ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಶ್ರೀರಾಮ ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ1 ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಪಾದ ಶ್ರೀದರ್ಭಶಯನಾ 2 ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ ಜನನಾಥ ಜಾನಕಿಕಾಂತ ತಿಳುಪುವದು ಎನಗೊಲಿದ ವಿಜಯವಿಠ್ಠಲ ದರ್ಭಶಯನಾ 3
--------------
ವಿಜಯದಾಸ
ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಇದಿರುದೋರಿ ಮರೆಯಾದ ಬಗೆುದೇನಯ್ಯಾಸದಯ ವೆಂಕಟದಾಸಾರ್ಯ ವೇಷದಾಳಿ ಗುರುವರ್ಯ ಪತೊಳಲುತಿರೆ ಭವಕೂಪದೊಳು ಮುಳುಗಿ ಮೂಢ ಜನರುಕಳಿವರೆಂತೀಯಾತನೆಯನಳಲುವರೆಂದುತಳೆದು ಕೃಪಾರಸವನ್ನು ತಿಳು' ಭಕುತಿ ವೈರಾಗ್ಯವನುಸುಲಭದಿಂ ಜ್ಞಾನವನರುಪಲೊಲಿದು ಧರೆಯೊಳವತರಿಸಿ 1 ಆ'ರ್ಭಾವಾತಿರೋಭಾವವಾವಗವೂ ಭಕ್ತರ್ಗಾಗಿ ಸ್ವಾಭಾ'ಕವೆಂದು ಪಾರಾಣ ಭಾವವನರಿತೂಸಾವಧಾನಗೈದರೂ ಮನೋ'ಕಾರ ತೊಲಗದೂಕೇವಲಾನಂದ ನಿತ್ಯನಿರಾವಲಂಬ ಸತ್ಯಾತ್ಮಕನೆ 2ಪಲವುಭವದಿಮಾಡ್ದ ಸುಕೃತ ಫಲಿಸಿತೆಂದಿದ್ದೆನೀವರೆಗುತೊಲಗಿ ತಾಪುಣ್ಯವೆಂಬಂತೆ ಚಲಿಸಿ ಚಿತ್ತವೂ ತೊಳಲುತಿದೆ ನಿನ್ನ ಸುಖಮಂಗಳರೂಪು ವಚನಗಳ ನೆನೆದುನೆಲೆಗೊಳಿಪಂದದಿ ಮತಿಯ ತಿಳುಹುವವರಾರೆಮಗಕಟ 3ಹಾನಿ ಧರ್ಮಕ್ಕೊದಗಲು ನಾನುದಿಪೆನೆಂದಭಯವನೀನೊಲಿದಿತ್ತುದಕಾಗಿ ನಾನಾ ರೂಪದೀಜ್ಞಾನ ಮಾರ್ಗವನರು' ಮಾನವರನುದ್ಧರಿಸಿದೆದೀನ ವತ್ಸಲನೆ ುೀಗಲೇನುಕಾರಣ 'ೀ ಸಮಯದಿ 4ಕರದು ಮೂಢರಜ್ಞತೆಯನು ಪರಿದು ಜ್ಞಾನಾನಂದ ಸುಧೆಯಎರದು ಹೊರದೆಯಲೈ ಚಿಕ್ಕನಾಗಪುರದಿವರದ ವಾಸುದೇವಾರ್ಯ ಸದ್ಗುರುವೆ ವೆಂಕಟದಾಸತನುವಧರಿಸಿರೆ ನಂಬಿದ್ದರೆಮ್ಮನತಿ ಪುಣ್ಯವಂತರೆಂಬಂತೆ 5
--------------
ತಿಮ್ಮಪ್ಪದಾಸರು
ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ಧ್ರುವ ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ಮಾಡುವ ಬನ್ನಿರೊ 1 ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ ಮಾಡುವ ಬನ್ನಿರೊ 2 ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ನಲಿದಾಡುವ ಬನ್ನಿರೊ 3 ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ ಮಾಡುವ ಬನ್ನಿರೊ 4 ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ ಮಾಡುವ ಬನ್ನಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭೂತರಾಜರು ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ. ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ. ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ 1 ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ 2 ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ 3
--------------
ಸಿರಿಗುರುತಂದೆವರದವಿಠಲರು
ವಂದಿಸಿ ಬದುಕಿ ತಂದೆ ಮುದ್ದು ಮೋಹನ ಗುರುಗಳ ಪ ಇಂದಿರೆ ಅರಸ ಅಂದ ತಲ್ಪರಂಶರೆಂಬರಾ ಅ.ಪ. ತರಳತನಾರಭ್ಯ ಹರಿಯ | ಪರಮ ಅನುರಾಗದಿಂದ ಪರಿಸರಾನಂದ ತೀರ್ಥ | ಪರಮಮತ ವಿಚಾರದಲ್ಲಿ |ಅರೆಕ್ಷಣವು ಬಿಡದೆ ನಿರತರಾ | ಆತ್ಮ ಜ್ಞಾನದರ್ಶನಾನುಷ್ಠಾನ ಚರಿಸುತಾ | ಭಕ್ತಿಯೇ ಸುಪ್ರಚುರ ಪಂಥವನ್ನೆ ಮಾಡುತಾ | ಯುಕ್ತಿಯಿಂದಚರಿಪ ಸರ್ವವೂ ಶ್ರೀಹರಿಯ | ಪರವು ಎಂದ ಕಡಿದ ಬಂಧ 1 ವ್ಯಾಸ ಗ್ರಂಥ ಸದಾಭ್ಯಾಸಿ | ದಾಸಕೂಟವೆಂಬ ವರಜಲಾಶಯಕೆ ಪರಮ ಅರ್ಥ ತಾ | ರೇಶನ್ನುದಿಸಿ ಭೂಸುರ ಮನೋಲ್ಲಾಸ ಮಾಡಿ ಲೇಸಾಗಿ ಬೆಳಗುತ | ಜ್ಞಾನ ಕಿರಣಸೂಸ್ಯನೇಕಾಂಕಿತಾಗಳ | ಇತ್ತು ಕರ್ಮಹ್ರಾಸ ಮಾಳ್ವ ಬಗೆಯ ತಿಳುಹುತ | ಕವನದಿಂದಸಾಸಿರ ಪುಷ್ಪಮಾಲೆ ಹರಿಗಿತ್ತ ದಯವ ಪೊತ್ತ2 ಕ್ಲೇಶ ಸಂಶಯಾ | ಹರಿಸಿ ಪವನ ಮತದಿ ದೀಕ್ಷೆಯಾನಿರತಿಶಯದ ದಾಸದೀಕ್ಷೆಯ | ಇತ್ತು ಹೃದಯದಲ್ಲಿಹರಿಯ ಮೂರ್ತಿಯನ್ನೆ ನೋಡುವ | ಶಾಸ್ತ್ರ ಸಮ್ಮತಿಕೀರ್ತನೆಗಳ ನುಡಿಸಿದಾ | ಗುರು ಗೋವಿಂದ ವಿಠಲ ಪದಸರೋಜ ರಜವ ಶಿರದೊಳ್ ಧೃತರ | ಕೃಪಾಕರರ 3
--------------
ಗುರುಗೋವಿಂದವಿಠಲರು