ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಗರ ಮಾಡಿದೆನೇ ಪ ಜಾಗರ ಮಾಡಿದೆ ಸಾಗರನಿಲಯನ ನೀಗದಮಹಿಮೆ ಶಿವ ಯೋಗದಿ ತಿಳಿಸೆಂದು ಅ.ಪ ಲಕ್ಷಪತ್ರರ್ಪಿಸಿ ತ್ರಿಜಗದ್ರಕ್ಷ ನಿನಗೆ ನಮಿಸಿ ಲಕ್ಷದಿಂದ ಸತಿಗಕ್ಷಯವಿತ್ತ ಭಕ್ತ ಪಕ್ಷನ ನಾಮ ಎನ್ನ ಕುಕ್ಷಿಗೆ ನೀಡೆಂದು 1 ಮನವನು ಮಡಿಮಾಡಿ ಹರಹರ ನಿನಗೆ ನಾ ಎಡೆಮಾಡಿ ಮನಸಿಜಜನಕನ ಘನಸಚ್ಚರಿತೆಯನ್ನು ಕೊನೆಯ ನಾಲಗೆ ಮೇಲೆ ನೆನವು ಸ್ಥಾಪಿಸೆಂದು 2 ಪ್ರೇಮ ದೃಷ್ಟಿ ತೆರೆದು ಶಂಭು ಎನ್ನ ಕಾಮಿತಗಳ ಕಡಿದು ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ ಕೋಮಲ ಪಾದವೆನ್ನ ಮಂಡೆಮೇಲ್ಹೊರಿಸೆಂದು 3
--------------
ರಾಮದಾಸರು
ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ವೇದವ್ಯಾಸರ ದಿವ್ಯಪಾದ ಪದುಮಯುಗಲ ಆರಾಧಿಸುತಿರು ಮನುಜಾ ಪ ವೇದಗಳಿಗೆ ಸಮ್ಮತವಾದ ಪುರಾಣಗಳ ಸಾದರದಲಿ ರಚಿಸಿ ಮೋದವ ಬೀರಿದ ಅ.ಪ ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು ಸುರಮುನಿ ಪ್ರಾರ್ಥನದಿ ಭಾಗವತ ಗ್ರಂಥ ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ 1 ವಾಸಿಪ ಮುನಿಗುಣ ಭೂಷಿತ ಬದರಿಯೋಳ್ ತೋಷ ತೀರ್ಥರ ಕರೆದು ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ ಭಾಷ್ಯವರಚಿಸೆಂದಾದೇಶವ ನೀಡಿದ2 ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ ಕರಗಳಿಂದಲಿ ಶೋಭಿತ ಸುರತರು ವೆನಿಸಿ ಧರೆಯೊಳು ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ 3
--------------
ಕಾರ್ಪರ ನರಹರಿದಾಸರು