ಒಟ್ಟು 7 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೇ ನಿಜಯೋಗಿ | ವಿರಾಗಿ | ಭೋಗಿ 1 ದಾವನ ನೋಟದಲಿ | ಸಮ ವಿಷಮಾ | ಭಾವನೆಗಾಯಿತು ಸೀಮಾ 2 ಮಾಯಾ ಕಲ್ಪಿತದಾ | ಜಗಮರೆತಾ | ನ್ಯಾಯದಿ ಚಿದ್ಘನವರಿತಾ 3 ಮಂದಗೆಡನು ಚರಸೀ | ತಾನಾಗಿ | ಬಂದದನುಂಬನು ತ್ಯಾಗಿ 4 ಬಲ್ಲವಿಕಿಲಿ ಬಿಗಿಯಾ | ದಾವನು | ಎಲ್ಲರಿಗ್ಯಾಗಿಹ ಹರಿಪ್ರಿಯನು5 ಮಹಿಪತಿ ಸುತ ಪ್ರಿಯನಾ | ತಿಳಿವಿಕೆಯಾ | ಸೋಹ್ಯವ ತಿಳಿದನು ನೆಲಿಯಾ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಳೇಳು ಬಾಲಕನೆ ಅಜ್ಞಾನನಿದ್ರೆಯಿಂ ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ ಕೋಳಿ ಕೂಗುತಲಿಹುದು `ತತ್ವಮಸಿ' ಎಂದು 1 ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ ಚಿತ್ತವೆನ್ನುವ ಕಮಲವರಳಿಹುದು ನೋಡೀಗ ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ 2 ಜ್ಞಾನನಿಂದಕರೆಂಬ ಗೂಗೆಗಳು ಅಡಗಿದವು ಕಾಣದಾದವು ಕುತರ್ಕಗಳೆಂಬ ತಾರೆಗಳು ಸ್ವಾನುಭವಸುಜ್ಞಾನಭಾನುವುದಯಿಸುತಿಹನು ಜ್ಞಾನಿಶಂಕರನ ಸದ್ಬೋಧವನೆ ಸ್ಮರಿಸುತಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳಿದವನೇ ಪೂರ್ಣಾ | ತಿಳಿವಿಕೆಯೊಳು ತನ್ನಯ ಖೂನಾ ಪ ತಿಳಿವಿಕೆ ತಿಳಿವದು ಯರಡಿಲ್ಲೆಂದು | ತಿಳಿದೇ ನರ ಬಾಹಂಭ್ರಮ ಜರಿದು 1 ವೇದಾಂತ ಸಾರದ ವಾಜ್ಯನು-ಭವನು | ಸಾಧು ಜನರ ದಯದಲಿ ಪಡೆದನು 2 ಜಲಧಿಯೊಳಗ ಲಹರಿಗಳೇಳ್ವೆಂತೆ | ಸಲೆ ಆತ್ಮನಿಂದಲಿ ಜಗದುದ್ಭವಂತೆ 3 ಪೂರ್ವಾರ್ಧದ ಬಿಸಿಲಿನ ನೆರಳೆಂದು | ದೋರ್ವ ಸಂಸಾರವು ಸ್ಥಿರವಲ್ಲೆಂದು 4 ಗುರುಮಹಿಪತಿ ಚರಣಕ ತಲೆವಾಗಿ | ಬೆರೆದು ಸತ್ವದೊಳಗ ರಜತಮ ನೀಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿವಿಕೆ ನೋಡಣ್ಣಾ ಪ ಉಬ್ಬುಸಗೊಳುತಲಿ ಹುಡುಕುತ ತಂದು | ಒಬ್ಬರ ಪದ ಪದ್ಯಗಳನೇ ಹಳಿದು | ಉಬ್ಬುಬ್ಬಿ, ಹೇಳುವ ತನ್ನದೆಂದು 1 ಹಂಬಲಿಸದೆ ಮೃದು ತಂಪಿನ ಯಲಿಯಾ | ಬೆಂಬಿಸ ದಾರಿಸಿ ಮುಳ್ಳಿನ ಕೊನೆಯಾ | ತಿಂಬುವ ಒಂಟೆಯ ಮತಿಪರಿಯಾ 2 ಪರಿಪರಿ ಶೃಂಗಾರದ ಕಲೆಯಂಗಳು | ಪರಿ ಅರೆಯದೆ ಇರಲು | ಕೊರತೇನು ಪತಿವ್ರತೆ ಗುಣಗಳು 3 ಸಾರಸ ತಿಳಿಯದೇ ನೋಡಾ| ನಿಬ್ಬಿರೆನುತಾ ಬಿಟ್ಟವ ಬಲು ಮೂಢಾ | ಹಬ್ಬುವಾ ಚಾತುರತನ ಕೂಡಾ 4 ಬರೆ ಬೀರುತ ಮಾತುಗಳನೆ ಬಚ್ಚಾ | ಧರೆಯೊಳು ಹೆಮ್ಮಿಗೆ ಬಿದ್ದನು ಹುಚ್ಚಾ | ಗುರು ಮಹಿಪತಿ ಸುತ ಪ್ರಭು ಮೆಚ್ಚಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇಹದ ಭಾವಾ ಮೋಹವಾ ಕಳೆ ನಾನೀನೆನ್ನುವ ಭೇದವಾ ಪ ತನು ಮೂರರ ಸಾಕ್ಷೀ ನೀನಿಹೆ ಘನ ಚಿನ್ಮಯರೂಪಾ ನೀನಿಹೆ ಅನುಮಾನಿಸದೀಪರಿ ಯೋಚಿಸು ನೀ ಮನವಾರೆ ಇದೇ ನಿಜವೆಂದೆನುತಾ ಅನುದಿನದಲಿ ನಿಶ್ಚಯಗೊಳಿಸುತಲಿ ಅನುಭವದಲಿ ತಿಳಿ ಈ ಬೋಧವಾ ಕಳೆ ನಾನೀನೆನ್ನುವ ಭೇದವಾ 1 ಇದು ತೋರಿ ಅಡಗುವಾ ಕಲ್ಪನೆ ಅದು ತೋರಿಕೆಯಳಿದ ಆತ್ಮನೇ ಪರಿ ಈ ಜಗವೆಲ್ಲ ಅದು ನೀನಿರುವಿ ಇದು ನೀನಲ್ಲ ಇದೆ ತಿಳಿವಿಕೆಯಿಂದಲಿ ಮುಕುತಿ ಕಣಾ ಇದೆ ಶಂಕರಗುರುವಿನ ಬೋಧವಾ ತಿಳಿದಾನಂದಿಸು ನೀನೇ ಶಿವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಸುಳ್ಳು ಮಾತಿನ ನಿನ್ನಾಚಾರವು ತಿಳಿವಿಕೆ ಏನೇನಿಲ್ಲಎಲ್ಲ ಡಂಭವು ನಡತೆಯ ವಿವರವು ಗತಿಗೆನೀ ದೂರಾದೆಯಲ್ಲಪಮಂಡೆಯ ಬೋಳಿಸಿ ಕಣ್ಣನೆ ಮುಚ್ಚುವಿಪಿಟಿಪಿಟಿ ಏನದು ಮಂತ್ರದಂಡವೇತಕೆ ಮನಸದು ಚಂಚಲಏತಕೆ ಮಾಡುವಿ ತಂತ್ರ1ಕೈಯಣ ಗಿಂಡಿಯ ಕಂಕುಳ ಪೆಟ್ಟಿಗೆಕಟ್ಟಿಯಿಹುದು ತಲೆಗಟ್ಟುಬೈಗಳೆಂಬುವು ಪರಿಪರಿ ನೋಡಲುಕೋತಿ ಹಾರಿಕೆಯಳವಟ್ಟು2ಜ್ಞಾನವದಿಲ್ಲವು ಪುಸ್ತಕ ಮನೆಯೊಳುಹೋಳಿಗೆ ತುಪ್ಪದ ಗಬಕುಧ್ಯಾನವಿಲ್ಲವು ಮೌನವಿಲ್ಲವು ಯಮನಕೈಯಿಂದ ದುಬುಕು3ನಿರಿವಿಡಿದುಟ್ಟಿಹ ಪಂಚೆಕಚ್ಚೆಯಧೋತ್ರನಾಮ ವಿಭೂತಿಯ ಬೆಳಕುಪರಮಾನ್ನವ ಸಕ್ಕರೆಯನು ಕಲಸಿನುಂಗುವೆ ಗುಳುಕು ಗುಳುಕು4ಮುಂದೆ ಹೇಳುವನ ಮೆಟ್ಟಿಕೊಂಡುಂಬುದುಇಂತಿದು ನಿನ್ನಯ ಬದುಕುಸುಂದರ ಚಿದಾನಂದ ಸ್ವರೂಪವ ತಿಳಿವುದುಎಂದುಎಂದಿಗೆ ಬಲುಧಡಕ5
--------------
ಚಿದಾನಂದ ಅವಧೂತರು