ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಧ್ರುವ ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ 1 ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ 2 ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಸ್ವಾಮಿ ತಪ್ಪಾರಿಸುವರೆ ನೀ ನಮ್ಮ ಸುಮ್ಮನುಂಡಾಡುವ ಬಾಲಕ ನಿಮ್ಮ ಅಮ್ಮ ಅಪ್ಪನೆಂದಾಡುದೆ ನಾ ತಮ್ಮ ಕಂ ಕಿಮೆಂದಾಡಕರಿಯೆ ನಾವಮ್ಮ 1 ಓದಿ ತಿಳಿಯಲರಿಯೆ ಶಾಸ್ತ್ರವೇದ ಭೇದಿಸಲರಿಯೆ ನಾ ನಿಮ್ಮ ಬೋಧ ಹಾದಿ ತಿಳಿಯುದೆ ಬಲು ತಾ ಅಗಾಧ ಇದೆ ಪಾಲಿಸಬೇಕಯ್ಯ ಸುಪ್ರಸಾದ2 ಭಕ್ತಿ ಮಾಡಲರಿಯೆ ನಿಮ್ಮ ದೃಢ ಯುಕ್ತಿ ತಿಳಿಯಲರಿಯದೆ ನಾ ಮೂಢ ಶಕ್ತಿ ಸಾಮಥ್ರ್ಯನ್ನೊಳು ನೋಡಬ್ಯಾಡ ಯುಕ್ತಾಯುಕ್ತ ನೋಡದಿರು ಎನ್ನ ಕೂಡ3 ಪತಿತಪಾವನನೆಂಬ ನಿನ್ನ ಬಿರುದು ಎತ್ತ ಓಡಿಹೋಗಬಲ್ಲದದು ಚಿತ್ತ ನೆಲೆಗೊಂಡು ಬಂದು ನಿಮ್ಮ ಬೆರೆದು ಮತ್ತ ಒರೆದು ನೋಡುವದಿದೆ ಅರೆದು 4 ಶರಣ ಹೊಕ್ಕ ಮ್ಯಾಲೆಲ್ಲಿಹುದೈಯ ಮರಣ ಚರಣಕಮಲಕ್ಕೊಪ್ಪಿಸಿಹೆ ನಾ ಹರುಣ ಅರಿತು ಮಾಡುವ ನಿಮ್ಮ ದಯ ಕರುಣ ತರಳ ಮಹಿಪತಿ ನಿಮ್ಮಣುಗ ಪೂರ್ಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಾಚೀನ ಕರ್ಮವು ಬಿಡಲರಿಯದುಯೋಚನೆಯ ಮಾಡಿ ನೀ ಬಳಲಬೇಡ ಪ.ಮುನ್ನಮಾಡಿದಕರ್ಮ ಬೆನ್ನಟ್ಟಿ ಬರುತಿರಲುತನ್ನಿಂದ ತಾನೆ ತಿಳಿಯಲರಿಯದೆಇನ್ನು ದೇಹವನು ಆಶ್ರಯಿಸಿ ಫಲವೇನುಉನ್ನತ ಹರುಷದಲಿ ಮನದಿ ಯೋಚಿಸುವ 1ಲೋಕಾದಿ ಲೋಕಗಳ ತಿರುಗುವರವಿ ರಥಕೆಏಕಗಾಲಿಗೆ ಏಳು ಕುದುರೆಕಟ್ಟಿಆಕಾಶ ಮಾರ್ಗದಲಿ ತಿರುಗುವ ಅರುಣನಿಗೆಬೇಕಾದ ಚರಣಗಳ ಕೊಡಲಿಲ್ಲ ಹರಿಯು 2ಸೇತುವೆಯುಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯನೆ ಮಾಡಿ ರಾವಣನ ಗೆದ್ದುಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು 3ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನುಹೊತ್ತುಕೊಂಡು ಇದ್ದ ಜಗವರಿಯಲುಅತ್ಯಂತ ಸೇವಕನೆಂದು ಮೂಗಿನಡೊಂಕುಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ 4ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದುಭ್ರಾಂತನಾಗದೆ ಬಯಕೆಗಳನುಜರಿದುಶಾಂತ ಮೂರುತಿಸಿರಿ ಪುರಂದರವಿಠಲನ
--------------
ಪುರಂದರದಾಸರು