ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣಾದ್ರಿ ಕೃತವಾಸ ಶರಣು ತೋರಯ್ಯ ತವರೂಪ ರವಿಕೋಟಿಭಾಸ ಪ ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ ಮಿನಾಂಕಜನಕ ತವಪದಯುಗಾರ್ಚನೆ ಹೀಗೆ ಜ್ಞಾನ ಪೂರ್ವಕದಿಂದಲೆನಗೆ ದಯದಿ ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ 1 ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ ಆ ಸಮರದೊಳಗೊಲಿವನೆಂದೆ ನಿನಗೆ ಪಾಸಟಿ ಯಾರು ನೀರಜಭವನ ತಂದೆ 2 ಸುರರು ನಿನ್ನ ಮಹಿಮಾತಿಶಯ ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ ಮಾನವ ತಿಳಿವನೆನೋ ತಿರುಮಲರಾಯ ಖಗÀರಾಜಗಮನ ಕಮನೀಯ ಪಾಹಿ ಜಗನ್ನಾಥವಿಠಲ ವಿಗತಾಘ ಕವಿಗೇಯ 3
--------------
ಜಗನ್ನಾಥದಾಸರು
ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ ಅರ್ಕನಾ ತೇಜವನು ಗೊಗೆಯರಿದಪುದೇ ಪ ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು ಮಾನವ ನಾನು ಪರಮಾತ್ಮನೆ ಏನಾದರೂ ಪೇಳಿ ಮೋಸಮಾಳ್ಪನು ಎಂದು ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ 1 ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ 2 ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ ಸ್ವಾನುಭವಸಂವೇದ್ಯ ಕೇವಲಾನಂದಾ ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ ತಾನು ತನ್ನನು ಬೈದು ದೂರಿಕೊಂಡಂತೆ 3 ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ ಜಗದಾಚೆಗಿಹ ಪರಮಶಾಂತಿಯರಿಯುವನೇ ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ ಅಘನಾಶಶಂಕರನೆ ಅನ್ಯರರಿಯುವರೇ 4
--------------
ಶಂಕರಭಟ್ಟ ಅಗ್ನಿಹೋತ್ರಿ