ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ. ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ 1 ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ 2 ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ 3 ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ 4 ಹೇಸಿ ವಿಷಯ ನಂಬೋದಿಲ್ಲೆ ಸೀಸ ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ 5
--------------
ಐಹೊಳೆ ವೆಂಕಟೇಶ
ನೀಡುವರು ಮತ್ಯಾರಿಲ್ಲ ಪ ಬೇಡದಿರುವ ಸಜ್ಜನರಡಿಗಳ ಕೊಂ- ಡಾಡುತಲಿರು ನೀ ಹಗಲೆಲ್ಲ ಅ.ಪ ಕಾಸಾದರು ಹಿಡಿಕಾಳಾದರು ಹರಿ- ದಾಸರಿಗೋಸುಗ ಕೊಡಲಿಲ್ಲ ಲೇಸು ದೊರೆವುದೆಂದ್ಹಾರಾಡಿದರಾ- ಯಾಸವಲ್ಲದೆ ಫಲವಿಲ್ಲ 1 ನಿನ್ನಂತೆಯೆ ಪರರನು ನೋಡಿ ದಯೆ- ಯನ್ನು ಅವರಲ್ಲಿ ಇಡಲಿಲ್ಲ ಮುನ್ನಿನ ಕರ್ಮವು ಬಿಡದಲ್ಲ 2 ತಿಳಿವಳಿಕೆಯು ಸ್ವಪ್ನದಲಿಲ್ಲ ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು ಎಲೊ ನಿನಗದು ಸ್ವಾಧೀನವಲ್ಲ 3 ವ್ಯಾಪ್ತವಾಗಿ ಹೆಚ್ಚುವದೆಲ್ಲ ಆಪ್ತರು ದಾರಾ ಪುತ್ರಾದ್ಯರು ನಿ- ನ್ನಾದರಿಸುವರೊಬ್ಬರು ಇಲ್ಲ 4 ಕಾಮಕ್ರೋಧದೊಳಗೆ ಮುಳುಗಿ ನೀ ಕಂಡ ಕಂಡದು ಕೋರುವೆಯಲ್ಲ ಕ್ಷಣವಾದರು ನೆನೆ ಭಯವಿಲ್ಲ 5
--------------
ಗುರುರಾಮವಿಠಲ
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1 ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2 ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3 ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4 ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ5
--------------
ಚಿದಾನಂದ ಅವಧೂತರು
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ