ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ ನಿತ್ಯ ಅನುದಿನಾ ಪಠಿಸುತಿರುವಾತಾ ಮುಕುತಿಪಂಥ ಪಡೆವ ನಿರುತಾ ಇದೇ ದೇಹದಲಿ ತಾನಿರುತಾ 1 ವಿರಾಗಿಯಾಗಿ ಮನದಲ್ಲಿ ಪರಾನಂದಾತ್ಮರೂಪವನು ತಿಳಿಯುವಾ ಚೈತನ್ಯರೂಪವನು ಇದೇ ಗೀತಾಪರಣಫಲ ತಾ ಪ್ರಶಾಂತಾಕಾಮನಾಗಿರುತಾ 2 ನಿಧಾನಾ ನೊಂದಮನನಿಗಿದೆ ಪ್ರಧಾನಾ ಶಾಸ್ತ್ರ ಸಂಚಯ ದೇ ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ ಸದಾ ಧ್ಯಾನಾ ಇದೇ ಮನನಾ ಮನುಜನೇ ಇದುವೆ ಸುಖತಾಣಾ 3 ತಿಳಿ ನೀ ಗೀತೆಯಾ ಬೋಧಾ ಅಳಿ ನೀ ಜೀವಪರ ಬೇಧಾ ತಿಳಿ ನೀ ಪರಮಾತ್ಮಪದ ಬೋಧಾ ಪಡೆವ ಮೋದಾ ಶ್ರವಣದಿಂದಾ ಇದೇ ಶ್ರೀ ಶಂಕರನ ಬೋಧಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಸದ್ಗುರು ಭಕ್ತಿ ಲೇಸು ಲೇಸು ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಧ್ರುವ ಒಂದೆ ಸುಪಥ ಲೇಸು ಹೊಂದಿ ಬಾಳುವದು ಲೇಸು ಪಾದ ಕಾಂಬುವದೆ ಲೇಸು 1 ನಡೆ ನುಡಿ ಒಂದೆ ಲೇಸು ದೃಢಭಾವನೆಯು ಲೇಸು ಪಿಡಿಯುವನು ಸಂಧಾನಧ್ಯಾತ್ಮದ ಲೇಸು 2 ಗುರುದೈವೆಂಬುದೆ ಲೇಸು ಅರಿತು ಬೆರೆವುದು ಲೇಸು ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು 3 ಒಳಮುಖನಾಗುವದೆ ಲೇಸು ತಿಳಿಯುವಾತನ ಮನ ಲೇಸು ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು 4 ತನ್ನ ತಾ ತಿಳಿವದೆ ಲೇಸು ಉನ್ಮನವಾಗುದೆ ಲೇಸು ಪಾದ ನಂಬುದೆ ಲೇಸು 5 ಅರ್ತರೆ ಗುರುವಾಕ್ಯ ಲೇಸು ಬೆರ್ತರೆ ಗುರುಪಾದ ಲೇಸು ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು 6 ಗುರುಶರಣ್ಹೋಗುದೇ ಲೇಸು ಕರುಣ ಪಡೆವದೆ ಲೇಸು ತರಳ ಮಹಿಪತಿಗಿದೆ ಸುಖವೆ ಲೇಸು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು