ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ಭಾರತಿದೇವಿಯೆ ನಿನ್ನನು ಭಾವದಲಿ ಭಜಿಸುವೆ ಪ್ರಬಲಿಸಮ್ಮಾ ಪ ಮಂದ ಬುದ್ದಿಯಿಂದನಾ ಬಲುಮಾನ ಹೀನನಾಗಿ ಬಾಳಿದೆ ಕೋಮಾಲಾಂಗಿಯೆ 1 ಹತ್ತು ಎಂಟು ಅಂತರದಿ ಜಿಹ್ವದಿ ತಿಳಿವಂತೆನ್ನ ಮಾಡಮ್ಮಾ ಸತ್ಯ ವಾಕ್ಯ ಪ್ರವೀಣೆ ನೀನು ಸಾರುವೆನು ನಾನು 2 ಫಾಲನೇತ್ರಾದಿಗಳಿಲ್ಲಾ ಪರಮ ಮಂಗಳತೋರುವಿ ಬಾಲರಾಮ ಪದಾಬ್ಜ ಭೃಂಗನ ಪಟ್ಟದರಸಿಯೆ 3 ಭಕ್ತಿಯಲಿ ನೀನಿತ್ತರುಂಟು ಭಾದ್ಯರಿದಕಾರು ಕಾಣೆನು ಮುಕ್ತಿ ಮಾರ್ಗವ ತೋರಿಸೆನ್ನನು ಮುಕ್ತನೆನಿಸಮ್ಮಾ 4 ಭೂಮಿಗಧಿಕ ಹೆನ್ನೆಪುರ ಹೆನ್ನೆ ವಿಠಲನ ಪಾದಪದ್ಮವ ಪ್ರೇಮದಿಂದಲಿ ಹೃದಯದಲಿ ಇಟ್ಟು ಪ್ರೀತಿ ತೋರಮ್ಮಾ 5
--------------
ಹೆನ್ನೆರಂಗದಾಸರು
ಲಕ್ಷ್ಮೀದೇವಿ ನಮಿಸುವೆ ನಮ್ಮಮ್ಮ ಅಮಿತ ಮಹಿಮಳೇ ಆದಿ ಲಕುಮಿಯೇ ಅನುದಿನ ಸಲಹಮ್ಮ 1 ಅಜತ ನಾಮಕನೆ ಆದಿ ದೈವವೆಂದು ತ್ರಿಜಗಮ ತಿಳಿವಂತೆ ನಿಜ ಪುರುಷನಿಗೆ ವನಮಾಲೆಯ ಹಾಕಿ ಭಜಿಸಿದೆ ಬಲವಂತೆ 2 ಕಮಲಜ ಮೊದಲಾದ ಸುಮನಸರಿಂದಲಿ ಕ್ರಮದಿ ಪೂಜೆಗೊಂಬೆ ಸಮನಿಲ್ಲದ ಸೌಭಾಗ್ಯವ ಕೊಡು ನೀ ಮಹ ಜಗದಂಬೆ 3 ಕಮಲವಾರಿಧೆ ಕಮಲಲೋಚನೆ ಕರವೀರ ಪುರಧೀರೆ ವರ ಕದರುಂಡಲಗಿ ಹನುಮಯ್ಯನೊಡೆಯನಉರದೊಳು ಸ್ಥಿರವಾಸೆ 4
--------------
ಕದರುಂಡಲಗಿ ಹನುಮಯ್ಯ
ಲೋಕನೀತಿಯ ಹಾಡುಗಳು ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ. ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1 ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2 ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3
--------------
ಮೋಹನದಾಸರು