಪ್ರದ ಪ್ರಪನ್ನಪಾಲಕ ವಿಭೋತನಗೆ ಪೂರ್ವದಿ ಲೋಕಪಾಲಕರ್ಗೆ ಸಿಕ್ಕದಅನುಗ್ರಹ ಮಾಡಿರುವಿ ಅಸುರನು ತಾನುಎನ್ನುವದು ಎಣಿಸದೆÀ ಕೃಪೆ ಮಾಡಿದಿ ಎಂದ 53ಕೃತಜÕ ಭಕ್ತನುಬಲಿಹರಿನಿನಗೆ ನಮಿಸಿದನುಪದುಮಭವಗೂ ಸದಾಶಿವಗೂ ನಮಿಸಿದನುಬಂಧಿಸಿದ ವರುಣಪಾಶವು ಬಿಟ್ಟು ಹೋಯಿತುಹೇ ದಯಾನಿಧೇ ನಿನ್ನ ಕರುಣದಿಂದಲ್ಲೆ 54ಈ ರೀತಿ ಹರಿವಾಮನ ನೀನು ಕ್ರೀಡಿಸಿದಿಶಕ್ತನಿಗೆ ಸ್ವರ್ಗಾಧಿಪತ್ಯ ಪುನರಿತ್ತಿಸುರಮಾತೆ ಅದಿತಿಗೆ ಪಯೋವ್ರತ ಫಲವಿತ್ತಿಸರ್ವಜಗತ್ತಿಗೆ ಸುಕ್ಷೇಮಒದಗಿಸಿದಿ 55ಸಿರಿಧರಾಪತಿ ವಿಷ್ಣು ಶಿಪಿವಿಷ್ಣು ವಾಮನಹರಿನಿನಗೆ ಮೂರಡಿ ಸ್ಥಳ ದಾನ ಕೊಟ್ಟುಮೂರನೇಪಾದತನ್ನ ಶಿರ ಮೇಲೆ ಇಡು ಎಂದಧೀರ ಬಲಿಗೆ ಭಾವಿ ಇಂದ್ರಪದವಿತ್ತಿ 56ಇನ್ನಾರಿಗೂ ಈ ಸಮಯದಿ ಸಿಕ್ಕದನಿನ್ನಯ ಮಹವಿಶೇಷ ಪ್ರಸಾದ ಕೊಟ್ಟಿರುವಿವನಜಭವ ಶಿವ ವಂದ್ಯಹರಿನೀನು ರಕ್ಷಕನುನೀನೆಲ್ಲಿ ನಾವು ಅಸುರರು ಎಲ್ಲಿ ಸ್ವಾಮಿ 57ಜಗತ್ ಸೃಷ್ಟ್ಯಾದಿಗಳ ಲೀಲೇಯಿಂದಲಿ ಮಾಳ್ಪಿಸರ್ವಗ ಸಮ ಅವಿಕ್ರಯ ವಿವಿಧಫಲದಹೀಗೆ ಇನ್ನೂ ಬಹು ತತ್ವನಿಬಿಡ ಸ್ತೋತ್ರಉಕ್ಕುವ ಭಕ್ತಿಯಲಿ ಮಾಡಿದ ಪ್ರಹ್ಲಾದ 58ವತ್ಸಪ್ರಹ್ಲಾದ ಭದ್ರಂತೇ ಎನ್ನುತಸುತಲಕೆಬಲಿಸಹ ಪೋಗಿ ಸುಖಿಸುವುದುಗದಾಪಾಣಿ ನಿನ್ನನ್ನುನಿತ್ಯನೋಡಿ ಮಹಾ-ನಂದ ಹೊಂದಿಕರ್ಮಕಳೆಎಂದು ಪೇಳ್ದಿ59ಸಾಧುಪ್ರಿಯ ಪ್ರಖ್ಯಾತ ಪ್ರಹ್ಲಾದ ಬಲಿರಾಜಪ್ರದಕ್ಷಿಣಿ ನಮಸ್ಕಾರ ಭಕ್ತಿಯಿಂ ಮಾಡಿಆದಿ ಪೂರಷ ನಿನ್ನ ಅನುಜÉÕೀಯ ಕೊಂಡುಪೋದರು ಸುತಲಕ್ಕೆ ಮಹಾಬಿಲ ದ್ವಾರ 60ಮಧ್ಯದಲೆ ತಡೆಯಾದ ಬಲಿಯಜÕ ಪೂರೈಸೆಯಜÉÕೀಶ ಯಜÕ ಪೂರುಷ ಭೂಮ ನೀನುಆಜÉÕ ಮಾಡಲು ಶುಕ್ರಾಚಾರ್ಯ ಬ್ರಾಹ್ಮಣರೊಡೆಯಜÕ ಕರ್ಮವ ಸಾಂಗ ಪೂರ್ಣ ಮಾಡಿದರು 60ಬ್ರಹ್ಮ ಶಿವ ದಕ್ಷ ಮನು ಬೃಗ್ ವಾಂಗೀರಾದಿಗಳುಕುಮಾರ ದೇವರ್ಷಿಗಳು ಪಿತೃ ಭೂಮಿಪ ಸರ್ವರುವಾಮನನೇ ಲೋಕೈಕಪತಿಪಾಲಕನೆನುತ ನಿನಗೆನಮಿಸಿ ತೋಷಿಸಿದನು ಅದಿತಿ ಕಶ್ಯಪರು 62ಸರ್ವಲೋಕಂಗಳಿಗೂ ಸರ್ವವೇದಂಗಳಿಗೂಸರ್ವದೇವತೆಗಳಿಗೂ ಧರ್ಮ ಯಶಸ್‍ಸಿರಿಗೂಸರ್ವಸುವ್ರತಗಳಿಗೂ ಸ್ವರ್ಗಾಪವರ್ಗಕ್ಕೂಸರ್ವವಿಭೂತಿಪತಿಮಂಗಳ ಉಪೇಂದ್ರ63ಪದುಮಜನು ಅನುಮೋದಿಸಿ ಇಂದ್ರ ಬೇಡಲುನೀ ದೇವಯಾನದಿ ಇಂದ್ರ ಸಹ ಕುಳಿತುತ್ರಿದಿವ ಸೇರಿದಿ ಇಂದ್ರೇಂದ್ರ ಉಪೇಂದ್ರ ಆ -ನಂದಮಯ ಜಗದೀಶ ಶ್ರೀಪತೇ ಭೂಮನ್ 64ಅದಿತಿ ದೇವಿಯ ಹೊಗಳಿ ವಿಷ್ಣು ವಾಮನ ನಿನ್ನಅದ್ಭುತ ಮಹಿಮೆ ಕೊಂಡಾಡಿ ಕೀರ್ತಿಸುತಪದುಮಭವ ಶಂಕರ ಭೃಗ್‍ವಾದಿಮುನಿಪಿತೃ ಸಿದ್ಧರು ಸ್ವಸ್ವಸ್ಥಾನಯೈದಿದರು 65ವಾಮನನು ವಿಶ್ವರೂಪ ಪ್ರಕಟಿಸಿ ದಾನವಸ್ತುಭೂಮಿ ದಿವಿಯ ಈರಡಿಗಳ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳಿದ ಮಾಯಾಜಾಲವು ಅಲ್ಲವಿಷಮ ವಸ್ತುವ ದೋಷ ಕಿಂಚಿತ್ತೂ ಅಲ್ಲ 66ಪ್ರಾಥಮಿಕವಾಗಿ ಶ್ರೀ ವಿಷ್ಣುರೂಪಒಂದೊಂದಲೂಅನಂತರೂಪಗಳು ಸುಖಜ್ಞಾನಾದಿ ಪೂರ್ಣವಾಗಿಶಶ್ವದೇಕ ಪ್ರಕಾರವಾಗಿ ಇಹುದೆಂದು ಶಾಸ್ತ್ರ ಸಾರುತಿವÉಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವೇಚ್ಛೆಯಿಂ ಆಗಾಗ67ಅಣೋರಣಿಯಾನ್ ಮಹತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೇ ವ್ಯಕ್ತ ಮಾಡಿದನು ವಿಷ್ಣು ವ್ಯಾಪನಶೀಲಗುಣರೂಪ ಅಭಿನ್ನ ಅವ್ಯಯನು 68ಮತ್ತೂ ಬಲಿರಾಜನಿಗೆ ಶ್ರುಕ್ರಾಚಾರ್ಯರುಮೊದಲೇವೇ ಹೇಳಿದರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿ ಸರ್ವವ ಎರಡು ಪಾದದಿಂ ಅಳೆವನೆಂದು69ಈ ರೀತಿ ಬಲಿರಾಜ ದಾನಕೊಡುವ ಪೂರ್ವದಲೆಹರಿವ್ಯಾಪನಶೀಲ ವಿಷ್ಣುವೇವೇ ವಾಮನನೆಂದುಅರಿತೇವೇಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರೆ ವಿಷಯ ವಂಚನೆಗೆ ಸಿಲುಕಲಿಲ್ಲ 70ಮೋಸಕ್ಕೆ ಒಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಈಶಾರ್ಪಣಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿದರು ದೇವಗಾಯಕರು 71ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿನಾನೇನ ಕೃತಂ ಸುದುಷ್ಕರಂವಿದ್ವಾನ್ ಅದಾದ್ ಯದ್ರಿಪವೇ ಜಗತ್ರಯಂಏಕೋನ ವಿಂಶತ್ ಅಧ್ಯಾಯ ಶ್ಲೋಕ ಇಪ್ಪತ್ತು 72ಬಲಿರಾಜನು ರಾಣಿ ವಿಂದ್ಯಾವಳಿಯುಅಲ್ಲಿ ಬಂದ ಪ್ರಹ್ಲಾದ ಮಹಾರಾಜನುಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾ ಅನುಗ್ರಹ ಮಾಡಿದಿ ಎಂದು ತಿಳಿದಿಹರು 73ಶಿಪಿವಿಷ್ಟ ವಾಮನ ತ್ರಿವಿಕ್ರಮನೆ ನಿನ್ನಸುಪವಿತ್ರ ಚರಿತೆ ಇದುಕೇಳಿಪಠಿಸುವರ್ಗೆಪಾಪ ಪರಿಹಾರವುಶುಭಮಂಗಳವಿತ್ತುಸೌಭಾಗ್ಯಪ್ರದ ಶ್ರೀಶ ಸದ್ಗತಿ ಈವಿ 74ಮಧ್ವಸ್ಥ ಸರ್ವಸ್ಥ ಮತ್‍ಸ್ಥವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 75- ಇತಿ ತೃತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬ್ರಹ್ಮದೇವರ ಸ್ತುತಿಸರಸೀಜಾಸನ ವಾಣಿ | ತರುಣೀವಲ್ಲಭಕ್ಷೋಣಿ|ಗುರುವೆ ಮುಗಿವೆನುಪಾಣಿ|ಹರಿಪಾದದಾಣಿ 1ಇನ್ನೊಬ್ಬರಾ ಬಲ್ಲೀನೆ | ಎನ್ನ ಸ್ವರೂಪೋದ್ಧಾರ ||ರನ್ನು ಜಗದೊಳು | ನಿನ್ವೆತಿರಿಕ್ತಾ 2ಈ ಕಥಿಗೆ ಮಂಗಳವಾ | ಕರುಣೀಸುತ್ವರ||ಲೋಕಾಧೀಶ ಪ್ರಾಣೇಶ | ವಿಠ್ಠಲನ್ನ ದಾಸಾ 3(ಈ ಪದವನ್ನು ದಾಸರಾಯರ ಮುಯ್ಯದ ಪದದಿಂದ ಸಂಗ್ರಹಿಸಲಾಗಿದೆ.)
--------------
ಪ್ರಾಣೇಶದಾಸರು
ಭಕ್ತರ ಪ್ರೇಮಿ ಫಕೀರ ಸ್ವಾಮಿ | ಭಕ್ತರ ನಿರ್ಮಿಸಿಭಕ್ತಿಯ ಪ್ರಕಟಿಸಿ | ಯುಕ್ತಿಯ ಬೋಧಿಸಿ | ಶಕ್ತಿಯನೊದಗಿಸಿ | ತ್ಯಕ್ತ ವಿಷಯ ವಿರಕ್ತಿಯ ಸೇರಿಸಿ |ಮುಕ್ತನೆನಿಸಿ ಅವ್ಯಕ್ತವ ಕರಗಿಸಿ1<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೋಧವ ಬೋಧಿಸಿ ಭೇದವ ಛೇದಿಸಿ |ವಾದವ ಅರಗಿಸಿ ಕ್ರೋಧವ ಕರಗಿಸಿ |ಛೇದ-ವಿಚ್ಛೇದದ ಹಾದಿಯ ಹಾರಿಸಿಓದುವ ನುಡಿ ವೇದಾಗಮವಾದವು2ನೀನೇ ನಿನ್ನ ನೀನೆ ನಿನ್ನೊಳು ನೀನೆ ಜಗದೊಳುನೀನೆ ಎನ್ನೊಳು ನೀನೆ ಸರ್ವವು ನೀನೆ ಎಲ್ಲವು |ನೀನೆ ನಿನ್ಹೊರತೇನೊಂದಿಲ್ಲ3ಶ್ರುತಿಸ್ವ .............. ನಿಂತವುಸ್ಮøತಿಗಳು ನಿಂತವು .........................ಮತಿಗಳು ಸ್ತುತಿಗಳದ ನಿಮ್ಮ ನಾ ಕಂಡು4ಮಾರಮದ ಸಂಹಾರ ತಿಸರ ಆಸಾರ ಸುಖ ಸಾಕಾರಾ |ಶಂಕರ ಶೂರಾಭವಭಯಹಾರಾಶ್ರೀ ಫಕೀರ................... ಜಗದೋದ್ಧಾರ ಸದ್ಗುರು5
--------------
ಜಕ್ಕಪ್ಪಯ್ಯನವರು
ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿನವೀನ ಜನನ ಮೃತ್ಯು ಭಯವೆಲ್ಲಿ ಪ.ಕುಶತಲ್ಪ ತಂತ್ರಸಾರಾರ್ಚನೆಯೆತ್ತಖಳಪ್ರಸರದ ಗೊಂದಣದಾರಿಯೆತ್ತಹೊಸಮಲ್ಲಿಗೆಯ ಹಾರ ಸುರಭ್ಯೆತ್ತ ಮಲಕಶ್ಮಲರತ ಗ್ರಾಮಸೂಕರೆತ್ತ 1ಚಕ್ರಪಾಣಿ ಒಲುಮೆ ವಿರತರಿಗುಂಟುಕರ್ತವಿಕ್ರಮವಾದಶೀಲಗೆ ಮತ್ತ್ಯೆಲ್ಲುಂಟುತಕ್ರಭಿನ್ನ್ವಾದರೆ ಹಾಲ ಹೋಲಲಿಲ್ಲ ಭಕ್ತಿವಕ್ರನೆಂದೆಂದಿಗೆ ಭಾಗವತನಲ್ಲ 2ಡಂಬರ ಶ್ರದ್ಧೆಗೆಹರಿಮೆಚ್ಚಲಿಲ್ಲ ಸಲೆಡೊಂಬ ರಾಷ್ಟ್ರ ತಿರುಗೆ ಭೂ ಪ್ರದಕ್ಷಿಣೆಯಲ್ಲಅಂಬುಜಾಕ್ಷನನ್ನು ನಂಬದವ ಕ್ಷುಲ್ಲ ಗತಅಂಬಕನ ನೋಟ ಬದಿಯ ಧನದಲಿಲ್ಲ 3ಇಂದಿರೇಶಮಹಿಮೆ ಮತಿಮಂದಗೇನು ದೀಪಹೊಂದಟ್ಟೆ ಭೋಜನಸುಖ ಶ್ವಾನಗೇನುಎಂದೂ ಸಾಧುಸಂಗಸೌಖ್ಯ ಕುಹಕಗಿಲ್ಲ ಕೆಚ್ಚಲೊಂದಿದ ಉಣ್ಣೆಗೆ ಕ್ಷೀರಸ್ವಾದವಿಲ್ಲ 4ಪೂರ್ವಕೃತಪುಣ್ಯ ಒದಗದೆಂದಿಗಿಲ್ಲ ಯತಿಸರ್ವಜÕರಾಯನ ಮತ ಸುಲಭವಲ್ಲಉರ್ವಿಯೊಳು ಸಮೀರಮತಸ್ಥರಕಾವತಂದೆಸರ್ವೇಶ ಪ್ರಸನ್ನವೆಂಕಟಾಧಿದೇವ 5
--------------
ಪ್ರಸನ್ನವೆಂಕಟದಾಸರು
ಲಾಲಿಪಂಪಾಂಬಿಕೆಲಾಲಿಭ್ರಮರಾಂಬಿಕೆಲಾಲಿಬಗಳಾಂಬಿಕೆಲಾಲಿಲಾಲಿಎಂದು ಪಾಡಿರಿ ಸಾಧು ಸಜ್ಜನರೆಲ್ಲದೇವಿ ತಾನೇ ಎಂದುಲಾಲಿಪಅದ್ವಯಾಗಮ ದ್ಯುತಿಗೋಚರ ಅನಾದಿಅಚಲಾನಂದವೇಲಾಲಿಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪಸುಚರಿತ್ರ ನಿಶ್ಚಲಲಾಲಿಚಿದ್ಬಯಲಿನೊಳು ಹೃದಯ ತೊಟ್ಟಿಲೊಳುಭಾವಹಾಸಿಗೆಯಲ್ಲಿ ಪವಡಿಸಿಹೆಲಾಲಿಸಿದ್ಧರಿ ಮಲಗಿನ್ನು ಜೋಗುಳ ಪಾಡುವೆಶ್ರೀ ಮಹಾಲಕ್ಷ್ಮಿಯೇಲಾಲಿ1ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪನಿಜನಿತ್ಯ ನಿರ್ಮಳೆಲಾಲಿಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿಸರ್ವಪರಬ್ರಹ್ಮರೂಪಲಾಲಿಪ್ರತ್ಯಗಾತ್ಮಳೆ ಪೂರ್ಣಪರಮ ಪರತರವಂದ್ಯೆಪಾವನ ಚಾರಿತ್ರೆಲಾಲಿಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆಕರುಣಾ ಸಮುದ್ರವೇಲಾಲಿ2ಪೃಥ್ವಿಅಪ್ಪುತೇಜವಾಯುರಾಕಾಶಕ್ಕೆಪೃಥಕಾಗಿ ಹೊಳೆದಿಹಳೆಲಾಲಿಸತ್ವರಜತಮಸು ಮೂರರೊಳಗೆ ನೀಸಾಕ್ಷಿರೂಪದಲಿರುವೆಲಾಲಿವೇದ ವೇದಾಂಗಗಳ ವಾಗ್ರೂಪಿನಲ್ಲಿನೆಲೆಸಿ ರಂಜಿಪಳೆಲಾಲಿತತ್ವವಿಂಶತಿ ಪಂಚಶರೀರಗಳೊಳಗೆ ನೀತೊಳ ತೊಳಗಿ ಬೆಳಗುತಿಹೆಲಾಲಿ3ಜಾಗೃತ ಸ್ವಪ್ನ ಸುಷುಪ್ತಿ ಮೂರವಸ್ಥೆಜನಿತದಿ ಕಾಣಿಸಿಲಾಲಿಪ್ರಾಜÕತೈಜಸವಿಶ್ವಮೂರು ಮೂರುತಿಯಾಗಿಪರಿಣಮಿಸಿ ತೋರುವೆಲಾಲಿಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆಸ್ವಾನಂದ ಸುಖವೀವೆಲಾಲಿರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳುಅತ್ಯುಗ್ರದಿ ಝಂಗಿಸುವೆಲಾಲಿ4ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿಸಿದ್ಧಿಗಳೆಂಬುವ ಛೇದಿಪ ಹರಿಹರಸರಸಿಜೋದ್ಭವ ಮಾತೆಲಾಲಿಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆಶ್ರೀ ಬಗಳಾಮುಖಿಲಾಲಿಸದ್ಗುರು ಚಿದಾನಂದಅವಧೂತಬಗಳಾಂಬ ಸಗುಣನಿರ್ಗುಣಮೂರ್ತಿಲಾಲಿ5
--------------
ಚಿದಾನಂದ ಅವಧೂತರು
ಶ್ರೀ ಸತ್ಯಧರ್ಮತೀರ್ಥರ ಚರಿತ್ರೆ128ಶ್ರೀ ಸತ್ಯಧರ್ಮ ತೀರ್ಥರ ಪಾದಯುಗ್ಮದಲಿನಾ ಶರಣು ಎನ್ನ ಪಾಲಿಪರು ಎಡಬಿಡದೆಅಸಮ ಅನುಪಮ ಸರ್ವಗುಣ ಗುಣಾರ್ಣವಅನಘಬಿಸಜಜಾಂಡದ ಒಡೆಯ ಶ್ರೀಶನಿಗೆ ಪ್ರಿಯರು ಪಹಂಸನಾಮಕ ವಿಷ್ಣುವನರುಹಾಸನಸನಕದೂರ್ವಾಸಮೊದಲಾದ ಗುರುವಂಶಜಾತದಶಪ್ರಮತಿಸರಸಿಜನಾಭನರಹರಿ ತೀರ್ಥಬಿಸಜಚರಣಂಗಳಲಿ ಸತತ ನಾ ಶರಣು1ಮಾಧವಅಕ್ಷೋಭ್ಯಜಯ ವಿದ್ಯಾಧಿರಾಜರಾಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸುತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದಾವ್ಯಾಸಾಭಿದ ಗುರುವಿದ್ಯಾಧೀಶರಿಗೆವೇದನಿಧಿಗಳಿಗೆ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವಸತ್ಯಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯಸತ್ಯಬೋಧರಿಗೆಸತ್ಯ ಸಂಧರಿಗೆ ನಾ ಶರಣಾದೆ ಎಂದೂ 4ಸತ್ಯವರತೀರ್ಥರಿಗೆ ಸತ್ಯವರ ಕರಜಾತಸತ್ಯಧರ್ಮರಿಗೆ ನಾ ಮನಸಾ ಆನಮಿಪೆಸತ್ಯಧರ್ಮರ ಮಹಿಮೆ ಬಹು ಬಹು ಬಹಳವುಕಿಂಚಿತ್ತು ಅಂಶಮಾತ್ರ ಸೂಚಿತವು ಇಲ್ಲಿ 5ಉದ್ದಾಮ ಪಂಡಿತರು ನವರತ್ನ ವಂಶಜರುವಿದ್ವತ್ ಶಿರೋಮಣಿ ಅಣ್ಣ ಆಚಾರ್ಯರುವೈದಿಕ ಸದಾಚಾರಿ ತ್ರಿಕರಣದಿ ಶುದ್ದರುನಂದಿನಿಧರ ಮಧ್ವಮಾಧವ ಪ್ರಿಯರು 6ವಿತ್ತಸಂಗ್ರಹದಲ್ಲಿ ಚಿತ್ತವನು ಇಡದಲೆಸತ್ಯಧರ್ಮದಿರತರು ಸಂತತ ಇವರುಸದಾಗಮಿಕಭಾಗವತಮಾಧ್ವ ಸಚ್ಛಾಸ್ತ್ರದಿಮುದದಿಂದಕಾಲಉಪಯೋಗ ಮಾಡುವರು7ಇಂಥಾ ಭಾಗವತರಲ್ಲಿ ಗಂಗಾಧರನೇವೇಬಂದು ಔತಣ ಉಂಡು ಉಡುಗೊರೆಯಕೊಂಡುಸಂತತ ತಾ ಧ್ಯಾನಿಸುವ ರಾಮನ್ನ ಇವರುಮುಂದು ಪೂಜಿಪ ಯೋಗ ಅನುಗ್ರಹ ಮಾಡಿದರು 8ಅಣ್ಣಾಚಾರ್ಯರ ಮನೆಯಲ್ಲಿ ಅಕ್ಕಿಉಣಲಿಕ್ಕೆ ಸಾಲದೆ ಇರುವಾಗ ಬಂದಬ್ರಾಹ್ಮಣ ಓರ್ವನು ಭಸ್ಮಧರ ಅವನುಅನ್ನಬೇಕೆಂದನು ಮಧ್ಯಾಹ್ನಕಾಲ 9ಅನ್ನ ಅನ್ನದ ಅನ್ನಾದನ್ನ ಸ್ಮರಿಸುತ್ತಅಣ್ಣಾಚಾರ್ಯರು ಅಡಿಗೆ ತಾಮಾಡಿಬ್ರಾಹ್ಮಣನಿಗೆ ಬಡಿಸಿ ಧೋತ್ರಗಳ ಕೊಟ್ಟರುಪೂರ್ಣ ಉಂಡು ಪೋದ ವಿಪ್ರನು ತುಷ್ಟಿಯಲ್ಲಿ 10ಹಿಂದೆ ಆಚಾರ್ಯರು ಪೋಗಿ ನೋಡಲು ಶಿವನಮಂದಿರದಿವಿಪ್ರಅಂತರ್ಧಾನನಾದಮಂದಾಕಿನಿಧರನ ಮೂರ್ತಿಯಲಿ ಧೋತ್ರಗಳುಚಂದದಿ ಇದ್ದವು ದಕ್ಷಿಣೆ ಸಮೇತ 11ಸವಣೂರು ರಾಜ್ಯದ ಮಂತ್ರಿ ಖಂಡೇರಾಯದಿವಿಜರ ಲೋಕಯಾತ್ರೆಯು ಮಾಡಲಾಗದೇವರ ನೈವೇದ್ಯಯಕ್ಕಾದರಣೆ ತಪ್ಪಲುಸವಣೂರು ಪ್ರಾಂತವ ಬಿಟ್ಟು ತೆರಳಿದರು 12ದೇವತಾಂಶರು ಇವರು ಮಾನುಷ ಜನ್ಮವಭೂಮಿಯಲ್ಲಿ ಕೊಂಡು ಮಾನುಷ್ಯ ಜನರಂತೆಭವಣೆಗಳ ಹರಿಸ್ಮರಣೆಯಿಂ ತಾಳಿ ತಪ್ಪಸ್ಸಂತೆದಿವ್ಯ ಮಂತ್ರಾಲಯ ಕ್ಷೇತ್ರ ಐದಿದರು 13ಔದಾರ್ಯಗುಣನಿಧಿ ಶ್ರೀ ರಾಘವೇಂದ್ರತೀರ್ಥರ ವೃಂದಾವನ ಸೇವೆ ಮಾಡಿಕೃತಕೃತ್ಯರಾದರು ಅಣ್ಣಾಚಾರ್ಯರುಒದಗಿ ಅನುಗ್ರಹಿಸಿದರು ಗುರುಗಳು ಬೇಗ 14ಶ್ರೀ ರಾಘವೇಂದ್ರ ತೀರ್ಥಾರ್ಯಕರುಣಿಗಳುತೋರಿ ಸ್ವಪ್ನದಿ ಸತ್ಯವರರಲ್ಲಿ ಪೋಗೆದೊರೆಯುವುದು ಇಷ್ಟಾರ್ಥ ಎಂದು ಪೇಳಿದರುಹೊರಟರು ಆಚಾರ್ಯರು ಸತ್ಯವರರಲ್ಲಿ 15ಆ ಸಮಯ ಶ್ರೀ ಸತ್ಯವರ ತೀರ್ಥರ ಮಠದಿಂಶ್ರೀ ಸ್ವಾಮಿ ಮಂಜೂಶ ಕಳವು ಆಗಿವ್ಯಸನದಲಿ ಉಪೋಶಣದಿ ಸತ್ಯವರರಿದ್ದರುಭಾಸವಾಗದೆ ಮೂರ್ತಿಗಳಿರುವ ಸ್ಥಳವು 16ಮಾರ್ಗದಲಿ ಅಣ್ಣಾಚಾರ್ಯರು ಮೂರ್ತಿಗಳಝಗ ಝಗಿಪ ಕಾಂತಿಯ ತಾ ಕಂಡು ಮಠಕ್ಕೆಪೋಗಿ ಶ್ರೀ ಸತ್ಯವರರಲ್ಲಿ ಪೇಳಿದರುಹೇಗೆ ವರ್ಣಿಸುವೆ ಆ ಗುರುಗಳ ಆನಂದ 17ನಿಗಮಘೋಷಂಗಳು ವಿಪ್ರಜನ ಮುಖದಿಂದಮಂಗಳ ಧ್ವನಿ ಮೇಳ ತಾಳವಾದ್ಯಗಳುಕಂಗೊಳಿಸುವ ಮೆರವಣಿಗೆ ಮಠಮಂದಿರಕ್ಕೆಗಂಗಾಜನಕನ ಮೂರ್ತಿಗಳ ತಂದರು 18ಯುಕ್ತಕಾಲದಿ ಅಣ್ಣಾಚಾರ್ಯಸೂರಿಗಳುಸತ್ಯವರರ ಅಮೃತ ಹಸ್ತಾಭಿಷೇಕಯತಿ ಆಶ್ರಮ ಸತ್ಯಧರ್ಮತೀರ್ಥರೆಂದು ನಾಮಾಪ್ರಣವಉಪದೇಶಕೊಂಡರು19ಪ್ರಣವೋಪದೇಶಗುರುಹಸ್ತದಿಂ ಅಭಿಷೇಕಘನಮಹಾವೇದಾಂತ ಪೀಠವು ಲಭಿಸಿಈ ನಮ್ಮ ಸತ್ಯಧರ್ಮರ ದೇಶದಿಗ್ವಿಜಯಜ್ಞಾನೋಪದೇಶ ಹರಿಪೂಜಾ ಮಾಡಿದರು 20ಭಾವುಕರ ಪ್ರಿಯತಮಸನತ್ಸುಜಾತೀಯವುಭಾವದೀಪಿಕ ಶ್ರೀಮದ್ ಭಾಗವತಕೆತತ್ವಸಂಖ್ಯಾನ ಶ್ರೀ ವಿಷ್ಣು ತತ್ವನಿರ್ಣಯಇವು ಎರಡಕ್ಕೂ ಟಿಪ್ಪಣಿ ಬರೆದು ಇಹರು 21ವಾಗ್ವಜ್ರ ಧಾರಾವುದುರ್ವಾದಿಗಿರಿಕುಲಿಶಜಗತಲ್ಲಿ ಹೋದಕಡೆ ಎಲ್ಲೂ ಮರ್ಯಾದೆಬಾಗುವ ಯೋಗ್ಯರಿಗೆ ಸತ್ತತ್ವ ಉಪದೇಶಜಗಕ್ಷೇಮಕರ ಪೂಜಾ ವರವು ದೀನರಿಗೆ 22ಮೂವತ್ತು ಮೇಲ್ಮೂರು ವತ್ಸರವು ಶ್ರೀಮಠಸುವಿತರಣಿಯಿಂದ ಆಡಳಿತ ಮಾಡಿಸುವರ್ಣ ರತ್ನಾಭರಣ ಮಠತೋಟಂಗಳದೇವಪ್ರೀತ್ಯರ್ಥ ಸೇರಿಸಿದರು ಮಠಕೆ 23ಹದಿನೇಳನೂರು ಐವತ್ತೆರಡು ಶಾಲಿಶಕತ್ರಯೋದಶಿಶ್ರಾವಣಕೃಷ್ಣಪಕ್ಷಇಂಥಾ ಸುಪುಣ್ಯ ದಿನದಲ್ಲಿ ಶ್ರೀ ಹರಿಯಪಾದವನೈದಿದರು ಹರಿಯಧ್ಯಾನಿಸುತ 24ಮತ್ತೊಂದು ಅಂಶದಲಿ ವೃಂದಾವನದಲ್ಲಿಬಂದು ಸೇವಿಸುವವರ ವಾಂಛಿತವೀಯುತ್ತನಂದಿನಿಧರ ಮಧ್ವ ಮಾಧವನ ಒಲಿಮೆಯಿಂನಿಂತಿಹರು ಸ್ಮರಿಪರ ಗೋಕಲ್ಪತರುವು 25ಕನ್ನಡಪ್ರದೇಶದಲಿ ಮಹಿಷೂರು ರಾಜ್ಯ ಹೊಳೆಹೊನ್ನೂರು ಕ್ಷೇತ್ರದಲಿ ವೃಂದಾವನಅಹ್ನುಕನ್ಯಾ ಬಿಂದು ರೂಪದಲಿ ವರ್ಷಿಪಳುಜಾಹ್ನವಿಧರ ಉಸುವು ಕಣರೂಪದೊಳಗೆ 26ಒಲಿವ ಶಿವ ಸತ್ಯ ಧರ್ಮರ ನಾವು ಸ್ಮರಿಸಲುಒಲಿವರು ಮಧ್ವಮುನಿ ಶಿವನು ನಮಗೊಲಿಯೆಒಲಿವನುಅಜಪಿತ`ಶ್ರೀ ಪ್ರಸನ್ನ ಶ್ರೀನಿವಾಸನು'ಒಲಿವ ಬೋಧರು ಮಧ್ವಮುನಿ ಒಲಿದರೇವೇ 27 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸರಸ್ವತಿ ದೇಹಿಸನ್ಮತಿಪ.ವಿಧಿಸತಿ ಸುವ್ರತಿ ಶ್ರೀಮತಿಭಾರತಿಅ.ಪ.ನಿಗಮವೇದ್ಯನನುನಿತ್ಯಪೊಗಳುತಿಜಗದೀಶ್ವರಿ ಜಲಜಾಯತನೇತ್ರಿಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿಸರಸ್ವತಿ ದೇಹಿಸನ್ಮತಿ1ಶರ್ವೇಂದ್ರಪೂರ್ವ ಗೀರ್ವಾಣತತಿಸರ್ವದಾಚರಿಸುವುದು ತವ ಸ್ತುತಿಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿಸರಸ್ವತಿ ದೇಹಿಸನ್ಮತಿ2ಲಕ್ಷ್ಮೀನಾರಾಯಣನ ಮೂರುತಿಲಕ್ಷಿಸಿ ಮನದೊಳಾನಂದದೊಳಿರುತಿಗುಣವತಿಸುಗತಿಸುಧೃತಿ ವಿಧಾತ್ರಿಸರಸ್ವತಿ ದೇಹಿಸನ್ಮತಿ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸರಿಸರಿದೋಡುತಿವೆಲವತ್ರುಟಿಗಳುತಿರುಗದಲಿಟ್ಟಡಿಯಹರಿಗುರು ಪ್ರೀತಿಯ ದೊರಕಿಸು ಪ್ರಾಣಿಕಿರಿಯರಲ್ಲ್ಲ್ಯಮನವರು ಪ್ರಾಣಿ ಪ.ಪರದಾರ ಪರಸಿರಿ ಪರನಿಂದೆ ನಿರುತದಿಚಿರರತಿ ಬೆರತ್ಯಲ್ಲೊಪರಉಪಕಾರ ದಾರಿಯರಿಯದೆ ಬರಿ ಒಣಗರುವಿನಲಿರುವ್ಯಲ್ಲೊನರಹರಿ ಚರಣವಾದರಿಸದೆ ಸ್ಮರಿಸದೆನರರನುಸರಿಪ್ಯಲ್ಲೊಶರೀರ ಸಿಂಗರಿಸಿ ಸತ್ಕಾರ್ಯಬಾಹಿರನಾಗಿನಿರಯಕೆ ಗುರಿಯಾದ್ಯಲ್ಲೊ ಪ್ರಾಣಿ 1ಸುಖಗಳ ಕಕುಲತೆಗಖಿಳ ಸಾಧಕನಾದೆಭಕುತಿಗಳಿಕೆ ತೊರೆದುಬಕವೃತ್ತಿಯ ಕಲಿತು ಮುಖವ ಮುಸುಕಿದೆ ವಿರಕ್ತಿಸರಕುದೋರೈಲೋಕದ ಮೋಹಕ ಜ್ಞಾನಾಧಿಕನಾದೆ ಅಕಳಂಕಸುಖತೀರ್ಥವಾಕುದೋರೈಸಕಲಕಲೆ ಕಲಿತು ಸ್ತ್ರೀಕದಂಬ ಸಖನಾದೆಮುಕುತಿ ಹೊಂದಿಕೆ ತೋರೈ ಪ್ರಾಣಿ 2ಅಶನದುವ್ರ್ಯಸನಕೆ ನಿಶಿದಿನ ವಶನಾದೆಶ್ರೀಶ ಭೃತ್ಯೆನಿಸಿಕೊಳ್ಳೊಹುಸಿಉಪದೇಶಧ್ಯಾತ್ಮ ವೇಷದೊಳು ಘಾಸಿಯಾದೆದಶವ ವರಿಸಿಕೊಳ್ಳೈವಿಷಯ ಬಯಸಿ ವೃಥ ಮಸಿವರ್ಣೆನಿಸದೆ ನೀನ್ಯಶಸ ಕೂಡಿಸಿಕೊಳ್ಳೈಹಸಿತೃಷೆಗಸಣೆಗೆ ಬೇಸರದೆ ಪ್ರಸನ್ವೆಂಕಟೇಶನ ಒಲಿಸಿಕೊಳ್ಳೈ ಪ್ರಾಣಿ 3
--------------
ಪ್ರಸನ್ನವೆಂಕಟದಾಸರು