ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹಹ ಮರುಳನಾದೆ ಸುಮ್ಮನೆ ಪೂರ್ವ ಮಹಿಮ ಹರಿಯ ಸೇವೆಯನ್ನು ಸಹಿಸಿಕೊಂಡು ಗ್ರಹದೊಳಿರದೆ ಪ. ಇಂದಿರೇಶನಿರವನರಿಯದ ಮೂರ್ಖರಾದ ಮಂದಮತಿಗಳಾದ ಕುಜನರ ಬಂದು ಸೇರಿ ಬುದ್ಧಿಹೀನರೆಂದ ನುಡಿಯ ಕೇಳಿ ಬಹಳ ಮೂರ್ತಿ ಬಿಟ್ಟು 1 ತರಣಿ ತಿಮಿರವಟ್ಟಿಲಿರುವದೆ ಸಿಂಹರಾಜ ಮರಿಯ ಕೂಡೆ ನರಿಯು ಬರುವುದೆ ಮರುಳತನದ ಭಾಗ್ಯವೆಂಬೀ ನರಕ ಪಾತ್ರರಾದ ಜನರು ಪಾದ ಪದ್ಮದಾಸ ಚರಿಯವೆಂದು ತಿಳಿವರುಂಟೆ 2 ನೀರಗುಳ್ಳೆಕಿಂತ ಲಘುತರವಾದ ಸಂಸಾರ ಸಂಬದ್ಧ ಪರಿಸರ ಸೇರಿ ಹಿಂದೆ ನಡೆದ ತಪ್ಪ ನೀರಜಾಕ್ಷ ಕ್ಷಮಿಸಿ ಮಹಾ- ದ್ವಾರದೆಡೆಗೆ ಕರಸಿಕೊಳ್ಳೊ ಭೂರಮೇಶ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗುರುವಾದಿರಾಜ ತವ | ಚರಣಗಳಿಗಭಿನಮಿಪೆದೊರಕಿಸೆನಗ್ಹರಿಪಾದ | ಸರಸಿರುಹ ಗುರುವೇ ಅ.ಪ. ಯತಿ ಕುಲಾಗ್ರಣಿ ದ್ವೈತ | ಮತ ಜನರ ಉದ್ಧಾರಸತತ ನೀ ನೆಸಗುತಲಿ | ಪ್ರತಿರಹಿತ ನೆನಿಸೀ |ಮತ ಗ್ರಂಥ ವಿಸ್ತರಿಸಿ | ಯುಕ್ತಿಗಳ ಬೋಧಿಸುತಹಿತದಿಂದ ಸಜ್ಜನಕೆ | ಗತಿ ತೋರಿ ಮೆರೆದ 1 ಪಾದ ಪೂಜೆಯನುಹವಣೆಗಳ ತಿಳಿಯೊ ನಾ | ದೈವಗತಿಯಂತೋ 2 ಭಾವಿ ಮಾರುತ ನಿಮ್ಮ | ಭಾವ ತಿಳಿವರು ಯಾರುಓವಿ ನಿಮ್ಮಡಿಗಳನು | ಸ್ತವನ ಗೈದೂ |ಗೋವಳರ ಪ್ರೀಯ ಗುರು | ಗೋವಿಂದ ವಿಠ್ಠಲನಭಾವದಲಿ ಕಾಣ್ವಂಥ | ಭಾವ ಕೊಡು ಸಂತ 3
--------------
ಗುರುಗೋವಿಂದವಿಠಲರು
ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ
ತಿಳಿವರು ಮನುಜರು ತಿಳಿದೊಮ್ಮೆ ತಿಳಿಯರು ನಳಿನಾಕ್ಷ ನಾಶರಹಿತನಲ್ಲದಿಲ್ಲವೆಂದು ಪ ಅರ್ಕಜಂಬುಜ ಬಲ್ಲ .................. ಮಾರ್ಕಂಡೆಯ ಮುನಿ ಬಲ್ಲ ಮಹಿ ಬಲ್ಲಳು ಅರ್ಕ ತನುಜ ಬಲ್ಲ ಅಂಬರೀಷ ಬಲ್ಲ ದೇ ವರ್ಕಳವೊಡಿಯ ಮಾಧವನಲ್ಲದಿಲ್ಲವೆಂದು 1 ವಾಯುನಂದನ ಬಲ್ಲವಾ............. ಯತಿ ಬಲ್ಲ ಕರಿ ಬಲ್ಲನೊ ರಾಯ ಧರ್ಮಜ ಬಲ್ಲ ರಾಜ ರಾಜನು ಬಲ್ಲ ಮಾಯಾರೂಪತಾಳಿ ಹರಿಯಲ್ಲದಿಲ್ಲವೆಂದು2 ಗರುಡದೇವನು ಬಲ್ಲ ಗಂಗಾತನಯ ಬಲ್ಲ ಉರಗಾಧಿಪತಿ ಬಲ್ಲ ಉಮೆ ಬಲ್ಲಳು ................ಶರಣರಣ್ಣಪ್ಪ ಪರಮಾತ್ಮ -ಇಂ ದಿರಾಪತಿಯಲ್ಲದಿಲ್ಲವೆಂದು3 ಪಾರಾಶರನು ಬಲ್ಲ ಪ್ರಹ್ಲಾದ ಭಕ್ತ ಬಲ್ಲ ನಾರದಮುನಿ ಬಲ್ಲ ನರಬಲ್ಲನು ವಾರಿಜಸಖ ಬಲ್ಲ ವಶಿಷ್ಠ ತಪಸಿ ಬಲ್ಲ ಧಾರುಣಿಕರ್ತೃ ಶ್ರೀಧರನಲ್ಲದಿಲ್ಲವೆಂದು 4 ಬಲಿಚಕ್ರವರ್ತಿ ಬಲ್ಲ ಭೃಗುಋಷೇಶ್ವರ ಬಲ್ಲ ಕಳಸಸಂಭವ ಬಲ್ಲ.................. ಬಲ್ಲನು ಗಿಳಿಮುಖದವ ಬಲ್ಲ ಗೌತಮ ಮುನಿ ಬಲ್ಲ ಇಳಿಗೆ ಆಧಾರ ಶ್ರೀಕೃಷ್ಣನಲ್ಲದಿಲ್ಲರೆಂದು 5 ಉದಧಿರಾಯನು ಬಲ್ಲ ಉಧ್ಧವ ಯದು ಬಲ್ಲ ವಿಧುಶೇಖರ ಬಲ್ಲ ವಿದುರ ಬಲ್ಲ ಪದುಮನಾಭನೆ ಪರಗತಿಯಲ್ಲದಿಲ್ಲವೆಂದು 6 ಜನಕರಾಜನು ಬಲ್ಲ ಜಾಹ್ನವಿನದಿ ಬಲ್ಲಳು ದನುಜೋತ್ತಮ ಬಲ್ಲ ವಾಲ್ಖ್ಯ ಬಲ್ಲ ಅನುಸಾಲ್ವಪತಿ ಬಲ್ಲ ಅಜಮಿಳನು ಬಲ್ಲ ಜನಸ್ಥಿತಿಲಯ ಜನಾದರ್Àನ ಅಲ್ಲದಿಲ್ಲವೆಂದು7 ಜಮದಗ್ನಿ ಬಲ್ಲ ಜಾತವೇದಸ ಬಲ್ಲ ಸಾಮಾವರ್ತಿ ಬಲ್ಲ ಶಶಿ ಬಲ್ಲನು ಆ ಮಹಾಕಪಿ ಬಲ್ಲ ಅಕ್ರೂರನು ಬಲ್ಲ ರೋಮ ರೋಮ ಬ್ರಹ್ಮಾಂಡ ರಾಮನಲ್ಲದಿಲ್ಲವೆಂದು 8 ಪುಂಡರೀಕ ಬಲ್ಲ ದಾ................... ವಂದಾರವ ಬಲ್ಲ ಸಿರಿ ಬಲ್ಲಳು .............. ಆಶಾ ಶ್ರೀಶ ವಿಜಯವಿಠ್ಠಲೇಶನಲ್ಲದಿಲ್ಲವೆಂದು
--------------
ವಿಜಯದಾಸ
ಶ್ರೀ ವಿಷ್ಣು ತೀರ್ಥರು ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ಪ ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ಬಡವರಂತತಿ ಬಾಯ ಬಿಡುವರಲ್ಲವರು ಅ.ಪ ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ಮುಂಚೆ ತಿಳಿವರು ಈ ಪ್ರಪಂಚದಲ್ಲಿ ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು 1 ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ಅಂಗದಲಿ ಸುರಿವರು ಕಂಗಳೊದಕವ ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ ಮುಂಗೈಯ್ಯ ಮುದ್ರೆಗಳ ಧರಿಸುವರಿವರು 2 ವಾಸುದೇವನ ದಾಸ ದಾಸರಾದೆವೆಂಬೊ ಆಶೆಯಲಿ ಅವನ ಸಹವಾಸ ಬಯಸುವರು ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು 3
--------------
ಅನಂತಾದ್ರೀಶರು