ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಶ್ರೀರಾಮ ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ1 ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಪಾದ ಶ್ರೀದರ್ಭಶಯನಾ 2 ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ ಜನನಾಥ ಜಾನಕಿಕಾಂತ ತಿಳುಪುವದು ಎನಗೊಲಿದ ವಿಜಯವಿಠ್ಠಲ ದರ್ಭಶಯನಾ 3
--------------
ವಿಜಯದಾಸ
ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಪ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ 1 ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನೀರಜ ನಯನೇ 2 ನಿತ್ಯ ಕರ್ಮಗಳು ನೋಡಲಿ ಬಂದ್ಯೋ | ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ | ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ | ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ | ನಿಜವ ತಿಳುಪುವದು ವಿಜಯವಿಠ್ಠಲಸುತೆ 3
--------------
ವಿಜಯದಾಸ