ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ಶೌರಿ ನೀನು ಪಾದ್ಯ ಶುಕ ಬಿಂಬ ಪ ನಿತ್ಯ ವಸ್ತುವು ನೀನು ನಿತ್ಯರಲಿ ನೀ ನಿತ್ಯ ನಿತ್ಯಸುಖ ಪರಿಪೂರ್ಣ ಸತ್ಯ ಕೃತ್ಯ ಭೃತ್ಯಪಾಲಕರಲ್ಲಿ ಸಮರಿಲ್ಲ ನಿನಗಿನ್ನು ಭಕ್ತವತ್ಸಲ ಎನ್ನ ಯುಕ್ತಿಯಲಿ ಕೈಪಿಡಿಯೊ 1 ಕರ ಪೊಂದಿ ದುಮ್ಮನವ ಬೆಳೆಸಿದೆನೊ ಅವಶನಾಗಿ ನಿರ್ಮಮರದೇವ | ತ್ವದಾಸ್ಯ ಪಾಲಿಸು ಎನಗೆ ಕರ್ಮನಾಮಕ ನೀನೆ ಸದ್ಧರ್ಮಕಾರಕನೆ 2 ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ ಅನ್ಯುಪಾಯವು ಇಲ್ಲ ಅಭಯಪದಕೆ ಪೂರ್ಣಪ್ರಜ್ಞರ ಗುರುವೆ ಜಯೇಶವಿಠಲ ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೊ 3
--------------
ಜಯೇಶವಿಠಲ