ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ. ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ 1 ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ 2 ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ವೀರನಾರಾಯಣನು ನೀನೆ 3
--------------
ವೀರನಾರಾಯಣ
ಯಾತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಾಧೀನ ಜಗವೆಲ್ಲ ಪ ಕಾಲಗುಣಕರ್ಮ ಸ್ವಭಾವಗಳ ಮನ ಮಾಡಿ ಶ್ರೀಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈಯುತ ಲಿಪ್ತನಾಗದೆ ನಿರಂತರದಿ ದಿವಿಜ ದಾನವ ತತಿಯ 1 ತಿಳಿಸಿಕೊಂಬುವ ನೀನೆ ಶ್ರುತಿತತಿಗಳೊಳಗಿದ್ದು ತಿಳಿಸುವವ ನೀನೆ ಉಪದೇಶಕರೊಳು ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳು ನಿಖಿಳ ವ್ಯಾಪಾರ ಮಾಡುತಲಿಪ್ಪೆ 2 ಅಗಣಿತ ಮಹಿಮೆ ಜಗಜ್ಜನ್ಮಾದಿಕಾರಣನೆ ತ್ರಿಗುಣವರ್ಜಿತ ತ್ರಿವಿಕ್ರಮ ತ್ರಿಧಾಮಾ ವಿನುತ ಜಗನ್ನಾಥ ವಿಠ್ಠಲ ನಿನ್ನ ಪೊಗಳಿ ಹಿಗ್ಗುವ ಭಾಗ್ಯಕೊಡು ಜನ್ಮ ಜನ್ಮಕೂ 3
--------------
ಜಗನ್ನಾಥದಾಸರು