ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ ಶೋಧಿಸಿ ನೋಡಲಿಕ್ಕೆ ಛೆÉೀದಿಸಿಹೋಗುದು ಭವಕರ್ಮ ಧ್ರುವ ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ 1 ದೋರದ ನೋಡಬ್ಯಾಡಿ ದೋರಿಸುವದು ನೋಡಿ ದೋರಿಸಿದೋರಗುಡದಿಹುದ ಖೂನ ನಿಜಮಾಡಿ 2 ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ 3 ಆಡದ ನೋಡಬ್ಯಾಡಿ ಅಡಿಸುವದ ನೋಡಿ ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ 4 ನುಡದ ನೋಡಬ್ಯಾಡಿ ನುಡಿಸುವದ ನೋಡಿ ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ 5 ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ 6 ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿದು ನೋಡಿ ತನುವಿನೊಳು ತಮ್ಮ ನಿಜಖೂನ ಸುಳುಹು ದೋರಿಕುಡುವ ನೋಡಿ ನಿಜಾನಂದ ಘನ ಧ್ರುವ ತಮ್ಮ ಶುದ್ಧಿ ತಮಗಿಲ್ಲವೊ ಹೆಮ್ಮೆ ಬಹಳ ಘಮ್ಮ ಆದರೆ ಎಲ್ಲ ನೋಡಿ ಹೊಕ್ಕು ಮೃಗಜಲ ನಮ್ಮ ನಿಮ್ಮದೆಂದು ಹೊಡೆದಾಡಿ ಬಿತ್ತು ಬೀಳ ಸಮ್ಯಗ್ ಜ್ಞಾನದಿಂದ ತಿಳಿದವನೆ ವಿರಳ 1 ತನ್ನ ತಾ ತಿಳಿದವಗೇನು ಭಿನ್ನಭೇದವಿಲ್ಲ ಉನ್ಮನವಾಗಿ ಪೂರ್ಣ ತಿಳಿದವನೆ ಬಲ್ಲ ಧನ್ಯವಾದ ಮಹಿಮರಿನ್ನು ಮನಿಮನಿಗೆ ಇಲ್ಲ ಕಣ್ಣಾರೆ ಕಾಣುತಿಹ್ಯ ಗುಪ್ತಗುಹ್ಯವೆಲ್ಲ 2 ತಿಳುಹದೋರಿಕೊಟ್ಟ ಗುರು ಎನ್ನೊಳÀಗೆ ಪೂರ್ಣ ಹೊಳೆಹುತಿಹ್ಯಾನಂದ ಘನಸದ್ಗುರು ಪೂರ್ಣ ಥಳಥಳಿಸುತಿಹದು ಸದ್ಗತಿ ಸಾಧನ ಕಳೆದ ಮಹಿಪತಿ ನೋಡಿ ಜನನ ಮರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು